ಜೈನ ಧರ್ಮದ ತತ್ವ ಸಿದ್ಧಾಂತಗಳು ವಿಶ್ವಕ್ಕೆ ಮಾದರಿ

KannadaprabhaNewsNetwork |  
Published : May 09, 2026, 03:00 AM IST
ಕಾಗವಾಡ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕಾಗವಾಡ ಜೈನ ಧರ್ಮದ ತತ್ವ ಹಾಗೂ ಸಿದ್ದಾಂತಗಳು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ಸಮಾಜಕ್ಕೆ ಅವಶ್ಯವಾಗಿದೆ. ಜೈನ ಧರ್ಮದ ಮುನಿಗಳು ಜೀವೋ ಔರ ಜೀನೇ ದೋ ಎಂಬ ಸಂದೇಶ ನೀಡಿದ್ದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಜೈನ ಧರ್ಮದ ತತ್ವ ಹಾಗೂ ಸಿದ್ದಾಂತಗಳು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ಸಮಾಜಕ್ಕೆ ಅವಶ್ಯವಾಗಿದೆ. ಜೈನ ಧರ್ಮದ ಮುನಿಗಳು ಜೀವೋ ಔರ ಜೀನೇ ದೋ ಎಂಬ ಸಂದೇಶ ನೀಡಿದ್ದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕಾಗವಾಡ ತಾಲೂಕಿನ ಉಗಾರ ಬುದುಕ್ ಗ್ರಾಮದ ಪದ್ಮಾವತಿ ಮಂದಿರಲ್ಲಿ ನಿರ್ಮಿಸಿದ್ದ ಯಾತ್ರಿ ನಿವಾಸ, ಭೋಜನ ಶಾಲೆ ಹಾಗೂ ಸಭಾ ಭವನದ ಉದ್ಘಾಟನೆಯ ನಿಮಿತ್ಯ ಏರ್ಪಡಿಸಿದ ಐದು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜೈನ ಧರ್ಮ ಹಲವಾರು ತತ್ವಾದರ್ಶಗಳನ್ನು ಪಾಲಿಸಿಕೊಂಡು ಬರುತ್ತಿದ್ದು, ಈ ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿಯೊಂದು ಜೀವಿಯೂ ತಾನು ಬದುಕಬೇಕು, ಇತರರಿಗೂ ಬದುಕಲು ಅವಕಾಶ ಮಾಡಿಕೊಡಬೇಕು ಎಂಬ ಜೈನ ಧರ್ಮದ ತತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಇದು ಕೇಲವ ಜೈನ ಧರ್ಮಕ್ಕೆ ಮಾತ್ರ ಸೀಮಿತವಾಗದೇ ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಧರ್ಮಕ್ಕೆ ಪುರಾತನ ಇತಿಹಾಸವಿದ್ದು, ನಾವೆಲ್ಲರೂ ಜೈನ ಧರ್ಮವನ್ನು ಗೌರವಿಸಬೇಕು. ಜೈನ ಧರ್ಮದವರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದು, ಸರ್ಕಾರದಿಂದ ಅನೇಕ ಸೌಲಭ್ಯಗಳು ದೊರೆಯುತ್ತವೆ. ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಲಕ್ಷ್ಮಣ ಸವದಿ ಕಿವಿಮಾತು ಹೇಳಿದರು.ಪದ್ಮಾವತಿ ಮಂದಿರದ ಧರ್ಮದರ್ಶಿಗಳಾದ ಶೀತಲಗೌಡ ಪಾಟೀಲ ಮಾತನಾಡಿ, ಉಗಾರ ಪದ್ಮಾವತಿ ಮಂದಿರವು ಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿಗೆ ಜೈನ ಸೇರಿದಂತೆ ಹಲವಾರು ಧರ್ಮಿಯರು ನಡೆದುಕೊಳ್ಳುತ್ತಾರೆ. ಈ ದೇವಿಯ ಮುಂದೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಇಡೇರಿಸುವಂತೆ ಬೇಡಿಕೊಂಡರೆ ಖಂಡಿತವಾಗಿಯೂ ಇಡೇರುತ್ತದೆ. ಶಾಸಕ ಲಕ್ಷ್ಮಣ ಸವದಿಯವರು ಈ ಕ್ಷೇತ್ರವನ್ನು ನೋಡಿ ತಾವಾಗಿಯೇ ₹ 5 ಲಕ್ಷ್ಮ ದೇಣಿಗೆ ಘೋಷಿಸಿರುವುದು ಸಂತಸ ತಂದಿದೆ ಎಂದರು.

ಈ ವೇಳೆ ಮಂದಿರದ ವತಿಯಿಂದ ಅಥಣಿ ಶಾಸಕ ಲಕ್ಷ್ಮಣ ಸವದಿ, ಮಹಾರಾಷ್ಟ್ರದ ಮಾಜಿ ಸಚಿವ ರಾಜೇಂದ್ರ ಪಾಟೀಲ(ಯಡ್ರಾಂಕರ), ಪುರಸಭಾ ಸದಸ್ಯ ರಾಜು ಗುಡೋಡಗಿ ಅವರನ್ನು ಶೀತಲಗೌಡ ಪಾಟೀಲ, ವೃಷಭ ಪಾಟೀಲ, ಅಣ್ಣಾಗೌಡ ಪಾಟೀಲ ಹಾಗೂ ಮತ್ತಿತರರು ಸನ್ಮಾನಿಸಿದರು. ಈ ವೇಳೆ ಅಣ್ಣಾಸಾಬ ನಂದಗಾಂವ, ವಜ್ರಕುಮಾರ ಮಗದುಮ್, ಆದೇಶ ವಸವಾಡೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

-------

ಕೋಟ್‌ಜೈನ ಧರ್ಮದ ಆಚಾರ-ವಿಚಾರಗಳಲ್ಲಿ ಇಂದು ಕೂಡ ಯಾವುದೇ ಬದಲಾವಣೆ ಆಗಿಲ್ಲ. ಬದುಕುವ ಹಕ್ಕು ಎಲ್ಲಾ ಜೀವಿಗಳಿಗೂ ಸಮಾನವಾಗಿಯೇ ಇದೆ. ತಾವೂ ಬದುಕಿ ಇತರ ಜೀವಿಗಳಿಗೂ ಸಮಾನ ಅವಕಾಶ ನೀಡುವ ಜೈನ ಧರ್ಮ ಶ್ರೇಷ್ಠ ಧರ್ಮವಾಗಿದೆ. ಭಗವಾನ ಮಹಾವೀರ ಬೋಧಿಸಿದ ತತ್ವಗಳು ವಿಶ್ವಮಾನ್ಯವಾಗಿದ್ದು, ಸಾರ್ವಕಾಲಿಕ ಮೌಲ್ಯ ಹೊಂದಿದೆ. ಲಕ್ಷ್ಮಣ ಸವದಿ, ಅಥಣಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಎಸ್‌ಎಫ್‌ ಯೋಧರ ವಜಾ, ಅನ್ಯಾಯ
ಮನರೇಗಾ ಪರಿಣಾಮಕಾರಿ ಅನುಷ್ಠಾನಕ್ಕೆ ಜಾರಿಗೆ ತನ್ನಿ