ಶಿವಯೋಗಿ ಸಿದ್ದರಾಮೇಶ್ವರರ ತತ್ವ, ಸಂದೇಶ ಇಂದಿಗೂ ಪ್ರಸ್ತುತ

KannadaprabhaNewsNetwork |  
Published : Jan 15, 2026, 01:30 AM IST
ಚಿತ್ರ ಶೀರ್ಷಿಕೆ - ಸಿದ್ದರಾಮೇಶಆಳಂದ: ಆಡಳಿತಸೌಧನಲ್ಲಿ ಆಚರಿಸಿದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ    ಕೆ.ಎಂ.ಎಫ್ ಅಧ್ಯಕ್ಷ ಆರ್.ಕೆ.ಪಾಟೀಲ ಮಾತನಾಡಿದರು. ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಸಮಾಜದ ಕನಕಪ್ಪ ದಂಡಗುಲೆ ಇತರರು ಇದ್ದರು.  | Kannada Prabha

ಸಾರಾಂಶ

The philosophy and message of Shivayogi Siddaramaeshwar are still relevant today.

-ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಅಂಗವಾಗಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ

--

ಕನ್ನಡಪ್ರಭ ವಾರ್ತೆ ಆಳಂದ

ಶಿವಯೋಗಿಗಳು ತಮ್ಮ ತತ್ವೋಪದೇಶಗಳ ಮೂಲಕ ಜಾತಿ–ಭೇದ, ಅಸಮಾನತೆ ವಿರುದ್ಧ ಹೋರಾಡಿ ಶಾಂತಿ, ಸಹಬಾಳ್ವೆ ಮತ್ತು ಕಾಯಕದ ಮಹತ್ವವನ್ನು ಸಮಾಜಕ್ಕೆ ಬೋಧಿಸಿದ್ದಾರೆ. ಅವರ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಅವರು ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಅರ್ಥಪೂರ್ಣ ಸಂದೇಶಗಳೊಂದಿಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಅಂಗವಾಗಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಸಮಾಜ ಸುಧಾರಣೆ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಶಿವಯೋಗಿ ಸಿದ್ಧರಾಮೇಶ್ವರರ ಜೀವನ ಮತ್ತು ಚಿಂತನೆಗಳು ಇಂದಿನ ಸಮಾಜಕ್ಕೂ ದಾರಿ ತೋರಿಸುವಂತಿವೆ, ಸಮಾಜ ಬಾಂಧವರು ಶಿಕ್ಷಣ, ಆರ್ಥಿಕ ಸಾಮಾಜಿಕವಾಗಿ ಸಂಘಟಿತರಾಗಿ ಅಭಿವೃದ್ಧಿ ಸಾಧಿಸಲು ಮುಂದಾಗಬೇಕು ಎಂದು ಹೇಳಿದರು.

ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಶಿವಯೋಗಿ ಸಿದ್ಧರಾಮೇಶ್ವರರು ಕೇವಲ ಧಾರ್ಮಿಕ ನಾಯಕರಷ್ಟೇ ಅಲ್ಲದೆ ಸಮಾಜವನ್ನು ಸರಿದಾರಿಯಲ್ಲಿ ನಡೆಸಿದ ಮಹಾನ್ ಯೋಗಿ ಎಂದು ಬಣ್ಣಿಸಿದರು. ಸತ್ಯ, ಶಿಸ್ತು ಹಾಗೂ ಸೇವಾಭಾವನೆಯೇ ಅವರ ಜೀವನದ ಮೂಲ ತತ್ವವಾಗಿದ್ದು, ಇವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯವಿದೆ ಎಂದರು.

ಶಿಕ್ಷಕ ಶ್ರೀಪಾಲ ಭೋಗಾರ ಅವರು ಶಿವಯೋಗಿ ಸಿದ್ಧರಾಮೇಶ್ವರರ ಕುರಿತು ಉಪನ್ಯಾಸ ನೀಡಿದರು. ಶಿವಯೋಗಿಗಳ ವಚನಗಳು ಮತ್ತು ಉಪದೇಶಗಳು ಮಾನವೀಯತೆಯ ಸಾರವನ್ನು ಒಳಗೊಂಡಿದ್ದು, ಅಂಧಶ್ರದ್ಧೆ ಹಾಗೂ ಅನ್ಯಾಯದ ವಿರುದ್ಧ ಚಿಂತನೆ ಮೂಡಿಸುತ್ತವೆ. ಶಿಕ್ಷಣ, ಜ್ಞಾನ ಮತ್ತು ಆತ್ಮಶುದ್ಧಿಯ ಮೂಲಕ ವ್ಯಕ್ತಿ ಹಾಗೂ ಸಮಾಜ ಎರಡೂ ಉನ್ನತಿಗೆ ತಲುಪಬಹುದು ಎಂಬ ಸಂದೇಶವನ್ನು ಅವರು ನೀಡಿದ್ದಾರೆ ಎಂದು ವಿವರಿಸಿದರು.

ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭೂವಿ ಸಮಾಜದ ಹಿರಿಯ ಮುಖಂಡ ಯಲ್ಲಪ್ಪ ದಂಡಗುಲೆ, ಯುವ ಮುಖಂಡ ಕನಕಪ್ಪ ದಂಡಗುಲೆ, ವೆಂಕಟೇಶ ಗುತ್ತೇದಾರ, ನಾಗಪ್ಪ ಕುಶಾಳಕರ್, ಲಕ್ಷ್ಮಣ ಕುಶಾಳಕರ್, ಯಲ್ಲಪ್ಪ ಪಾತ್ರೊಟ್, ಗಿಡ್ಡಪ್ಪ ಆರ್.ಕೆ., ರಾಜು ದಂಡಗುಲೆ, ಶ್ಯಾಮರಾವ್ ದಂಡಗುಲೆ, ಹಣಮಂತ ಕುಶಾಳಕರ್, ನಾಡ ತಹಸೀಲ್ದಾರ ಸಿದ್ಧರಾಮ ಹಡಪದ, ಶಿರಸ್ತೆದಾರ ರಾಕೇಶ ಶೀಲವಂತ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕೆ, ವಿಎ ಆನಂದ ಪೂಜಾರಿ, ಆಕಾಶ ಸಜ್ಜನ್, ಬಿಸಿಎಂ ಸುನಿತಾ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿದರು.

ಫೋಟೊ

ಆಳಂದ ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಅರ್ಥಪೂರ್ಣ ಸಂದೇಶಗಳೊಂದಿಗೆ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಅಂಗವಾಗಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ