ಕನ್ನಡಪ್ರಭ ವಾರ್ತೆ ಮಂಡ್ಯ
ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲೇ ವಿಶಾಲವಾದ ಜಾಗದಲ್ಲಿ ಮಹಾ ಶಿವರಾತ್ರಿಯ ಸಂದೇಶವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ೨೧ ಅಡಿ ಎತ್ತರದ ನಿರಾಕಾರ ಜ್ಯೋತಿ ಸ್ವರೂಪದ ಅತ್ಯಾಕರ್ಷಕ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದು, ಧಾರಾಪಾತ್ರೆಯಿಂದ ನಿತ್ಯಾಭಿಷೇಕ ಮಾಡಲಾಗುತ್ತಿದೆ. ಶಿವಲಿಂಗದ ಎದುರು ಆಕರ್ಷಕ ನಂದಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ.
ಶಿವನ ಮೂಲಕ ರಚಿಸಲ್ಪಡುತ್ತಿರುವ ಸ್ವರ್ಗದ ಸೃಷ್ಟಿ ಮನೋಹರವಾಗಿದೆ. ಅದರೊಳಗೆ ಹೊಕ್ಕರೆ ಬೇರೆ ಲೋಕದಲ್ಲಿರುವಂತೆ ಭಾಸವಾಗುತ್ತದೆ. ಅಷ್ಟೊಂದು ರಮಣೀಯವಾಗಿ ಸ್ವರ್ಗದ ಕಿರುದರ್ಶನ ಮಾಡಿಸಲಾಗಿದೆ. ಒಂದೇ ಸ್ಥಳದಲ್ಲಿ ನಿಂತು ಚಿಕ್ಕದಾದ ಗಾಜಿನೊಳಗೆ ಏಕಕಾಲಕ್ಕೆ ಸಹಸ್ರಲಿಂಗ ಸುಂದರವಾಗಿ ಕಾಣುವಂತೆ ಮಾಡಿರುವುದು. ಪ್ರಾಪಂಚಿಕ ಕೆಲಸ ಕಾರ್ಯದಲ್ಲಿ ವ್ಯಸ್ತನಾಗಿ ತನ್ನನ್ನು ತಾನು ಮರೆತುಹೋಗಿರುವ ಮನುಷ್ಯ ರಾಜಯೋಗ ಧ್ಯಾನದ ಮೂಲಕ ಎಲ್ಲಾ ಸಮಸ್ಯೆಗಳ ಸುಳಿಯಿಂದ ಹೇಗೆ ಹೊರಬರಲು ಸಾಧ್ಯ ಎಂಬ ಅರಿವು ಮೂಡಿಸುವ ಭೂಲ್‌ಬುಲಯ್ಯ ಉತ್ತಮವಾಗಿ ತೋರಿಸಲಾಗಿದೆ.ಇಂದು ಮನಸ್ಸು ಒತ್ತಡದಿಂದ ನಿಶ್ಯಕ್ತವಾಗಿದ್ದು ಮತ್ತು ವ್ಯರ್ಥ ಸಂಕಲ್ಪಗಳಲ್ಲಿ ಸಿಲುಕಿದೆ. ಮನಸ್ಸನ್ನು ಶಕ್ತಿಶಾಲಿಗೊಳಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಆಡಿಯೋ-ವೀಡಿಯೋ ಮೂಲಕ ಐದು ನಿಮಿಷಗಳ ಧ್ಯಾನದ ಅನುಭವ ಮಾಡಿಸುವ ವಿಶೇಷ ಪ್ರಯತ್ನವನ್ನು ಮೈಂಡ್ ಸ್ಪಾ ಮೂಲಕ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಅನ್ನಸಂರ‍್ಪಣೆ ಕಾರ್ಯಕ್ರಮ ಭಾನುವಾರ ಸಂಜೆ ಹಾಗೂ ಸೋಮವಾರ ನಡೆಯಲಿದೆ.
ಸಂಜೆ ೭ ಗಂಟೆಗೆ ಶ್ರೀ ತಾಂಡೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಹೋಮ-ಹವನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.