- ಮೈಸೂರಿನಲ್ಲಿ ಮೊದಲ ಬಾರಿಗೆ 1021 ಗಣೇಶ ಪ್ರತಿಷ್ಠಾಪನೆ

KannadaprabhaNewsNetwork |  
Published : Aug 26, 2025, 01:02 AM IST

ಸಾರಾಂಶ

ಆ. 27 ರಿಂದ ಸೆ. 4 ರವರೆಗೆ ನಡೆಯುವ ಗಣೇಶೋತ್ಸವದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿಣ್ಣರ ಮೇಳ, ಟಾಂಗಾ ಸವಾರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಬೃಂದಾವನ ಬಡಾವಣೆಯ ಶ್ರೀ ಗಣಪತಿ ದೇವಸ್ಥಾನದ ಆವರಣದಲ್ಲಿ ಬೃಂದಾವನ ಬಡಾವಣೆಯ ನಾಗರೀಕರ ಹಿತರಕ್ಷಣಾ ವೇದಿಕೆಯಿಂದ ಇದೇ ಮೊದಲ ಬಾರಿಗೆ 1021 ಗಣೇಶ ಪ್ರತಿಷ್ಠಾಪನೆ ಮಾಡಲಿದ್ದು, ಅದ್ದೂರಿ ಆಚರಣೆಗೆ ವೇದಿಕೆ ಸಿದ್ದಗೊಂಡಿದೆ.

ಈಗಾಗಲೇ 1021 ಗಣೇಶ ಪ್ರತಿಷ್ಠಾಪನೆಗೆ ವೇದಿಕೆ ಸಿದ್ದತಾ ಕಾರ್ಯ ಕೈಗೊಂಡಿದ್ದು, ಈ ಒಂದು ಧಾರ್ಮಿಕ ಕಾರ್ಯಕ್ಕೆ ಬಡಾವಣೆಯ ಎಲ್ಲ ನಿವಾಸಿಗಳು, ಭಕ್ತಾದಿಗಳ ಸಹಕಾರ ನೀಡುತ್ತಿದ್ದಾರೆ ಎಂದು ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಆ. 27 ರಿಂದ ಸೆ. 4 ರವರೆಗೆ ನಡೆಯುವ ಗಣೇಶೋತ್ಸವದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿಣ್ಣರ ಮೇಳ, ಟಾಂಗಾ ಸವಾರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ, ಅದ್ದೂರಿಯಾಗಿ ನೆರವೇರಲಿದೆ.

ಸಂಜೆ 6.30ಕ್ಕೆ ಬೃಂದಾವನ ರಂಗ ವೇದಿಕೆ ಉದ್ಘಾಟನಾ ಸಮಾರಂಭ, 7ಕ್ಕೆ ಬೆಂಗಳೂರಿನ ವೀಣಾ ಪಾಣಿ ಸಂಗೀತ ವಿದ್ಯಾಲಯದಿಂದ ಗಾಯನ ವೈವಿಧ್ಯೆ ನೆರವೇರಲಿದೆ. ಆ. 28ರ ಸಂಜೆ 7ಕ್ಕೆ ಮೈಸೂರಿನ ಜೋಯಿಸ್‌ಕಲಾ ಪ್ರತಿಷ್ಠಾನ ಸಾಂಸ್ಕೃತಿಕ ಟ್ರಸ್ಟ್‌, ದೀಪ್ತಿ ಎಜುಕೇಷನಲ್‌ಟ್ರಸ್ಟ್‌ಕಲಾವಿದರಿಂದ ನಾಟ್ಯ ಮಯೂರಿ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಪಡಿಸುವರು.

ಆ. 29ರ ಸಂಜೆ 7.30ಕ್ಕೆ ಗಾಯಕರಾದ ಎ.ಡಿ. ಶ್ರೀನಿವಾಸನ್‌ ಮತ್ತು ತಂಡದವರಿದಂ ಭಾವತರಂಗ (ಭಾವಗೀತೆ) ಕಾರ್ಯಕ್ರಮ, ಆ. 30ರ ಸಂಜೆ 6.30ಕ್ಕೆ ನಗರದ ಪುಟ್ಟಪುಟ್ಟ ಮಕ್ಕಳಿಂದ ಫ್ಯಾನ್ಸಿ ಡ್ರಸ್‌ ಕಾರ್ಯಕ್ರಮ ಹಾಗೂ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನೆರವೇರಲಿದೆ.

ಆ. 31ರ ಬೆಳಗ್ಗೆ 8ಕ್ಕೆ ಶ್ರೀ ಮಹಾಗಣಪತಿ ದೇವಸ್ಥಾನದ ಮೂಲ ವಿಗ್ರಹಕ್ಕೆ 101 ಲೀಟರ್‌ಕ್ಷೀರಾಭಿಷೇಕ ನಂತರ 9ಕ್ಕೆ ಬೃಂದಾವನ ಬಡಾವಣೆಯ ಮಕ್ಕಳಿಗೆ ಚಿಣ್ಣರ ಮೇಳ ಹಾಗೂ ಟಾಂಗಾ ಸವಾರಿ ಏರ್ಪಡಿಸಿದೆ. ಬೆಳಗ್ಗೆ 10ಕ್ಕೆ ಬೃಂದಾವನ ಬಡಾವಣೆಯ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ. ಸಂಜೆ 7ಕ್ಕೆ ನಗರದ ಗಾಯಕರಿಂದ ಮೈಸೂರು ಗಾಯನ (ರಾಗ ಭಾವಗಳ ಸಮ್ಮಿಲನ ಚನಲಚಿತ್ರಗೀತೆಗಳು) ಪ್ರಸ್ತುತಪಡಿಸುವರು.

ಸೆ. 1 ರ ಸಂಜೆ 7ಕ್ಕೆ ಕರ್ನಾಟಕದ ಹೆಸರಾಂತಹ ಹಾಸ್ಯ ಕಲಾವಿದರಿಂದ ಗಿಚ್ಚಿ-ಗಿಲಿಗಿಲಿ ಬೃಂದಾವನ ಹಾಸ್ಯ ದರ್ಬಾರ್‌ ನಡೆಯಲಿದೆ.

ಸೆ. 2 ಬೆಳಗ್ಗೆ 8.30ಕ್ಕೆ ಗಣ ಹೋಮಕ್ಕೆ ಸಂಕಲ್ಪ ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಮತ್ತು ಪ್ರಸಾದ ವಿನಿಯೋಗವಾಗಲಿದೆ. ಸಂಜೆ 7ಕ್ಕೆ ಮೈಸೂರಿನ ಡಾ. ರೂಪಶ್ರೀ ಶೇಷಾದ್ರಿ ಅವರ ಗಾನ ಲಹರಿ ತಂಡದಿಂದ ರಸಸಂಜೆ (ಸಂಗೀತ ಸಂಜೆ) ನಡೆಯಲಿದೆ.

ಸೆ. 3ರ ಸಂಜೆ 7ಕ್ಕೆ ಸರಿಗಮಪ, ಕನ್ನಡ ಕೋಗಿಲೆ ಕಾರ್ಯಕ್ರಮದ ಪುರುಷೋತ್ತಮ್‌ ಅವರ ಪಿ.ವಿ.ಆರ್‌. ಈವೆಂಟ್ಸ್‌ ವತಿಯಿಂದ ಗಾನ ವೈಭವ ನಡೆಯಲಿದೆ.

ಸೆ. 4ರ ಸಂಜೆ 5ಕ್ಕೆ 1021 ಶ್ರೀ ಮಹಾಗಣಪತಿ ಮೂರ್ತಿಯ ವಿಸರ್ಜನೆ ನಂತರ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಶ್ರೀ ಮಹಾಗಣಪತಿಯನ್ನು ವಿಶೇಷ ತಾಳ ಮೇಳಗಳೊಂದಿಗೆ ಮೆರವಣಿಗೆ ನೆರವೇರಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ