ಎರಡನೇ ದಿನವೂ ಮುಂದುವರಿದ ಕಾಂಗ್ರೆಸ್‌ ಕಾರ್ಯಕರ್ತರ ಉದ್ಯಾನವನ ಸ್ವಚ್ಛತಾ ಕಾರ್ಯ

KannadaprabhaNewsNetwork |  
Published : Jan 19, 2025, 02:16 AM IST
18ಕೆಎಂಎನ್ ಡಿ18 | Kannada Prabha

ಸಾರಾಂಶ

ಪರಿಸರ ಸೌಂದರ್ಯದ ಪ್ರತಿ ಬಿಂಬದಂತಿದ್ದ ದೊಡ್ಡಕೆರೆ ಐಲೆಂಡ್ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸುವ ಮೂಲಕ ಶ್ರಮದಾನವನ್ನು ಅಂತಿಮಗೊಳಿಸಿದ್ದು, ವಾಕಿಂಗ್ ಟ್ರ್ಯಾಕ್ ನಲ್ಲಿ ಸಾರ್ವಜನಿಕರು ವಾಯು ವಿಹಾರವನ್ನು ಆರಂಭಿಸುವ ಜೊತೆಗೆ ಶ್ರಮ ಜೀವಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನವನದ ಸ್ವಚ್ಛತಾ ಕಾರ್ಯ ಎರಡನೇ ದಿನವೂ ಮುಂದುವರೆದು ಅಂತಿಮಗೊಳಿಸಲಾಯಿತು.

ಪರಿಸರ ಸೌಂದರ್ಯದ ಪ್ರತಿ ಬಿಂಬದಂತಿದ್ದ ದೊಡ್ಡಕೆರೆ ಐಲೆಂಡ್ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸುವ ಮೂಲಕ ಶ್ರಮದಾನವನ್ನು ಅಂತಿಮಗೊಳಿಸಿದ್ದು, ವಾಕಿಂಗ್ ಟ್ರ್ಯಾಕ್ ನಲ್ಲಿ ಸಾರ್ವಜನಿಕರು ವಾಯು ವಿಹಾರವನ್ನು ಆರಂಭಿಸುವ ಜೊತೆಗೆ ಶ್ರಮ ಜೀವಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮನ್ಮುಲ್ ನಿರ್ದೇಶಕ ಆರ್.ಎನ್. ವಿಶ್ವಾಸ್ ಮಾತನಾಡಿ, ದೊಡ್ಡಕೆರೆ ಸುತ್ತಲು ನಿರ್ಮಿಸಿರುವ ವಾಕಿಂಗ್‌ ಟ್ರ್ಯಾಕ್ ಮಾನಸಿಕ ನೆಮ್ಮದಿ ಪಡೆಯಲು ಸಹಕಾರಿಯಾಗಿದೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ದೂರದೃಷ್ಟಿ ಚಿಂತನೆಯಿಂದ ದೊಡ್ಡಕೆರೆಯನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಐಲೆಂಡ್ ಹಾಗೂ ಉದ್ಯಾನವನವನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದರು.

ಕಳೆದ ನಾಲ್ಕೈಂದು ವರ್ಷಗಳಿಂದ ಸರಿಯಾದ ನಿರ್ವಹಣೆ ಕೊರತೆಯಿಂದ ವಾಕಿಂಗ್‌ ಟ್ರ್ಯಾಕ್ ಸುತ್ತಲು ಗಿಡಗಂಟೆಗಳು ಬೆಳೆದು ಹಾವು, ಚೇಳುಗಳ ಭಯದಲ್ಲಿ ಸಾರ್ವಜನಿಕರು ವಾಕಿಂಗ್ ಬರುವುದನ್ನೇ ನಿಲ್ಲಿಸಿದ್ದರು ಎಂದರು.

ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಸಲಹೆ ಮತ್ತು ಸಹಕಾರದೊಂದಿಗೆ ಶ್ರಮದಾನ ಆರಂಭಿಸಲಾಯಿತು. ಪ್ರತಿದಿನ ರಾಜಕಾರಣದಲ್ಲಿ ಕಾಲ ಕಳೆಯುತ್ತಿದ್ದವರೂ ಎರಡು ದಿನದ ಶ್ರಮದಾನ ಮಾಡಿ ವಾಯು ವಿಹಾರಕ್ಕೆ ಅನುವು ಮಾಡಿಕೊಟ್ಟ ವೇಳೆ ಹಿರಿಯ ಜೀವಗಳಿಂದ ಬಂದ ಪ್ರಶಂಸನೀಯ ಮಾತುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಜಕ್ಕೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮ ವ್ಯರ್ಥವಾಗಲ್ಲಿಲ್ಲ ಎನ್ನುವ ತೃಪ್ತಿ ಪ್ರತಿಯೊಬ್ಬರಲ್ಲಿಯೂ ಇದೆ.

ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಮುಖಂಡರಾದ ದ್ಯಾಪೇಗೌಡ, ಪುಟ್ಟಸ್ವಾಮಿ,ಮ ಕೃಷ್ಣಮೂರ್ತಿ, ಮಾರ್ಕಾಲು ಮಾಧು, ಕೃಷ್ಣ, ಚೌಡಪ್ಪ, ಶಿವಸ್ವಾಮಿ, ಕಿರಣ್‌ಶಂಕರ್, ಆನಂದ್, ಸಂತೋಷ್, ರವೀಂದ್ರ, ವೆಂಕಟೇಶ್, ಶಶಿ, ಶಿವಕುಮಾರ್, ಶಿವರಾಜ್, ವೇದಮೂರ್ತಿ, ಸುರೇಶ್, ರೋಹಿತ್‌ಗೌಡ, ರವಿ, ಚೇತನ್, ಬಸವರಾಜು, ಮುದ್ದುರಾಜ್, ನಾಗರಾಜು ಸೇರಿದಂತೆ ಇತರರು ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ