ಭೂ ಮಾಪಕರು , ಸೂಪರ್ ವೈಸರ್ ಹುದ್ದೆಗಳಿಲ್ಲದೆ ಇಡೀ ಇಲಾಖೆ ಕಾರ್ಯಗಳಿಗೆ ಹಿನ್ನಡೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಮಾಪಕರು ಮತ್ತು ಸೂಪರ್ ವೈಸರ್ ಹುದ್ದೆಗಳ ಖಾಲಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಮಹತ್ವಕಾಂಕ್ಷಿ ಯೋಜನೆಗಳು ವಿಳಂಬವಾಗುತ್ತಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ.ಚಿಕ್ಕಮಗಳೂರು ಜಿಲ್ಲೆಗೆ ಅನುಮೋದಿತ ಭೂ ಮಾಪಕ ಹುದ್ದೆಗಲ ಪೈಕಿ ಬರೋಬ್ಬರಿ ಮೂರನೇ ಒಂದು ಭಾಗದಷ್ಟು ಅಧಿಕಾರಿ ಸಿಬ್ಬಂದಿ ಹುದ್ದೆ ಖಾಲಿ ಖಾಲಿ ಒಂದು ಕಡೆಯಾದರೆ ಕಾರ್ಯ ಒತ್ತಡದ ನಡುವೆ ಭೂ ಮಾಪಕರು ನಡೆಸಿದ ಸರ್ವೇ ಕಾರ್ಯ ವನ್ನು ಪರಿಶೀಲಿಸಬೇಕಾದ ಸೂಪರ್ ವೈಸರ್ ಹುದ್ದೆಗಳು ಖಾಲಿ ಇರುವುದು ಇಡೀ ಇಲಾಖೆ ಕಾರ್ಯವೈಖರಿಗೆ ಹಿನ್ನಡೆ ಉಂಟು ಮಾಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದರೊಂದಿಗೆ ಜಮೀನುಗಳ ಸಮೀಕ್ಷೆ, ನಕ್ಷೆ ತಯಾರಿಕೆ ಮತ್ತು ದಾಖಲೆಗಳ ನಿರ್ವಹಣೆ (ಆರ್‌ಟಿಸಿ, ಮ್ಯುಟೇಶನ್), ರೈತರ ಜಮೀನಿನ ನಕ್ಷೆ, ಪಹಣಿ (ಆರ್‌ಟಿಸಿ) ಹಾಗೂ ಇನ್ನಿತರ ದಾಖಲೆ ಸಿದ್ದಪಡಿಸುವುದು. ಜತೆಗೆ ಕಂದಾಯ ಜಮೀನು, ಗೋಮಾಳ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗೆ ಸೇರಿದ ಜಮೀನು ಸರ್ವೇ ಮಾಡಿ ವರದಿ ನೀಡುವ ಕಾರ್ಯ ಮಾಡಲಿದೆ.
38 ಭೂ ಮಾಪಕರು, 9 ಸೂಪರ್ ವೈಸರ್ ಖಾಲಿ
ಮಲೆನಾಡು ತಾಲೂಕಿನಲ್ಲಿ ಹೆಚ್ಚು ಖಾಲಿಕೊಪ್ಪ ತಾಲೂಕಿನಲ್ಲಿ ಮಂಜೂರಾದ 10 ಭೂ ಮಾಪಕ ಹುದ್ದೆ ಪೈಕಿ 8 ಹುದ್ದೆ ಖಾಲಿ ಇವೆ. ಶೃಂಗೇರಿಯಲ್ಲಿ 9 ಹುದ್ದೆಯಲ್ಲಿ 7 ಖಾಲಿ, ಎನ್‌ಆರ್ ಪುರದಲ್ಲಿ 8 ಹುದ್ದೆಯಲ್ಲಿ 7 ಹುದ್ದೆ ಖಾಲಿ ಇವೆ. ಚಿಕ್ಕಮಗಳೂರು ತಾಲೂಕಿನಲ್ಲಿ 22 ರಲ್ಲಿ 12 ಖಾಲಿ, ಮೂಡಿಗೆರೆಯಲ್ಲಿ 12 ರಲ್ಲಿ 6 ಖಾಲಿ, ತರಿಕೆರೆಯಲ್ಲಿ 20 ಹುದ್ದೆ ಪೈಕಿ 6, ಕಡೂರಿನಲ್ಲಿ 20ರಲ್ಲಿ 4 ಖಾಲಿ, ಹೀಗಾಗಿ, ಒಟ್ಟು 38 ಹುದ್ದೆ ಖಾಲಿ ಇವೆ.
ಕೊಪ್ಪ, ಶೃಂಗೇರಿ, ಎನ್‌ಆರ್ ಪುರ ತಾಲೂಕಿನಲ್ಲಿ ಒಬ್ಬರೇ ಒಬ್ಬ ಸೂಪರ್ ವೈಸರ್‌ಗಳಿಲ್ಲ ಮಂಜೂರಾದ ಎಲ್ಲಾ ಹುದ್ದೆಗಳು ಖಾಲಿ ಇವೆ. ಮೂಡಿಗೆರೆಯಲ್ಲಿ 3ರಲ್ಲಿ 2 ಖಾಲಿ ಇವೆ. ಚಿಕ್ಕಮಗಳೂರಿನಲ್ಲಿ 4ರ ಪೈಕಿ ಒಂದು ಖಾಲಿ ಇದೆ. ತರೀಕೆರೆ ಮತ್ತು ಕಡೂರಿನಲ್ಲಿ ಮಾತ್ರ ಎಲ್ಲ ಹುದ್ದೆ ಭರ್ತಿಯಾಗಿವೆ.
ಇಲಾಖೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆ ಖಾಲಿ
ಜಿಲ್ಲೆಯ ಭೂಮಾಪನ ಇಲಾಖೆ ಹುದ್ದೆ ಖಾಲಿ ವಿವರ
ಸ.ನಿ.ಕಚೇರಿಮಂಜೂರುಕಾರ್ಯಖಾಲಿಚಿಕ್ಕಮಗಳೂರು452718
ಮೂಡಿಗೆರೆ26917ಕೊಪ್ಪ19316
ಶೃಂಗೇರಿ18513ತರೀಕೆರೆ382018
ಕಡೂರು402317ಎನ್‌ಆರ್‌ಪುರ1734
ಚಿಕ್ಕಮಗಳೂರು(ಉ,ನಿ.ಕ)12111ಒಟ್ಟು215101114
-- ಕೋಟ್ --ಕಳೆದ 10 ವರ್ಷಕ್ಕೆ ಹೋಲಿಕೆ ಮಾಡಿದರೆ, ಭೂ ಮಾಪನ ಇಲಾಖೆಗೆ ಸಾಕಷ್ಟು ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡ ಲಾಗಿದೆ. ವರ್ಗಾವಣೆ ಸಮಯ ಆಗಿರುವುದರಿಂದ ಹೆಚ್ಚಿನ ಭೂ ಮಾಪಕರ ನಿಯೋಜನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಎನ್.ಎಂ.ನಾಗರಾಜ್, ಜಿಲ್ಲಾಧಿಕಾರಿ, ಚಿಕ್ಕಮಗಳೂರು(ಫೋಟೋ ಇದೆ)ಫೋಟೋಸಾಂದರ್ಭೀಕ ಫೋಟೋ ಎಂದು ಕಡ್ಡಾಯವಾಗಿ ಹಾಕುವುದು.