ಶಸ್ತ್ರಚಿಕಿತ್ಸೆ ಮಾಡಿದ ದಿನವೇ ರೋಗಿ ನಡಿಗೆ!

KannadaprabhaNewsNetwork |  
Published : Jul 21, 2026, 03:45 AM IST
ಪೊಟೋ: 20ಎಸ್‌ಎಂಜಿಕೆಪಿ07 | Kannada Prabha

ಸಾರಾಂಶ

ಶಿವಮೊಗ್ಗ ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಜನತೆಯ ನಂಬಿಕಸ್ಥ ಆರೋಗ್ಯ ಸಂಸ್ಥೆಯಾಗಿರುವ ಶಿವಮೊಗ್ಗದ ‘ನಂಜಪ್ಪ ಲೈಫ್ ಕೇರ್’ ಆಸ್ಪತ್ರೆಯು ವೈದ್ಯಕೀಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಹೆಮ್ಮೆಯ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಜನತೆಯ ನಂಬಿಕಸ್ಥ ಆರೋಗ್ಯ ಸಂಸ್ಥೆಯಾಗಿರುವ ಶಿವಮೊಗ್ಗದ ‘ನಂಜಪ್ಪ ಲೈಫ್ ಕೇರ್’ ಆಸ್ಪತ್ರೆಯು ವೈದ್ಯಕೀಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಹೆಮ್ಮೆಯ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ.

ಜು.17 ರಂದು ಶಿವಮೊಗ್ಗದಲ್ಲೇ ಪ್ರಥಮ ಬಾರಿಗೆ ಅಮೆರಿಕಾದ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನದ ನೆರವಿನೊಂದಿಗೆ 57 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಮೊಣಕಾಲು ಚಿಪ್ಪು ಮರುಜೋಡಣಾ (Robotic Knee Replacement Surgery) ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು.ಪ್ರಖ್ಯಾತ ಆರ್ಥೋಪೆಡಿಕ್ ಸರ್ಜನ್ ಡಾ. ವಿನ್ಸೆಂಟ್ ಮೆಕ್‌ಮೋಹನ್ ಹಾಗೂ ಡಾ. ಪ್ರೇಮರಾಜ್ ಅವರ ಜಂಟಿ ಆಶ್ರಯ ಮತ್ತು ಪರಿಣಿತರ ನೇತೃತ್ವದಲ್ಲಿ ಈ ಐತಿಹಾಸಿಕ ಶಸ್ತ್ರಚಿಕಿತ್ಸೆ ನಡೆದಿದೆ. ರೋಬೋಟಿಕ್ ತಂತ್ರಜ್ಞಾನದ ಅದ್ಭುತ ಬಳಕೆಯಿಂದಾಗಿ ಶಸ್ತ್ರಚಿಕಿತ್ಸೆಯು ನೂರಕ್ಕೆ ನೂರರಷ್ಟು ನಿಖರವಾಗಿ ಮೂಡಿಬಂದಿದ್ದು, ರೋಗಿಯು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ರೋಬೋಟಿಕ್ ಶಸ್ತ್ರಚಿಕಿತ್ಸೆಯು ಹೆಚ್ಚು ನಿಖರವಾಗಿರುತ್ತದೆ. ರೋಗಿಗಳಿಗೆ ಕಡಿಮೆ ನೋವು, ಶೀಘ್ರ ಸಹಜ ಚಲನಶೀಲತೆ ಜೊತೆಗೆ ನಿಖರವಾದ ಮಂಡಿ ಚಿಪ್ಪು ಮರುಜೋಡಣೆ ಆಗುತ್ತೆ.ಶಸ್ತ್ರಚಿಕಿತ್ಸೆ ನಡೆದ ದಿನವೇ ರೋಗಿ ನಡಿಗೆ: ರೋಬೋಟಿಕ್ ತಂತ್ರಜ್ಞಾನದ ಚಮತ್ಕಾರ!ಈ ಯಶಸ್ವಿ ಶಸ್ತ್ರಚಿಕಿತ್ಸೆಯ ಕುರಿತು ಮಾತನಾಡಿದ ಆರ್ಥೋಪೆಡಿಕ್, ಆರ್ಥ್ರೋಸ್ಕೋಪಿ ಮತ್ತು ರೋಬೋಟಿಕ್‌ ತಜ್ಞರಾದ ಡಾ. ವಿನ್ಸೆಂಟ್ ಮೆಕ್‌ಮೋಹನ್, ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ರೋಬೋಟಿಕ್ ಶಸ್ತ್ರಚಿಕಿತ್ಸೆಯು ಅತ್ಯಂತ ನಿಖರವಾಗಿರುತ್ತದೆ. ರೋಬೋಟಿಕ್ ಸಹಾಯದಿಂದಾಗಿ ಕನಿಷ್ಠ ಸಮಯದಲ್ಲಿ ಮತ್ತು ಸಣ್ಣ ಗಾಯದ ಮೂಲಕ ಮೃದು ಅಂಗಾಂಶಗಳಿಗೆ ಯಾವುದೇ ತೊಂದರೆಯಾಗದಂತೆ ಪ್ರಕ್ರಿಯೆ ನಡೆಸಲಾಗಿದೆ. ಇದೇ ಕಾರಣಕ್ಕೆ ಶಸ್ತ್ರಚಿಕಿತ್ಸೆ ನಡೆದ ದಿನವೇ ರೋಗಿಯು ತಾವಾಗಿಯೇ ನಡೆದಾಡುವಷ್ಟು ಚೇತರಿಸಿಕೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಡಾ. ಎ.ಸಿ. ಪ್ರೇಮರಾಜ್ ಮಾತನಾಡಿ, ಈ ಮುಂದುವರಿದ ಅಮೆರಿಕನ್ ತಂತ್ರಜ್ಞಾನದ ಬಳಕೆಯಿಂದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ನಂತರ ಕಾಡುವ ನೋವು ಮತ್ತು ರಕ್ತಸ್ರಾವ ಅತ್ಯಂತ ಕಡಿಮೆ ಇರುತ್ತದೆ. ಸೋಂಕಿನ ಸಾಧ್ಯತೆಗಳು ಸಂಪೂರ್ಣ ಕ್ಷೀಣಿಸಲಿದ್ದು, ರೋಗಿಗಳು ಅತಿ ಶೀಘ್ರವಾಗಿ ಚೇತರಿಸಿಕೊಂಡು ಬೇಗನೇ ಮನೆಗೆ ಮರಳಲು ಇದು ಸಹಕಾರಿಯಾಗಿದೆ. ಮಂಡಿಚಿಪ್ಪನ್ನು ಕಸಿ ಮುಖಾಂತರ ಮರುಜೋಡಿಸುವ ಸಮಯದಲ್ಲಿ ರೋಬೋಟ್ ಸಹಾಯದಿಂದ ಬಹಳ ಪರ್ಫೆಕ್ಟ್ ಆಗಿ ವೈದ್ಯರು ಫಿಟ್ ಮಾಡುತ್ತಾರೆ, ಇದರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾದ ವ್ಯಕ್ತಿ ಸಹಜವಾಗಿ ನೆಡೆಯುತ್ತಾರೆ, ಅವರಿಗೆ ಮೊಣಕಾಲು ಕಸಿ ಆಗಿದೆ ಎಂಬ ಅನುಭವವೇ ಆಗುವುದಿಲ್ಲ ಎಂದರು.

ಬಾಕ್ಸ್‌....

ಶಿವಮೊಗ್ಗದಲ್ಲಿದೆ ವಿಶ್ವದರ್ಜೆಯ ಚಿಕಿತ್ಸೆ!

ಇಷ್ಟು ದಿನ ಇಂತಹ ಅತ್ಯಾಧುನಿಕ ರೋಬೋಟಿಕ್ ಚಿಕಿತ್ಸೆಗಳಿಗಾಗಿ ಮಧ್ಯಕರ್ನಾಟಕದ ಜನತೆ ಮಹಾನಗರಗಳಿಗೆ ಅಲೆಯಬೇಕಿತ್ತು. ಅಲ್ಲಿನ ದುಬಾರಿ ವೆಚ್ಚ, ಪ್ರಯಾಣದ ಆಯಾಸ ಮತ್ತು ವಾಸದ ತೊಂದರೆಗಳು ರೋಗಿಗಳನ್ನು ಮತ್ತಷ್ಟು ಹೈರಾಣಾಗಿಸುತ್ತಿದ್ದವು. ಆದರೆ ಈಗ ಸಾರ್ವಜನಿಕರ ಆ ತೊಂದರೆಗೆ ನಂಜಪ್ಪ ಹಾಸ್ಪಿಟಲ್ಸ್ ಹಾಗೂ ನಂಜಪ್ಪ ಲೈಫ್ ಕೇರ್ ಶಾಶ್ವತ ಮುಕ್ತಿ ನೀಡಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅತ್ಯಂತ ಕೈಗೆಟುಕುವ ದರದಲ್ಲಿ ಮಧ್ಯ ಕರ್ನಾಟಕದ ಜನತೆಯ ಮನೆಬಾಗಿಲಿಗೇ ತಲುಪಿಸಿದೆ.

----------

ಪೊಟೋ: 20ಎಸ್‌ಎಂಜಿಕೆಪಿ07

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗು ಕಾಣೆಯಾದ ತಕ್ಷಣವೇ ಎಫ್ಐಆರ್‌ ದಾಖಲಿಸಬೇಕು
ಹರಿವ ನೀರಲ್ಲಿ ತೇಲಿ ಹೋಗುತ್ತಿದ್ದತಂದೆಯ ರಕ್ಷಿಸಿದ 9 ರ ಪೋರ!