ಮಂತ್ರ ಮುಗ್ಧಗೊಳಿಸಿದ ಮೋಳಿಗೆ ಮಾರಯ್ಯ ನಾಟಕ

KannadaprabhaNewsNetwork |  
Published : Jun 02, 2025, 12:10 AM IST
ಚಿತ್ರ: ೧ಎಸ್.ಎನ್.ಡಿ.೦೩- ಸಂಡೂರಿನ ಆದರ್ಶ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿ ಪ್ರಯುಕ್ತ ಜಿಲ್ಲೆಯ ಶಿರಿಗೆರಿಯ ಧಾತ್ರಿ ರಂಗ ತಂಡದಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶಿಸಲಾಯಿತು. | Kannada Prabha

ಸಾರಾಂಶ

ಸಂಡೂರು ತಾಲೂಕು ವೀರಶೈವ ಲಿಂಗಾಯತ ಸಂಘದ ವತಿಯಿಂದ ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಿರಿಗೆರೆಯ ಧಾತ್ರಿ ರಂಗ ತಂಡದಿಂದ ಪ್ರದರ್ಶಿಸಲ್ಪಟ್ಟ ಮೋಳಿಗೆ ಮಾರಯ್ಯ ನಾಟಕ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಕನ್ನಡಪ್ರಭ ವಾರ್ತೆ ಸಂಡೂರುಸಂಡೂರು ತಾಲೂಕು ವೀರಶೈವ ಲಿಂಗಾಯತ ಸಂಘದ ವತಿಯಿಂದ ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಿರಿಗೆರೆಯ ಧಾತ್ರಿ ರಂಗ ತಂಡದಿಂದ ಪ್ರದರ್ಶಿಸಲ್ಪಟ್ಟ ಮೋಳಿಗೆ ಮಾರಯ್ಯ ನಾಟಕ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಕಾಶ್ಮೀರದ ರಾಜನಾಗಿದ್ದ ಮಹದೇವ ಭೂಪಾಲ ಹಾಗೂ ಆತನ ರಾಣಿ ಮಹಾದೇವಿ ಬಸವಣ್ಣನವರ ತತ್ವಗಳಿಂದ ಪ್ರಭಾವಿತರಾಗಿ ತಮ್ಮ ಮಗನಾದ ಲಿಂಗಾರತಿಗೆ ಪಟ್ಟವನ್ನು ಕಟ್ಟಿ, ಕಲ್ಯಾಣಕ್ಕೆ ಬರುವುದು, ಮೋಳಿಗೆ ಮಾರಯ್ಯ ಎಂಬ ಹೆಸರನ್ನು ಪಡೆದುಕೊಳ್ಳುವುದು, ಕಲ್ಯಾಣದಲ್ಲಿ ಕಟ್ಟಿಗೆ ಮಾರುವ ಕಾಯಕ ಮಾಡುವುದು, ದಾಸೋಹ ಸೇವೆಗೈಯ್ಯುವುದು, ವಚನಗಳ ರಚನೆ, ಅನುಭವ ಮಂಟಪದಲ್ಲಿನ ಚರ್ಚೆಯಲ್ಲಿ ಭಾಗವಹಿಸುವುದು ಮುಂತಾದ ಅಂಶಗಳುಳ್ಳ ಮೋಳಿಗೆ ಮಾರಯ್ಯನರ ಜೀವನಗಾಥೆಯನ್ನು ಕಲಾವಿದರು ಮನೋಜ್ಞವಾಗಿ ಅಭಿನಯಿಸಿ, ನೋಡುಗರಿಂದ ಮೆಚ್ಚುಗೆ ಪಡೆದರು.ಕಾರ್ಯಕ್ರಮವನ್ನು ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ಗುಡೆಕೋಟೆ ನಾಗರಾಜ ಉದ್ಘಾಟಿಸಿದರು. ಬಿಕೆಜಿ ಕಂಪನಿಯ ಮಾಲೀಕ ಬಿ. ನಾಗನಗೌಡ, ತಾಲೂಕು ವೀರಶೈವ ಲಿಂಗಾಯತ ಸಂಘದ ಗೌರವಾಧ್ಯಕ್ಷ ಸತೀಶ್‌ಕುಮಾರ್ ಚಿತ್ರಿಕಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಗಡಂಬ್ಲಿ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು.ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಪಿ. ರವಿಕುಮಾರ್, ಉಪಾಧ್ಯಕ್ಷ ಬಿ. ರಮೇಶ್, ಎ.ಎಂ. ಮಲ್ಲಿಕಾರ್ಜುನಯ್ಯ, ಕಾರ್ಯದರ್ಶಿ ಎಸ್.ವಿ. ಹಿರೇಮಠ, ಸಹ ಕಾರ್ಯದರ್ಶಿ ಬಿ.ಜಿ. ಸಿದ್ದೇಶ್, ಖಜಾಂಚಿ ಭುವನೇಶ್ ಮೇಟಿ, ಸಂಘಟನಾ ಕಾರ್ಯದರ್ಶಿ ಬಿ.ಕೆ. ಬಸವರಾಜ, ಮುಖಂಡರಾದ ಮೇಲುಸೀಮೆ ಶಂಕ್ರಪ್ಪ, ಹಗರಿ ಬಸವರಾಜಪ್ಪ, ಜಿ. ವೀರೇಶ್, ಟಿ.ಜಿ. ಸುರೇಶ್‌ಗೌಡ, ಗಡಾದ್ ರಮೇಶ್, ಎಸ್‌ಟಿಡಿ ರುದ್ರಗೌಡ, ಕಿನ್ನೂರೇಶ್ವರ, ಬಿ.ಎಂ. ಉಜ್ಜಿನಯ್ಯ, ಎಂ. ಚರಂತಯ್ಯ, ಕೆ. ಯರಿಸ್ವಾಮಿ ಸೇರಿದಂತೆ ಹಲವು ಕಲಾಸಕ್ತರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್