‘ನಸುಕಿನ ನೊಗ’ ನಾಟಕ ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ

KannadaprabhaNewsNetwork |  
Published : Jan 31, 2026, 02:00 AM IST
ಪ್ರಶಸ್ತಿ ಪ್ರದಾನ | Kannada Prabha

ಸಾರಾಂಶ

ಯೋಗಕ್ಷೇಮ ಮೀಡಿಯಾ ಪ್ರೈ.ಲಿ, ವಿಶ್ವಂ ವೈಚಾರಿಕ ವಾಹಿನಿ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ನಡೆದ ‘ನಸುಕಿನ ನೊಗ’ ಎಂಬ ಏಕವ್ಯಕ್ತಿ ನಾಟಕ ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರು

ಯೋಗಕ್ಷೇಮ ಮೀಡಿಯಾ ಪ್ರೈ.ಲಿ, ವಿಶ್ವಂ ವೈಚಾರಿಕ ವಾಹಿನಿ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ನಡೆದ ‘ನಸುಕಿನ ನೊಗ’ ಎಂಬ ಏಕವ್ಯಕ್ತಿ ನಾಟಕ ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಯಿತು.

ಸುಮಾರು 93 ನಿಮಿಷಗಳ ಏಕವ್ಯಕ್ತಿ ಪ್ರದರ್ಶನ ನೀಡಿದ್ದಕ್ಕಾಗಿ longest one man act depicting problems of paper distrubutor boy as first of his kind in the world ಅಡಿಯಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಯಿತು. ಈ ಐತಿಹಾಸಿಕ ಕ್ಷಣಕ್ಕೆ ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಕರ್ನಾಟಕ ಪತ್ರಿಕಾ ವಿತರಕರ ಒಕ್ಕೂಟದ ಕೆ.ಶಂಭುಲಿಂಗ, ‘ಕನ್ನಡಪ್ರಭ’ ವಿಶೇಷ ಯೋಜನೆ ಸಂಪಾದಕರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಹಾಗೂ ಪತ್ರಿಕಾ ವಿತರಕರು ಸಾಕ್ಷಿಯಾದರು.

ಡಾ। ಎಸ್.ಎಲ್.ಎನ್.ಸ್ವಾಮಿ ನಿರ್ದೇಶಿಸಿದ್ದರು. ಪತ್ರಿಕಾ ವಿತರಕರ ಬವಣೆ, ನೋವು, ಸಂಕಟವನ್ನು ಏಕವ್ಯಕ್ತಿ ಪ್ರದರ್ಶನದ ಮೂಲಕ ಶ್ರೀನಿವಾಸಮೂರ್ತಿ ನೀನಾಸಂ ಅನಾವರಣಗೊಳಿಸಿದರು. ತೀರ್ಪುಗಾರ ಹರೀಶ್, ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ನಾಟಕ ಸೇರ್ಪಡೆಯಾಗಿದ ವಿಷಯ ತಿಳಿಸುತ್ತಿದ್ದಂತೆ ಜೋರಾದ ಕರತಾಡನ ಮೂಲಕ ವಿತರಕರು ಸಂಭ್ರಮಿಸಿದರು.

ಪತ್ರಿಕಾ ವಿತರಕರಿಗೆ ಸನ್ಮಾನ:

ನಾಟಕ ಪ್ರದರ್ಶನದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಾದ ಜಿ.ಟಿ.ಮಲ್ಲಿಕಾರ್ಜುನ್, ಎಂ.ಆರ್.ಈಶ್ವರ್, ಶಿವಶಾಂತ್ ಕುಮಾರ್, ಜಿ.ಟಿ,ವೀರಭದ್ರ ವೈಸಿ, ಚಂದ್ರಶೇಖರ್ ಕೆ.ಎಸ್.ಅವರಿಗೆ ಪತ್ರಿಕಾ ವಿತರಕ ಪ್ರಶಸ್ತಿ ವಿತರಿಸಲಾಯಿತು. ಶಿವಾಚಾರ್ಯ ಸ್ವಾಮೀಜಿ, ಮುರಳೀಧರ ಹಾಲಪ್ಪ, ನಾಗರತ್ನ ಲಕ್ಷ್ಮೀಶ ಮುಂತಾದವರಿಗೆ ಪ್ರಜಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಾಶ್ರೀ ಡಾ। ಲಕ್ಷ್ಮಣದಾಸ್, ಯೋಗಕ್ಷೇಮ ಮೀಡಿಯಾ ಪ್ರೈ.ಲಿ.ನ ಅಧ್ಯಕ್ಷ ಎಚ್.ಎಸ್,ನಾರಾಯಣ ಸ್ವಾಮಿ, ಬಿ.ಎ.ರವಿ, ಎಸ್.ಜೆ.ಹರೀಶ್ ಬಾಬು, ಎಂ.ಜಗದೀಶಗೌಡ, ಜಿ.ಕೃಷ್ಣಮೂರ್ತಿ, ಪ್ರಶಾಂತ ಕುಮಾರ್, ಸಂಗಮ್ ಸುರೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು