ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ಉಳಿದ ಕವಿ ಸರ್ವಜ್ಞ

KannadaprabhaNewsNetwork |  
Published : Feb 21, 2026, 02:15 AM IST
ಹಿರೇಕೆರೂರಿನಲ್ಲಿ ನಡೆದ ವರಕವಿ ಸರ್ವಜ್ಞನ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸರ್ವಜ್ಞ ಪುತ್ಥಳಿಗೆ ಶಾಸಕ ಯು.ಬಿ. ಬಣಕಾರ ಮಾಲಾರ್ಪಣೆ ಮಾಡಿದರು. | Kannada Prabha

ಸಾರಾಂಶ

ಕನ್ನಡ ನಾಡು ಕಂಡ ಮಹಾ ದಾರ್ಶನಿಕ, ತ್ರಿಪದಿಗಳ ಮೂಲಕ ಕಂಡದ್ದನ್ನು ಕಂಡ ಹಾಗೆ ಮತ್ತು ವಸ್ತುನಿಷ್ಠವಾಗಿ ಹೇಳುವ ಮೂಲಕ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ಉಳಿದ ಕವಿ ಸರ್ವಜ್ಞ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು: ಕನ್ನಡ ನಾಡು ಕಂಡ ಮಹಾ ದಾರ್ಶನಿಕ, ತ್ರಿಪದಿಗಳ ಮೂಲಕ ಕಂಡದ್ದನ್ನು ಕಂಡ ಹಾಗೆ ಮತ್ತು ವಸ್ತುನಿಷ್ಠವಾಗಿ ಹೇಳುವ ಮೂಲಕ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ಉಳಿದ ಕವಿ ಸರ್ವಜ್ಞ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ವರಕವಿ ಸರ್ವಜ್ಞನ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸರ್ವಜ್ಞ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.ಸರ್ವಜ್ಞ ತ್ರಿಪದಿಗಳ ಮೂಲಕ ಮನುಷ್ಯರ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ತಿಳಿಸಿದ್ದಾರೆ ಮತ್ತು ಅವರ ತ್ರಿಪದಿಗಳಲ್ಲಿ ಜೀವನದ ಸಾರ, ಸಾಮಾಜಿಕ ಕಳಕಳಿ ತುಂಬಿದ್ದು, ಅವರ ವಚನಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವರಕವಿ ಸರ್ವಜ್ಞನವರ ಕುರಿತು ಉಪನ್ಯಾಸ ನೀಡಿದ ಡಾ. ಎಸ್.ಬಿ. ಚನ್ನಗೌಡ್ರ, ವರಕವಿ ಸರ್ವಜ್ಞನವರು ತ್ರಿಪದಿಗಳ ಮೂಲಕ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಜತಗೆ ಸಮಾಜದಲ್ಲಿ ನಡೆಯುವ ಬಗ್ಗೆ ನಿಷ್ಠುರವಾಗಿ ನೇರವಾಗಿ ತಿಳಿಸಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸರ್ವಜ್ಞ ತ್ರಿಪದಿ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು. ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿದವರು. ಆಡು ಮುಟ್ಟದ ಗಿಡವಿಲ್ಲ, ಸರ್ವಜ್ಞ ಹೇಳದ ವಿಷಯವಿಲ್ಲ ಎನ್ನುವಂತೆ ಪ್ರತಿಯೊಂದು ವಿಷಯಗಳು ಅವರ ತ್ರಿಪದಿಗಳು ಒಳಗೊಂಡಿವೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ. ರೇಣುಕಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ, ಕುಂಬಾರ ಸಮಾಜದ ಅಧ್ಯಕ್ಷ ಚನ್ನಬಸಪ್ಪ ಚಕ್ರಸಾಲಿ, ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ಬಸವರಾಜ ಚಕ್ರಸಾಲಿ, ಬಿಇಒ ಎನ್.ಶ್ರೀಧರ, ಎಚ್.ಎಚ್. ಜಾಡರ, ಡಾ. ಝಡ್.ಆರ್. ಮಕಾನ್ದಾರ್, ಕೋಡಿ ಭೀಮರಾಯ, ನೂರ ಅಹ್ಮದ್, ಗೀತಾ ಬಾಳಿಕಾಯಿ, ಮಂಜುನಾಥ ಹಡಪದ, ಎಸ್.ಆರ್. ಆಪಿನಕೊಪ್ಪ, ನಾಗರಾಜ ಕಟ್ಟಿಮನಿ, ವಸಂತ ಬಡಿಗೇರ, ರುದ್ರಮುನಿ ಕಣವೇರ, ಮಾಲತೇಶ ಆಡೂರ, ಶಂಭು ಕುಬಸದ, ಬೋಜರಾಜ ಕುರುತ್ತೇರ, ಚಂದ್ರು ದೊಡ್ಮನಿ, ಕುಮಾರ ಮಳವಳ್ಳಿ, ಶ್ರೀಧರ ರಡ್ಡೇರ, ಸೋಮು ಸಣಬಿನ ಸೇರಿದಂತೆ ಕುಂಬಾರ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಾಫ್‌-ಪಿಂಜಾರ ಸಮುದಾಯ ಒಪ್ಪಿಕೊಳ್ಳದ ಮುಸ್ಲಿಂ ಸಮುದಾಯ
ಜೈಲಲ್ಲಿ ಜಿಹಾದಿ: ಶಂಕಿತನ ಸುಳಿವಿಗೆ ₹5 ಲಕ್ಷ