ಕನ್ನಡಪ್ರಭವಾರ್ತೆ ಕೆರೂರ
ಸೋನಿಯಾ ಉರ್ಫ ಸೋಹನ ಕಿಶೋರ ಮಚಲಿ. ಸಾಗರ ಶೇರಸಿಂಗ್ ಮಚಲಿ ಅವರನ್ನು ಬಂಧಿಸಿದ್ದು, ರಾಹುಲ್ ಕಿಶೋರ ಮಚಲಿ, ಮಹೇಶ ಉರ್ಫ ಚಿನ್ನು ಕಿಶೋರ ಮಚಲಿ ಪರಾರಿಯಾಗಿದ್ದು, ಶೋಧ ನಡೆಸಿದ್ದಾರೆ.
ಪ್ರಕರಣ ಹಿನ್ನೆಲೆ: ಅಗಸನಕೊಪ್ಪ ಗ್ರಾಮದ ಹೊಲದಲ್ಲಿರುವ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ₹ 40 ಸಾವಿರ ಬೆಲೆಬಾಳುವ 500 ಫೂಟ ಉದ್ದದ ಕೇಬಲ್ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದಾಗ, ಇದನ್ನು ನೋಡಿ ಚೀರಿದ ವ್ಯಕ್ತಿಯ ಬಾಯಿಮುಚ್ಚಿ ಆತನ ಜೇಬಿನಲ್ಲಿದ್ದ ₹ 4 ಸಾವಿರ ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬಾಗಲಕೋಟೆ ಎಸ್.ಪಿ. ಅಮರನಾಥರೆಡ್ಡಿ ,ಸಿ.ಪಿ.ಐ. ಡಿ.ಡಿ. ಧೂಳಖೇಡ ಮಾರ್ಗದರ್ಶನದಲ್ಲಿ ಆರೋಪಿತರ ಪತ್ತೆಗೆ ತಂಡ ರಚಿಸಿದ್ದರು. ಪಿಎಸ್ಐಗಳಾದ ಕುಮಾರ ಹಿತ್ತಲಮನಿ, ಬಿ.ಎಸ್. ಕುಪ್ಪಿ ನೇತೃತ್ವದ ತಂಡ ಕಳ್ಳತನವಾಗಿದ್ದ ಕೇಬಲ್ ದರೋಡೆಯಾಗಿದ್ದ ಹಣ, ಸಹಿತ ನಾಲ್ವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.