ಡಾ‌.ಎಂ.ಮಹದೇವಪ್ಪ ಕೃಷಿ ಕವಿ---

KannadaprabhaNewsNetwork |  
Published : Mar 15, 2026, 01:15 AM IST
13 | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಖ್ಯಾತಿಯ ‘ಇಂಟಾನ್ ಸೇರಿ 9 ತಳಿಗಳು ಹಾಗೂ ದೇಶದ ಮೊದಲ ಹೈಬ್ರಿಡ್ ಭತ್ತದ ಜನಕ

-

14ಎಂವೈಎಸ್‌ 13 - ಕೆಂದಾವರೆ ಮಹದೇವಪ್ಪ ಸೇವಾ ಟ್ರಸ್ಟ್‌ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕೃಷಿ ಋಷಿ ನಡೆದು ಬಂದ ದಾರಿ ಕೃತಿಯನ್ನು ಹಿರಿಯ ವಿದ್ವಾಂಸ ಡಾ.ಗೊ.ರು. ಚನ್ನಬಸಪ್ಪ ಬಿಡುಗಡೆಗೊಳಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಎಲ್.ಎಸ್‌. ಶಶಿಧರ, ವಿಶ್ರಾಂತ ಕುಲಪತಿ ಡಾ.ಎಂ.ಎಸ್‌. ಶೀಲವಂತರ್, ಹಿರಿಯ ಸಾಹಿತಿ ಕೆ.ಸಿ. ಶಿವಪ್ಪ, ಪ್ರಕಾಶ್‌ ಚಿಕ್ಕಪಾಳ್ಯ ಮೊದಲಾದವರು ಇದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಮಹಾಕವಿ ಕುವೆಂಪು ಅವರು ರಸಋಷಿಯಾದರೆ, ಕೃಷಿ ಕೇತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ಮಹದೇವಪ್ಪನವರು ‘ಕೃಷಿ ಕವಿ ಎಂದರೆ ತಪ್ಪಾಗಲಾರದು ಎಂದು ನಾಡೋಜ ಡಾ.ಗೊ.ರು. ಚನ್ನಬಸಪ್ಪ ಬಣ್ಣಿಸಿದರು.ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಕೆಂದಾವರೆ ಮಹದೇವಪ್ಪ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಸ್ಮಯ ಬುಕ್‌ ಹೌಸ್ ಹೊರತಂದಿರುವ ಪದ್ಮಭೂಷಣ ಡಾ.ಎಂ. ಮಹದೇವಪ್ಪನವರ ಜೀವನಾಧರಿತ ‘ಕೃಷಿಋಷಿ ನಡೆದು ಬಂದ ದಾರಿ ಪುಸ್ತಕವನ್ನು ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಡಾ.ಎಂ.ಮಹದೇವಪ್ಪ ಅವರು, ಅಂತಾರಾಷ್ಟ್ರೀಯ ಖ್ಯಾತಿಯ ‘ಇಂಟಾನ್ ಸೇರಿ 9 ತಳಿಗಳು ಹಾಗೂ ದೇಶದ ಮೊದಲ ಹೈಬ್ರಿಡ್ ಭತ್ತದ ಜನಕ ಎಂದು ಗುರುತಿಸಲಾಗಿದೆ. ಇವರ ಸಾಧನೆಯನ್ನು ಗುರುತಿಸಿರುವ ಭಾರತ ಸರ್ಕಾರ 2005ರಲ್ಲಿ ಪದ್ಮಶ್ರೀ, 2014ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ಇವರ ಮಾರ್ಗದರ್ಶನದಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡು ಪಿಎಚ್‌.ಡಿ ಪದವಿ ಪಡೆದುಕೊಂಡಿದ್ದಾರೆ ಎಂದರು.ಕೃಷಿ ಋಷಿ ಅಂತಃಸಾಕ್ಷಿಯ ಗ್ರಂಥವಾಗಿದ್ದು, ಮಹದೇವಪ್ಪ ಅವರು ಪ್ರಯಾಣಿಸಿದ ಹಾದಿಯ ಕುರಿತು ದಾಖಲೆ ರೂಪದಲ್ಲಿ ಈ ಪುಸ್ತಕ ಪ್ರಕಟವಾಗಿದೆ. ಕೃತಿಯ ಶೀರ್ಷಿಕೆ ಮಹದೇವಪ್ಪನವರಿಗೆ ತುಂಬಾ ಅನ್ವರ್ಥವಾಗುತ್ತದೆ. ಅಲ್ಲದೆ, ಹೆಚ್ಚು ಇಳುವರಿ ಕೊಡುವ ಭತ್ತದ ಹೊಸತಳಿಗಳನ್ನು ಆವಿಷ್ಕರಿಸುವ ಮೂಲಕ ರೈತರ ಮುಖದಲ್ಲಿ ಸಂತಸ ಮೂಡುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲಿಸುತ್ತದೆ. ಎರಡು ಅವಧಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೆಲಸ ನಿರ್ವಹಿಸಿದ್ದಾರೆ ಎಂದರು.ನಿವೃತ್ತ ನ್ಯಾಯಾಮೂರ್ತಿ ವಿ. ರಾಮ ಸುಬ್ರಮಣಿಯನ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಅನ್ನಕ್ಕೆ ಅತ್ಯುನ್ನುತ ಸ್ಥಾನ ನೀಡಲಾಗಿದೆ. ಇದು ನಮ್ಮ ದೇಶದ ಸಂಸ್ಕೃತಿಯಾಗಿದೆ. ಕೃತಿಯಲ್ಲಿ ಕೃಷಿಯೊಂದಿಗೆ ಸಾಗಿಬಂದ ಹಾದಿಯ ಚಿತ್ರಣ ಕಟ್ಟಿಕೊಡುವುದರ ಜೊತೆಗೆ ಮಹದೇವಪ್ಪನವರ ಶ್ರೇಷ್ಠ ವ್ಯಕ್ತಿತ್ವ ಈ ಪುಸ್ತಕದಲ್ಲಿ ಗುರುತಿಸಲಾಗಿದೆ. ಭಾರತ ಮಾತ್ರವಲ್ಲದೆ ಜಗತ್ತಿನ ಪ್ರತಿ ದೇಶವು ಕೃಷಿಯನ್ನು ಅವಲಂಬಿಸಿವೆ. ಆಹಾರ ಬೆಳೆಯುವುದು ಆಯಾಯ ಅಲ್ಲಿನ ಜನರ ಬದುಕಿನ ವಿಷಯವಾಗಿದೆ ಎಂದು ಹೇಳಿದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಭತ್ತದ ತಳಿಯ ಸಂಶೋಧನೆ ನಡೆಸಿ ರೈತರಿಗೆ ಉಪಕಾರಿಯಾಗಿದ್ದರು. ವಿಷಯುಕ್ತ ಪಾರ್ಥೇನಿಯಂ ಸಸ್ಯಕ್ಕೆ ಜೈವಿಕ ಪ್ರತಿರೋಧ ಒಡ್ಡುವಂಥಹ ಸಸ್ಯಗಳನ್ನು ಬೆಳೆಸಬೇಕೆಂಬ ಅವರ ಯೋಜನೆ ದೂರದರ್ಶಿತ್ವದಿಂದ ಕೂಡಿತ್ತು. ಅದರಲ್ಲಿ ಯಶಸ್ವಿಯೂ ಆಗಿದ್ದರು ಎಂದು ಶ್ರೀಗಳು ಸ್ಮರಿಸಿದರು.ಕೃತಿ ಬಿಡುಗಡೆಗೂ ಮುನ್ನ ಪ್ರಕೃತಿ ನಿಯಮಗಳು ಮತ್ತು ಸುಸ್ಥಿರ ಕೃಷಿ ವಿಷಯ ಕುರಿತು ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಎಲ್.ಎಸ್. ಶಶಿಧರ್ ಉಪನ್ಯಾಸ ನೀಡಿದರು. ಸಾಹಿತಿ ಕೆ.ಸಿ. ಶಿವಪ್ಪ, ವಿಶ್ರಾಂತ ಕುಲಪತಿ ಎಂ.ಎನ್. ಶೀಲಾವಂತರ್, ವಿಸ್ಮಯ ಬುಕ್‌ ಹೌಸ್‌ ನ ಪ್ರಕಾಶ್ ಚಿಕ್ಕಪಾಳ್ಯ, ಪ್ರಾಂಶುಪಾಲ ರೇಚಣ್ಣ, ಟ್ರಸ್ಟ್‌ ನ ಮಮತಾ ಶೇಖರ್, ಚಂದ್ರಶೇಖರ್ ಇದ್ದರು. ಈ ವೇಳೆ ಡಾ.ಎಂ.ಮಹದೇವಪ್ಪ ಒಡನಾಡಿಗಳಾದ ಡಾ. ಪ್ರತಿಭಾ ಪೆರೇರಾ, ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ, ವಿಜ್ಞಾನ ವಿವಿ, ಪ್ರೊ.ಆರ್.ಎನ್. ಶ್ರೀನಿವಾಸ ಗೌಡ, ವಿಶ್ರಾಮತಿ ಕುಲಪತಿಗಳಾದ ಪ್ರೊ.ಎಸ್.ಚಂದ್ರಶೇಖರ್ ಶೆಟ್ಟಿ, ಡಾ.ಆರ್.ಸಿ. ಜಗದೀಶ, ಡಾ.ಕೆ.ಪಿ.ವಿಶ್ವನಾಥ್, ಡಾ.ಆರ್. ಚಂದ್ರಶೇಖರ, ಬೆಟ್ಟಸ್ವಾಮಿ ಮೊದಲಾದವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿ: ತಪ್ಪಿದ ಭಾರೀ ದುರಂತ
ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು