ಚುನಾವಣೆ ಮತ ಎಣಿಕೆ: ಜಿಲ್ಲಾ ಕೇಂದ್ರಕ್ಕೆ ದೌಡಾಯಿಸಿದ ಹೊನ್ನಾಳಿ ಜನ

KannadaprabhaNewsNetwork |  
Published : Jun 05, 2024, 12:31 AM IST
ಹೊನ್ನಾಳಿ ಫೋಟೋ 4ಎಚ್.ಎಲ್.ಐ2ಎ. ಕಾಲಿಡಲೂ ಜಾಗವಿಲ್ಲದ ರೀತಿಯಲ್ಲಿ ವಾಹನಗಳು, ಜನರಿಂದ ತುಂಬಿರುತ್ತಿದ್ದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಜನರಿಲ್ಲದೇ ಬಣಗುಡುತ್ತಿರುವುದು. | Kannada Prabha

ಸಾರಾಂಶ

ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ನಡೆದಿದ್ದರಿಂದ ತಾಲೂಕಿನ ಬಹುತೇಕ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ತಮ್ಮ ನಾಯಕರ ಫಲಿತಾಂಶ ತಿಳಿಯುವ ಕುತೂಹಲ ಕಣ್ತುಂಬಿಕೊಳ್ಳಲು ದಾವಣಗೆರೆ ನಗರಕ್ಕೆ ಆಗಮಿಸಿದ್ದರು. ಪರಿಣಾಮ ಮಂಗಳವಾರ ಇಡೀ ಹೊನ್ನಾಳಿ ಪಟ್ಟಣದಲ್ಲಿ ಜನ ಮತ್ತು ವಾಹನಗಳ ಸಂಚಾರ ದಟ್ಟಣೆ ಇಲ್ಲದೇ ರಸ್ತೆಗಳು, ಕಚೇರಿಗಳೆಲ್ಲ ಜನರಿಲ್ಲದೇ ಖಾಲಿಯಾಗಿದ್ದವು.

- ಪಟ್ಟಣದಲ್ಲಿ ರಸ್ತೆ, ಸಾರ್ವಜನಿಕ ಸ್ಥಳಗಳೆಲ್ಲ ಜನರಿಲ್ಲದೇ ಖಾಲಿ - - -

ಹೊನ್ನಾಳಿ: ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ನಡೆದಿದ್ದರಿಂದ ತಾಲೂಕಿನ ಬಹುತೇಕ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ತಮ್ಮ ನಾಯಕರ ಫಲಿತಾಂಶ ತಿಳಿಯುವ ಕುತೂಹಲ ಕಣ್ತುಂಬಿಕೊಳ್ಳಲು ದಾವಣಗೆರೆ ನಗರಕ್ಕೆ ಆಗಮಿಸಿದ್ದರು. ಪರಿಣಾಮ ಮಂಗಳವಾರ ಇಡೀ ಹೊನ್ನಾಳಿ ಪಟ್ಟಣದಲ್ಲಿ ಜನ ಮತ್ತು ವಾಹನಗಳ ಸಂಚಾರ ದಟ್ಟಣೆ ಇಲ್ಲದೇ ರಸ್ತೆಗಳು, ಕಚೇರಿಗಳೆಲ್ಲ ಜನರಿಲ್ಲದೇ ಖಾಲಿಯಾಗಿದ್ದವು.

ವಿಶೇಷವಾಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸದಾ ವಾಹನಗಳು, ಪ್ರಯಾಣಿಕರು ಇರುತ್ತಿದ್ದರು. ಜನರಿಂದ ತುಂಬಿ ತುಳುಕುತ್ತಿದ್ದ ಬಸ್ ನಿಲ್ದಾಣದಲ್ಲಿ ಕೇವಲ ಬಸ್‌ಗಳು ಬಿಟ್ಟರೆ ಯಾವುದೇ ದ್ವಿಚಕ್ರ ವಾಹನಗಳು, ಪ್ರಯಾಣಿಕರು ಹಾಗೂ ಸಾರ್ವಜನಕರ ಜನಜಂಗುಳಿ ಕಂಡುಬರಲಿಲ್ಲ. ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕೇವಲ ಸಿಬ್ಬಂದಿ ಬಿಟ್ಟರೆ ಗ್ರಾಹಕರಾಗಲಿ, ಸಾರ್ವಜನಿಕರಾಗಲಿ ಕಾಣಲಿಲ್ಲ.

ಸದಾ ಸಾಕಷ್ಟು ವಾಹನಗಳ ಸಂಚಾರ ದಟ್ಟಣೆಯಿಂದ ಕೂಡಿರುತ್ತಿದ್ದ ಹರಿಹರ, ಹೊನ್ನಾಳಿ, ಶಿವಮೊಗ್ಗ ರಸ್ತೆಗಳು ಕೂಡ ವಾಹನಗಳ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು.

ಒಟ್ಟಾರೆಯಾಗಿ ಲೋಕಸಭೆ ಚುನಾವಣೆ ಫಲಿತಾಂಶದ ಕಾರಣ ವಾಹನಗಳು, ಜನರೆಲ್ಲ ದಾವಣಗೆರೆ ನಗರದ ಕಡೆಗೆ ಮುಖ ಮಾಡಿದ್ದರಿಂದ ಹೊನ್ನಾಳಿ ಪಟ್ಟಣ ಒಂದು ರೀತಿಯಲ್ಲಿ ಖಾಲಿ ಹೊಡೆಯುತ್ತಿತ್ತು.

- - - -4ಎಚ್.ಎಲ್.ಐ2: ಹೊನ್ನಾಳಿಯಲ್ಲಿ ಜನ ಮತ್ತು ವಾಹನಗಳ ದಟ್ಟಣೆಯಿಂದ ಕೂಡಿರುತ್ತಿದ್ದ ರಸ್ತೆ ಮಂಗಳವಾರ ಸಂಚಾರ ದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿತ್ತು. -4ಎಚ್.ಎಲ್.ಐ2ಎ: ಖಾಸಗಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಜನಜಂಗುಳಿಯೇ ಕಾಣಲಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?