ಪೊಲೀಸರಿಗೆ ಸಾರ್ವಜನಿಕರು ಸಹಕರಿಸಬೇಕು

KannadaprabhaNewsNetwork | Published : Oct 22, 2024 12:06 AM

ಸಾರಾಂಶ

ಹಬ್ಬಗಳನ್ನು ಸಂಭ್ರದಿಂದ ಯಾವ ರೀತಿ ಆಚರಿಸಬೇಕು, ಹಬ್ಬಕ್ಕೆ ಏನು ಸಿಹಿ ಮಾಡಬೇಕು, ಎಂದು ಎಲ್ಲರು ಯೋಚಿಸಿದರೆ, ಹಬ್ಬಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು, ಯಾವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂಬುದಾಗಿ ಪೊಲೀಸರು ಯೋಚಿಸುತ್ತಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ನಗರ ಹೊರವಲಯದ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೊಲೀಸ್‌ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಜನತೆಯ ಸಹಕಾರ ಅಗತ್ಯ

ಹಬ್ಬಗಳನ್ನು ಸಂಭ್ರದಿಂದ ಯಾವ ರೀತಿ ಆಚರಿಸಬೇಕು, ಹಬ್ಬಕ್ಕೆ ಏನು ಸಿಹಿ ಮಾಡಬೇಕು, ಎಂದು ಎಲ್ಲರು ಯೋಚಿಸಿದರೆ, ಹಬ್ಬಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು, ಯಾವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂಬುದಾಗಿ ಪೊಲೀಸರು ಯೋಚಿಸುತ್ತಾರೆ. ಆದ್ದರಿಂದ ಸಾರ್ವಜನಿಕರು ಕಾನೂನು ಪಾಲಿಸುತ್ತಾ ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.

ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ನಿರಂತರವಾಗಿ ಸಾರ್ವಜನಿಕರಿಗಾಯೇ ದುಡಿಯುತ್ತಿರುತ್ತಾರೆ ಹೀಗಾಗಿ ಅವರ ಕುಟುಂಬಗಳ ಕಡೆದು ಗಮನ ಕೊಡುವುದು ಅತೀ ಅವಶ್ಯಕ. ತಮ್ಮ ತಮ್ಮ ಕುಟುಂಬಗಳ ರಕ್ಷಣೆಗೆ ವಿಮಾದಂತಹ ಸೌಲಭ್ಯಗಳನ್ನು ಮಾಡಿಸಿಕೊಳ್ಳುವುದು ಅಗತ್ಯ. ಜಿಲ್ಲೆಯ ಪೊಲೀಸ್ ಇಲಾಖೆ ಶೇ.100ರಷ್ಟು ವಿಮಾ ಸೌಲಭ್ಯವನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ತ್ಯಾಗ, ಬಲಿದಾನದ ಸ್ಮರಣೆ

ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ, 1959ರ ಅಕೋಬರ್ 21ರಂದು ಚೀನಾ-ಭಾರತ ಗಡಿ ಭಾಗದ ಹಾಟ್‌ ಸ್ಟ್ರೀಗ್‌ ಪೋಸ್ಟ್‌ ಹತ್ತಿರ ಸಿಆರ್‌ಪಿಎಫ್‌ ಡಿಎಸ್‌ಪಿ ಕರಣಸಿಂಗ್‌ ನೇತೃತ್ವದಲ್ಲಿಪೊಲೀಸ್‌ ದಳವು ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಚೀನಾ ಸೈನಿಕರು ದಾಳಿ ನಡೆಸಿದಾಗ ಪ್ರಾಣತೆತ್ತ 10 ಭಾರತೀಯ ಪೊಲೀಸರ ಬಲಿದಾನದ ಸ್ಮರಣೆ ಪ್ರತೀಕವಾಗಿ ಪ್ರತಿ ವರ್ಷ ಅಕ್ಟೋಬರ್ 21ರಂದು ದೇಶಾದ್ಯಂತ ಎಲ್ಲ ಜಿಲ್ಲಾಪೊಲೀಸ್‌ ಕೇಂದ್ರ ಸ್ಥಾನಗಳಲ್ಲಿಪೊಲೀಸ್‌ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.ಪೊಲೀಸ್‌ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿಗಳಾದ ಪಿ.ಎನ್.ರವೀಂದ್ರ, ಜಿ.ಪಂ.ಸಿಇಓ.ಪ್ರಕಾಶ್.ಜಿ.ಟಿ.ನಿಟ್ಟಾಲಿ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ. ಅಪರಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್,ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ರಾಜಾ ಇಮಾಮ್ ಖಾಸಿಮ್, ಡಿವೈಎಸ್ಪಿಗಳಾದ ಮುರಳೀಧರ್,ನಾಗೇಂದ್ರಪ್ರಸಾದ್, ನಿವೃತ್ತ ಪೋಲಿಸ್ ಸಂಘದ ಅಧ್ಯಕ್ಷ ಯಲ್ಲಪ್ಪ ಪುಷ್ಪಗುಚ್ಛ ಅರ್ಪಿಸಿದರು.

ಪೊಲೀಸ್‌ ಹುತಾತ್ಮರ ಗೌರವ ಸೂಚಕವಾಗಿ ಪರೇಡ್‌ ಕಮಾಂಡರ್‌ ಆರ್‌ಎಸ್‌ಐ ಮಹದೇವ್ ನೇತೃತ್ವದಲ್ಲಿ ಗಾಳಿಯಲ್ಲಿಮೂರು ಸುತ್ತು ಗುಂಡು ಹಾರಿಸಿದ ನಂತರ ಮೌನಾಚರಣೆ ಮಾಡಲಾಯಿತು. ಎಎಸ್ಐ ವೆಂಕಟೇಶ್ ನೇತೃತ್ವದಲ್ಲಿಪೊಲೀಸ್‌ ಬ್ಯಾಂಡ್‌ ಪ್ರದರ್ಶನ ನಡೆಯಿತು.

Share this article