ಡಾ.ಸಿ.ಎಂ. ಜೋಶಿ
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಂಜೂರಾಗಿದ್ದ ಚಿಕ್ಕಮಕ್ಕಳ ತಜ್ಞ ವೈದ್ಯ ಹುದ್ದೆ 2017ರಲ್ಲಿ ಬಾಗಲಕೋಟೆಗೆ ಹೋಗಿ ಬಡವರಿಗೆ ಸಾಕಷ್ಟು ತೊಂದರೆ ಆಗಿತ್ತು. ಸುಮಾರು 7 ವರ್ಷಗಳ ಬಳಿಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಚಿಕ್ಕಮಕ್ಕಳ ತಜ್ಞ ವೈದ್ಯರನ್ನು ನೇಮಕ ಮಾಡಿ ಬುಧವಾರ ಆದೇಶ ನೀಡಿದ್ದು, ಈ ಭಾಗದ ಸಾರ್ವಜನಿಕರಲ್ಲಿ ಹರ್ಷ ವ್ಯಕ್ತವಾಗಿದೆ.
ಪಟ್ಟಣದ ಸರ್ಕಾರಿ ಆಸ್ಪತ್ರೆ 30 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಸದ್ಯ 50 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಇಲ್ಲಿ ಪ್ರತಿ ತಿಂಗಳಿಗೆ ಸರಾಸರಿ 75 ಹೆರಿಗೆಗಳಾಗುತ್ತವೆ. ಜಿಲ್ಲೆಯಲ್ಲಿಯೇ ಹೆಚ್ಚಿನ ಹೆರಿಗೆಗಳಾಗುವ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆ ಚಿಕ್ಕಮಕ್ಕಳ ತಜ್ಞ ವೈದ್ಯರಿಲ್ಲದೇ ಸೊರಗಿತ್ತು.2025 ಜನವರಿಯಿಂದ ಮೇ ತಿಂಗಳವರೆಗೆ ಹೆರಿಗೆ ಮಾಹಿತಿ:
ಒಂದು ವರ್ಷದಿಂದ ಶಾಸಕ ಭೀಮಸೇನ ಚಿಮ್ಮಕಟ್ಟಿ ಅವರ ಪ್ರಯತ್ನದಿಂದ ಪುನಃ ಆಸ್ಪತ್ರೆಗೆ ಚಿಕ್ಕಮಕ್ಕಳ ತಜ್ಞ ವೈದ್ಯರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಅವರು ಬುಧವಾರ ಆದೇಶ ಹೊರಡಿಸಿ ಹಳೆ ಬಾಗಲಕೋಟೆಯ 50 ಹಾಸಿಗೆಯ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ತಜ್ಞ ವೈದ್ಯರಾಗಿದ್ದ ಡಾ.ಅಹಮ್ಮದ್ ರಸೂಲ್ ಶಿರಸಂಗಿ ಅವರನ್ನು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಗೆ ಬಿಡುಗಡೆ ಮಾಡಿದ್ದು, ಈ ಭಾಗದ ಸಾರ್ವಜನಿಕರಲ್ಲಿ ಹರ್ಷ ತಂದಿದೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕ್ಕಮಕ್ಕಳ ತಜ್ಞ ವೈದ್ಯರನ್ನು ನೇಮಕ ಮಾಡಿ ಡಿಎಚ್ಒ ಆದೇಶ ಮಾಡಿದ್ದು, ಬಹಳ ಅನುಕೂಲವಾಗಲಿದೆ. 7 ವರ್ಷದಿಂದ ಈ ಹುದ್ದೆ ಸ್ಥಳಾಂತರವಾದ ಬಳಿಕ ಈ ಭಾಗದ ಬಡ ಜನರಿಗೆ ಸಾಕಷ್ಟು ತೊಂದರೆಯಾಗಿತ್ತು. ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಿಂದ ಡಾ.ಶರಸಂಗಿ ಅವರು ಎರಡು ದಿನಗಳಲ್ಲಿ ಬಂದು ಹಾಜರಾಗಬಹುದು.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಿದ ಫಲವಾಗಿ ಈ ಕಾರ್ಯವಾಗಿದೆ. ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಗೆ ಚಿಕ್ಕಮಕ್ಕಳ ತಜ್ಞ ವೈದ್ಯರ ಅಗತ್ಯ ತುಂಬಾನೇ ಇತ್ತು. ಜನರ ಒತ್ತಡವೂ ಇತ್ತು. ಡಿಎಚ್ಓ ಅವರು ವೈದ್ಯರನ್ನು ನೇಮಿಸಿ ಆದೇಶ ಮಾಡಿದ್ದಾರೆ. ವೈದ್ಯರು ಬೇಗ ಹಾಜರಾಗಿ ವರದಿ ಮಾಡಿಕೊಳ್ಳಲಿ.