ಅನುಭವ ಮಂಟಪದ ತತ್ವ ಇಂದಿಗೂ ಪ್ರಸ್ತುತ: ವಿ.ಎಸ್. ಪಾಟೀಲ

KannadaprabhaNewsNetwork |  
Published : Jul 27, 2026, 02:45 AM IST
ಎಚ್26.7-ಡಿಎನ್‌ಡಿ1: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾಂಡೇಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುಸ್ಕಾರ ಕಾರ್ಯಕ್ರಮ ಉದ್ಘಾಟನೆ ಚಿತ್ರ | Kannada Prabha

ಸಾರಾಂಶ

ಬಸವಣ್ಣನವರ ವಚನ ಸಾಹಿತ್ಯ, 12ನೇ ಶತಮಾನದ ಅನುಭವ ಮಂಟಪದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ.

ಅಭಾವೀ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ

ಕನ್ನಡಪ್ರಭ ವಾರ್ತೆ ದಾಂಡೇಲಿ

ಬಸವಣ್ಣನವರ ವಚನ ಸಾಹಿತ್ಯ, 12ನೇ ಶತಮಾನದ ಅನುಭವ ಮಂಟಪದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ವಿ.ಎಸ್. ಪಾಟೀಲ ಹೇಳಿದರು.

ನಗರದ ಮೃತ್ಯುಂಜಯ ಮಠದ ಸಭಾಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ದಾಂಡೇಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೀರಶೈವ-ಲಿಂಗಾಯತ ಎರಡು ಪ್ರತ್ಯೇಕ ಧರ್ಮಗಳಲ್ಲ ಎರಡು ಒಂದೆ. ರಾಜಕೀಯ ಹಿತಾಸಕ್ತಿಯನ್ನು ಮುಂದೆ ಇಟ್ಟುಕೊಂಡು ನಮ್ಮ ವೀರಶೈವ ಲಿಂಗಾಯತ ಸಮಾಜವನ್ನು ಬೇರ್ಪಡಿಸಲು ಸಂಚು ನಡೆಯುತ್ತಿದೆ. ಆದರೆ ವೀರಶೈವ ಲಿಂಗಾಯತ ಸಮಾಜ ಯಾವತ್ತು ಒಂದೆ. ಸರ್ಕಾರದ ಸೌಲಭ್ಯಕ್ಕಾಗಿ ಸಮಾಜ ಆರ್ಥಿಕ ಹಿಂದುಳಿದ ಜನರಿಗಾಗಿ ಸರ್ಕಾರ ಹುಟ್ಟು ಹಾಕಿರುವ ಒಳಪಂಗಡಗಳನ್ನೆ ಮುಂದೆ ಇಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿರುವ ಈ ಸಂದರ್ಭ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಒಂದಾಗಿರಬೇಕು ಎಂದು ಕರೆ ನೀಡಿದರು.ಸಮಾಜದ ಮಠಮಾನ್ಯಗಳಲ್ಲಿ ಕಲಿತ ಲಕ್ಷಾಂತರ ಜನರು ವಿದ್ಯೆಗಳನ್ನು ಪಡೆದುಕೊಂಡು ದೊಡ್ಡದೊಡ್ಡ ವ್ಯಕ್ತಿಗಳಾಗಿದ್ದಾರೆ. ದಾಸೋಹ ಪರಂಪರೆಯನ್ನು ಕೊಡುತ್ತ ಬಂದಿರುವ ವೀರಶೈವ ಲಿಂಗಾಯತ ಸಮಾಜವು ಯಾವತ್ತು ಒಂದಾಗಿರಬೇಕು. ಆ ಒಗ್ಗಟ್ಟನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಡುತ್ತ ಬಂದಿದೆ. ಸಮಾಜ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಸಮಾಜದ ಪ್ರತಿನಿಧಿತ್ವ ಹೆಚ್ಚಾಗಬೇಕು. ಅದಕ್ಕಾಗಿ ಯುವಕರನ್ನು ಸರಿ ದಾರಿಯಲ್ಲಿ ತರುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ. ಗ್ರಾಮ ಮಟ್ಟದಿಂದ ತಾಲೂಕು ಮಟ್ಟವರೆಗೆ ಸಂಘಟನೆಯನ್ನು ಬಲಪಡಿಸಿ ಪ್ರತಿಯೊಬ್ಬ ಬಡ ಮಕ್ಕಳಿಗೂ ಶಿಕ್ಷಣವನ್ನು ಕೊಡಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ಸಿದ್ದಪ್ಪ ರುದ್ರಪ್ಪ ಕುರುಗುಂದ ಮಾತನಾಡಿ, ಯುವಕರನ್ನು ಸಂಘಟನೆಯಲ್ಲಿ ತೊಡಗಿಸಿಕೊಂಡು ನಾಯಕತ್ವ ಬೆಳೆಸುವುದು ನಮ್ಮ ಗುರಿ ಎಂದರು.

ಹೈಕೋರ್ಟ್‌ ನ್ಯಾಯವಾದಿ ಹೇಮಲತಾ ಶಿವಪ್ರಭು ಹಿರೇಮಠ, ದಾಂಡೇಲಿ ವೀರಶೈವ ಸೇವಾ ಸಂಘದ ಅದ್ಯಕ್ಷ ಬಸವರಾಜ ಕಲಶೆಟ್ಟಿ ಮಾತನಾಡಿದರು.

ಸಹಾಯಕ ಚುನಾವಣಾಧಿಕಾರಿ ಎಸ್.ಜಿ. ಬಿರಾದಾರ ಪ್ರಮಾಣವಚನ ಬೋಧಿಸಿದರು. ವೀರಶೈವ ಸೇವ ಸಂಘದ ಗೌರವ ಅಧ್ಯಕ್ಷ ಡಾ. ಶೇಖರ ಹಂಚಿನಾಳಮಠ, ಅಕ್ಕನ ಬಳಗದ ಅಧ್ಯಕ್ಷೆ ಶಾರದಾ ಸಿ. ಹಿರೇಮಠ, ಅಕ್ಕ ಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ಪಾರ್ವತಿ ಎಸ್. ಕುರಗುಂದ, ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಿಂಗರಾಜ ಮೊದಗಿ, ಸದಸ್ಯರಾದ ಚನ್ನಬಸಪ್ಪ ಮುರಗೋಡ ಮೊದಲಾದವರಿದ್ದರು.

ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪದಗ್ರಹಣ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರನ್ನು ಸನ್ಮಾನಿಸಲಾಯಿತು.

ಸಿದ್ದಪ್ಪ ರುದ್ರಪ್ಪ ಕುರುಗುಂಗ ಸ್ವಾಗತಿಸಿ, ನಿಂಗರಾಜ ಮೊದಗಿ ವಂದಿಸಿದರು. ಬಿ.ಎ. ನಾಗಶೆಟ್ಟಿಕೊಪ್ಪ ನಿರೂಪಿಸಿದರು. ಮಹಾಸಭಾದ ಜಿಲ್ಲಾ ಸಮಿತಿ ಸದಸ್ಯರಾದ ಅಶೋಕ ಪಾಟೀಲ, ಚಂದ್ರು ಮಾಳಿ, ತಾಲೂಕು ಘಟಕದ ಉಪಾಧ್ಯಕ್ಷರಾದ ಅಶ್ವಿನಕುಮಾರ, ಸುಜಾತಾ ಗಡದ, ಖಜಾಂಚಿ ಶಂಕರಯ್ಯ ಜಡೆಹಿರೇಮಠ, ಸಹಕಾರ್ಯದರ್ಶಿಗಳಾದ ಗಂಗಯ್ಯ ಹಿರೇಮಠ, ಸವಿತಾ ಮುಂಗರವಾಡಿ ಹಾಗೂ ಸಮಿತಿಯ ಸದಸ್ಯರು ಸಹಕರಿಸಿದರು. ದಾಂಡೇಲಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜ ಬಾಂಧವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಯೋಜನೆ, ಸೇವೆಗಳ ಅನುಷ್ಠಾನಕ್ಕೆ ಒತ್ತಾಯ
೮೦ನೇ ಸ್ವಾತಂತ್ರೋತ್ಸವದ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.