ಕನಕದಾಸರ ತತ್ವಾದರ್ಶ ಸಾರ್ವಕಾಲಿಕ: ಸ್ಪೀಕರ್‌ ಜಿ.ಎಸ್. ಪಾಟೀಲ

KannadaprabhaNewsNetwork |  
Published : Nov 30, 2026, 03:45 AM IST
ಗಜೇಂದ್ರಗಡ ದುರ್ಗಾ ವೃತ್ತದಲ್ಲಿ ನಡೆದ ೭೧ನೇ ಕನ್ನಡ ರಾಜ್ಯೋತ್ಸವ, ೫೩೯ನೇ ಕನಕದಾಸ ಜಯಂತಿ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕ ಏಕೀಕರಣಕ್ಕೆ ಕೊಡುಗೆ ನೀಡಿದ ಜಿಲ್ಲೆಯ ಹಾಗೂ ಮಹನೀಯರ ಸ್ಮರಣೆ ಜತೆಗೆ ಸಮಾನತೆಯ ಸಂದೇಶ ಮತ್ತು ಭಕ್ತಿ ಮಾರ್ಗವನ್ನು ಭೋದಿಸಿದ ಕನಕದಾಸ ಅವರ ತತ್ವಾದರ್ಶಗಳು ಸಾರ್ವಕಾಲಿಕ.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಕರ್ನಾಟಕ ಏಕೀಕರಣಕ್ಕೆ ಕೊಡುಗೆ ನೀಡಿದ ಜಿಲ್ಲೆಯ ಹಾಗೂ ಮಹನೀಯರ ಸ್ಮರಣೆ ಜತೆಗೆ ಸಮಾನತೆಯ ಸಂದೇಶ ಮತ್ತು ಭಕ್ತಿ ಮಾರ್ಗವನ್ನು ಭೋದಿಸಿದ ಕನಕದಾಸ ಅವರ ತತ್ವಾದರ್ಶಗಳು ಸಾರ್ವಕಾಲಿಕ ಎಂದು ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ದುರ್ಗಾ ವೃತ್ತದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ೭೧ನೇ ಕನ್ನಡ ರಾಜ್ಯೋತ್ಸವ, ೫೩೯ನೇ ಕನಕದಾಸ ಜಯಂತಿ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹರಿದಾಸ ಸಾಹಿತ್ಯ, ಕರ್ನಾಟಕ ಸಂಗೀತ ಹಾಗೂ ಸಾಮಾಜಿಕ ಸಮಾನತೆಗೆ ಕನಕದಾಸರು ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸುವ ದಿನವಾಗಿದೆ. ಅಲ್ಲದೆ ಮಾನವೀಯ ಮೌಲ್ಯಗಳು, ಸಮಾನತೆಯ ಸಂದೇಶ ಮತ್ತು ಭಕ್ತಿ ಮಾರ್ಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ದಿನವಾಗಬೇಕು. ಕನಕದಾಸರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್. ಸೋಂಪುರ ಮಾತನಾಡಿ, ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಕನ್ನಡಭಾಷೆ, ನಾಡು, ನುಡಿ ಹಾಗೂ ಗಡಿಯ ರಕ್ಷಣೆಯ ಹೋರಾಟದ ಜತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುವುದರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೬ ಸಾವಿರಕ್ಕೂ ಅಧಿಕ ಮಹನೀಯರನ್ನು ಸನ್ಮಾನಿಸುವ ಮೂಲಕ ಸಾಮಾಜಿಕ ಕಾರ್ಯಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದ ಅವರು, ಕನಕದಾಸ ಎಂದರೆ ಕೇವಲ ಹೆಸರಲ್ಲ. ಅದೊಂದು ಸರ್ವರನ್ನು ಬೆಸೆಯುವ ಶಕ್ತಿಯಾಗಿದೆ. ಅವರ ಜಯಂತಿಯ ದಿನ ಸ್ಮರಣೆ ಜತೆಗ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಕಾಗಿನೆಲೆ ಶಾಖಾಮಠ ಬಾದಿಮನಾಳದ ಶಿವಶಿದ್ದೇಶ್ವರ ಸ್ವಾಮೀಜಿ, ಮಳೆರಾಜೇಂದ್ರಸ್ವಾಮಿ ಮಠ ಮುರನಾಳದ ಜಗನ್ನಾಥ ಸ್ವಾಮೀಜಿ, ಟಕ್ಕೇದ ದರ್ಗಾದ ಸೈಯದ್ ನಿಜಾಮುದ್ದೀನಶಾ ಅಶ್ರಫಿ ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಅಜೀತ ಬಾಗಮಾರ, ಸಿದ್ದಣ್ಣ ಬಂಡಿ, ವೀರಣ್ಣ ಶೆಟ್ಟರ, ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ಶರಣಪ್ಪ ರೇವಡಿ, ಶರಣಪ್ಪ ಬೆಟಗೇರಿ, ಬಸವರಾಜ ನವಲಗುಂದ, ಅರ್ಜುನ ರಾಠೋಡ, ಶಶಿಧರ ಹೂಗಾರ, ಹನಮಂತ ಅಬ್ಬಿಗೇರಿ, ಜಗದೀಶ ಹಿರೇಮಠ, ನಿಂಗಪ್ಪ ಮಾಸ್ತಿ, ಶರಣಪ್ಪ ಜೂಲಗುಡ್ಡ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ತೇಜನಗೊಂಡ ಗ್ರಾಮೀಣ ಗ್ರಂಥಾಲಯಗಳು !
ಪ್ರತಿಯೊಬ್ಬ ಕನ್ನಡಿಗ ನಾಡಿನ ಕಾವಲುಗಾರನಾಗಬೇಕಿದೆ: ಚಲಪತಿ ಗೌಡ