ಕನ್ನಡಪ್ರಭ ವಾರ್ತೆ, ಹನೂರು
ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು, ಮಹಿಳೆಯರು , ಮಕ್ಕಳು,ಅಹೋರಾತ್ರಿ ಧರಣಿ ನಡೆಸುತ್ತಿದ್ದು 80 ದಿನ ಕಳೆದರೂ ಈ ಭಾಗದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಸದರು, ಶಾಸಕರು, ಜಿಲ್ಲಾಡಳಿತ ಮತ್ತು ಸರ್ಕಾರ ವಿಫಲವಾಗಿವೆ ಎಂದು ಧರಣಿ ನಿರತರು ಆರೋಪಿಸಿ ಜೀವ ಜಲ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿರುವ ಬಗ್ಗೆ ಕಳೆದ 80 ದಿನಗಳಿಂದ ನಡೆಯುತ್ತಿರುವ ಧರಣಿ ನಿರತ ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದೆ .
ಧರಣಿಯಲ್ಲಿ ಆರ್ ಅರ್ಪುದರಾಜ್, ಸೆಲ್ವ ರಾಜ್,ಸೂಸೈರಾಜ್, ಸವರಿ, ಫ್ರಾನ್ಸಿಸ್, ಇಸಾಕ್, ಲೂರ್ದುಸ್ವಾಮಿ, ಪೀಟರ್ ಸೇಸುರಾಜ್ ಇಮ್ಮನ್ ವೆಲ್ ಡೇವಿಡ್ ಹಿರಿಯ ನಾಯಕ ಡಾಲಿ ಷಣ್ಮುಗಂ ಚಿನ್ನ ದೊರೆ ಜೋಸೆಫ್ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.