ಸ್ವಾಮಿವಿವೇಕಾನಂದ, ಸುಭಾಷ್‌ಚಂದ್ರ ಬೋಸ್ ಜಯಂತಿ ಮತ್ತು ಭೂಮಿಕಾ ಎಂಟರ್ ಪ್ರೈಸಸ್ ವಾರ್ಷಿಕೋತ್ಸವ
ಅರಣ್ಯ ಸಂಪತ್ತು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಹೊಣೆಯಾಗಬೇಕು. ಆಸ್ಪತ್ರೆಗಳಲ್ಲಿ ಲಭಿಸುವ ಕೃತಕ ಆಮ್ಲ ಜನಕಕ್ಕಿಂತ, ನೈಸರ್ಗಿಕವಾಗಿ ಮರಗಳಿಂದ ಲಭಿಸುವ ಆಮ್ಲ ಜನಕವೇ ಜೀವಸಂಕುಲಕ್ಕೆ ಶ್ರೇಷ್ಠ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಹೇಳಿದರು. ನಗರದ ರತ್ನಗಿರಿ ಬೋರೆಯಲ್ಲಿ ಅಭ್ಯುಯ ಸಹಯೋಗದಲ್ಲಿ ಆಯೋಜಿಸಿದ್ಧ ಸ್ವಾಮಿವಿವೇಕಾನಂದ, ಸುಭಾಷ್‌ಚಂದ್ರ ಬೋಸ್ ಜಯಂತಿ ಮತ್ತು ಭೂಮಿಕಾ ಎಂಟರ್ ಪ್ರೈಸಸ್ ವಾರ್ಷಿಕೋತ್ಸವ ಪ್ರಯುಕ್ತ ಮಕ್ಕಳಿಗೆ ಆಯೋಜಿಸಿದ್ಧ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬಾಲ್ಯದಿಂದಲೇ ಮಕ್ಕಳಿಗೆ ಸಸಿ ಪೋಷಣಾ ಕಲೆಯನ್ನು ಪಾಲಕರ ರೂಢಿಸಬೇಕು. ಪರಿಸರ ಪ್ರೇಮ ಎಳೆವಯಸ್ಸಿನಿಂದ ಕರಗತ ಮಾಡಿಕೊಂಡರೆ ಭವಿಷ್ಯದಲ್ಲಿ ಸಂಪದ್ಬರಿತ ಪ್ರಕೃತಿ ದೇವತೆಯನ್ನು ಉಳಿಸಿಕೊಳ್ಳ ಲು ಸಾಧ್ಯ. ಈ ಬಗ್ಗೆ ಪಾಲಕರು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.ನಗರಸಭೆ ಮಾಜಿ ಉಪಾಧ್ಯಕ್ಷ ಸುಧೀರ್ ಅವರು ಮಾತನಾಡಿ ಅರಣ್ಯ ಪ್ರಕೃತಿಯ ಅತ್ಯಂತ ಪ್ರ ಮುಖವಾದ ಭಾಗ. ಅಗಾಧ ಸಸ್ಯ ಸಂಪತ್ತು. ಸಾವಿರಾರು ಬಗೆಯ ನೈಸರ್ಗಿಕ ಮರಗಳು ತಾಣವಾಗಿದೆ. ಈ ತಾಣದಲ್ಲಿ ವನ್ಯಜೀವಿಗಳಿಗೆ ಪ್ರಮುಖ ಆಶ್ರಯ ಬೀಡಾಗಿರುವ ಅರಣ್ಯವನ್ನು ನಶಿಸದಂತೆ ಕಾಪಾಡಬೇಕು ಎಂದು ಹೇಳಿದರು.ಮನುಷ್ಯರು ಅರಣ್ಯದ ಮಹತ್ವ ಅರಿಯದೇ ಅದನ್ನು ನಾಶಗೊಳಿಸಿ ದೊಡ್ಡ ಕಟ್ಟಡ, ಕಾರ್ಖಾನೆ ನಿರ್ಮಿಸಿಕೊಳ್ಳುವ ಮೂಲಕ ಪ್ರಕೃತಿಯನ್ನು ಹಾಳು ಮಾಡಲಾಗುತ್ತಿದೆ. ಪ್ರಸ್ತುತ ಭೂಮಿಯಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುವುದು ಅತಿಹೆಚ್ಚು ಮನುಷ್ಯ ದುಕೃತ್ಯಗಳಿಂದ ಎಂದು ಹೇಳಿದರು.ಭೂಮಿಕ ಟಿ.ವಿ. ಸಂಸ್ಥಾಪಕ ಅನಿಲ್ ಆನಂದ್ ಮಾತನಾಡಿ ರಾಷ್ಟ್ರದ ಮಹಾನೀಯರ ಜಯಂತಿ ಪ್ರ ಯುಕ್ತ ಇಂದು ಶಾಲಾ ಮಕ್ಕಳಿಗೆ ಪರಿಸರದ ಅರಿವು ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ, ಪದಬಂಧಗಳನ್ನು ಹಮ್ಮಿ ಕೊಂಡಿದ್ದು ಸುಮಾರು ನಗರದಿಂದ ೪೦೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಅತ್ಯಂತ ಯಶಸ್ವಿಗೊಳಿಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಅರಣ್ಯ ಸಂಚಾರಿದಳದ ಅಧಿಕಾರಿ ಆಲೇಶ್, ರಾ ಕೆಫೆ ಮಾಲೀಕ ನಾಗಚೈತ್ರ, ಜೇಸಿ ಐ ವಲಯರಾಧ್ಯಕ್ಷ ವಿಜಯ್‌ಕುಮಾರ್, ಬ್ರಹ್ಮಾಕುಮಾರೀಸ್ ಸಂಸ್ಥೆ ಸದಸ್ಯೆ ಮಹಾಲಕ್ಷ್ಮೀ, ಜೇಸಿಐ ಚಿಕ್ಕ ಮಗಳೂರು ಮಲ್ನಾಡ್ ಅಧ್ಯಕ್ಷ ತಿಲಕ್ ಮತ್ತಿತರರು ಉಪಸ್ಥಿತರಿದ್ದರು.