ಕನ್ನಡಪ್ರಭ ವಾರ್ತೆ ಚಾಮರಾಜನಗರ
12ನೇ ಶತಮಾನದ ಶರಣರು ಮಾನವ ಕಲ್ಯಾಣಕ್ಕಾಗಿ ವಚನಗಳ ಮೂಲಕ ಸಾರಿದ ಸಂದೇಶಗಳಲ್ಲೇ ಸಹಕಾರ ತತ್ವ ಅಡಗಿದೆ ಎಂದು ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.ನಗೆರದ ವಿರಕ್ತ ಮಠದ ಆವರಣದಲ್ಲಿ ಹಮ್ಕಿಕೊಂಡಿದ್ದ ಶ್ರೀ ಸಿದ್ದಮಲ್ಲೇಶ್ವರ ಸೌಹಾರ್ದ ಸಹಕಾರಿ ನಿಯಮಿತದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಸ್ವಾರ್ಥ, ತನು ಶುದ್ದ, ಮನ ಶುದ್ಧ ಕಾಯಕದಲ್ಲಿ ತೊಡಗಿರುವ ರೈತಾಪಿ ಮತ್ತು ಇತರ ವರ್ಗಗಳ ಕಾಯಕ ಯೋಗಿಗಳಿಗೆ ಸಹಾಯ ಮಾಡಿ ಅವರನ್ನು ಆರ್ಥಿಕವಾಗಿ ಸಬಲಗೊಳಿಸುವುದೇ ಸಹಕಾರದ ಮುಖ್ಯ ಉದ್ದೇಶವಾಗಿರಬೇಕು ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಪರಸ್ಪರ ಸಹಕಾರವಿಲ್ಲದೇ ಏನನ್ನು ಮಾಡಲಾಗುವುದಿಲ್ಲ, ಬಸವಾದಿ ಶರಣರು ಪರಸ್ಪರ ಸಹಕಾರ ತತ್ವವನ್ನು ಸಾರಿ, ಸಮ ಸಮಾಜದ ನಿರ್ಮಾಣದಲ್ಲಿ ತೊಡಗಿಕೊಂಡರು, ಅವರ ತತ್ವದಾರ್ಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.ಇಂದು ಸಮಾಜದಲ್ಲಿ ಹಲವಾರು ಸಹಕಾರ ಸಂಘಗಳು ವಿಭಿನ್ನ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲವು ಒಂದಲ್ಲ ರೀತಿಯಲ್ಲಿ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಡಿವೆ. ಸಂಘದ ಆರ್ಥಿಕ ಬೆಳವಣಿಗೆ ಜೊತೆ, ಸಮಾಜಮುಖಿ ಸೇವೆಯಲ್ಲೂ ತೊಡಗಿಸಿಕೊಂಡು ಸಮಾಜದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಸಂಸ್ಕಾರವನ್ನು ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಇದರಿಂದ ಸಂಘದ ಬೆಳವಣಿಯಾಗೆಯೂ ಆಗಲಿದೆ. ಹಾಲಿ ಇರುವ ಸದಸ್ಯರು ಮತ್ತೊಂದು ಷೇರುಗಳನ್ನು ಹಾಕಿ ಸಂಘವನ್ನು ಮತಷ್ಟು ಬಲಗೊಲಿಸಿ ಎಂದರು.ಮುಖ್ಯ ಅತಿಥಿಯಾಗಿದ್ದ ಗುಬ್ಬಿ ತೋಟದಪ್ಪ ಮಹಿಳಾ ಉಚಿತ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಮಾತನಾಡಿ, ವಾರ್ಷಿಕ ಸಭೆಯಲ್ಲಿ ಅಗಲಿದ ಸದಸ್ಯರನ್ನು ನೆನಪು ಮಾಡಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಸಹಕಾರ ಸಂಘದ ಬೆಳವಣಿಗೆಗೆ ಪ್ರತಿಯೊಬ್ಬ ಸಹಕಾರಿಯ ಸಹಕಾರವು ಅತಿಮುಖ್ಯ, ಗ್ರಾಮೀಣ ಭಾಗದ ಸದಸ್ಯರನ್ನು ಹೆಚ್ಚು ನೊಂದಾವಣೆ ಮಾಡಿಕೊಂಡು ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಎಂದರು.ಸಮಾಜಮುಖಿ ಬೆಳವಣಿಗೆಯಲ್ಲಿ ತೊಡಗಿಸಿಕೊಂಡು, ಉತ್ತಮ ಜೀವನ ಕಟ್ಟಿಕೊಳ್ಳಲು ಸಹಕಾರ ಅತ್ಯಗತ್ಯವಾಗಿದೆ, ಪ್ರತಿಯೊಂದು ಕ್ಷೇತ್ರದಲ್ಲೂ ಸಹಕಾರದ ಅಗತ್ಯವಾಗಿದ್ದು ಬಸವ ತತ್ವದಡಿಯಲ್ಲಿ ಸಂಘವನ್ನು ಬೆಳೆಸಿ ಎಂದರು.ನಿಯಮಿತದ ಆಧ್ಯಕ್ಷ ಮಹದೇವಸ್ವಾಮಿ ( ರಾಮಸಮುದ್ರ ಬಾಬು) ಆಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಹಲವು ಮುಖಂಡರು ಮುಂದೆ ಬಂದು ಸಂಘಕ್ಕೆ ಹೆಚ್ಚಿನ ಷೇರು ನೀಡಿ ಸಂಘದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಸದಸ್ಯರ ಸಹಕಾರದಿಂದಾಗಿ ಸಂಘವು ಇಂದು 1,95,870 ರು. ಲಾಭದಲ್ಲಿದೆ ಎಂದರು.ಮಾಸ್ಟರ್ ಮಹದೇವಸ್ವಾಮಿ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಾಹಣಾದಿಕಾರಿ ಆರ್. ಸುನೀತಾ ವಾರ್ಷಿಕ ವರದಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಸಂಘದ ಶಿವೈಕ್ಯ ಸದಸ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸಭೆಯಲ್ಲಿ ಸಹಕಾರಿಗಳಾದ ಕೋಡಿಮೋಳೆ ರಾಜಶೇಖರ್, ಕಲ್ಮಹಳ್ಳಿ ನಟರಾಜ್, ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ, ಉಪಾಧ್ಯಕ್ಷರಾದ ಜೆ.ಪಿ. ದೊರೆಸ್ವಾಮಿ, ನಿರ್ದೇಶಕರಾದ ಪುಟ್ಟಸ್ವಾಮಿ., ವೈ.ಸಿ.ಪ್ರಕಾಶ್, ವಿ. ಗುರುಸ್ವಾಮಿ, ಶಿವಣ್ಣಚಾರ್, ಸಿ.ನಂದೀಶ್, ಶಾಂತಮಲ್ಲಪ್ಪ, ಬಿ.ಎಸ್. ಅನಿಲ್, ಸಿದ್ದಮಲ್ಲಪ್ಪ, ಇತರರು ಇದ್ದರು.
೨೬ಸಿಎಚ್‌ಎನ್೧ಚಾಮರಾಜನಗರದ ವಿರಕ್ತ ಮಠದ ಆವರಣದಲ್ಲಿ ಹಮ್ಕಿಕೊಂಡಿದ್ದ ಶ್ರೀ ಸಿದ್ದಮಲ್ಲೇಶ್ವರ ಸೌಹಾರ್ದ ಸಹಕಾರಿ ನಿಯಮಿತದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು.------