ಲಂಚ ಕೊಡುವ ಸಾರ್ವಜನಿಕರು ಸುಳ್ಳುಗಾರರು ನೀನು ಮಾತ್ರ ‘ಸತ್ಯ’ವಂತನೇ...?

KannadaprabhaNewsNetwork |  
Published : Jan 18, 2024, 02:03 AM IST
17ಕೆಎಂಎನ್ ಡಿ21ಮದ್ದೂರು ಸಬ್ ರಿಜಿಸ್ಟರ್ ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ ನೀಡಿ ಲಂಚದ ಆರೋಪದ ವಿರುದ್ಧ ಅಧಿಕಾರಿ ಎಸ್. ದಿನೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. | Kannada Prabha

ಸಾರಾಂಶ

ಲಂಚ ಕೊಡುವ ಸಾರ್ವಜನಿಕರು ಸುಳ್ಳುಗಾರರು ನೀನು ಮಾತ್ರ ಸತ್ಯವಂತನೇ...? ಲಂಚ ವಸೂಲಿ ಮಾಡಲು ನಿಮ್ಮ ಪರವಾಗಿ ದಲ್ಲಾಳಿಗಳನ್ನು ನೇಮಿಸಿಕೊಂಡಿದ್ದೀರಿ. ಅವರು ಜನರಿಂದ ಹಣ ವಸೂಲಿ ಮಾಡಿ ನಿಮಗೆ ಕೊಡುತ್ತಾರೆ. ಹೀಗಾಗಿ ಜನರಿಂದ ನೇರವಾಗಿ ಹಣ ಸ್ವೀಕರಿಸದ ನೀವು ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡಲು ನಿಮಗೆ ನಾಚಿಕೆ ಇಲ್ಲವೇ. ಉಪ ನೋಂದಣಾಧಿಕಾರಿಗಳಿಗೆ ಸಚಿವರ ತರಾಟೆ.

ಕನ್ನಡಪ್ರಭ ವಾರ್ತೆ ಮದ್ದೂರುಪಟ್ಟಣದ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡರು, ಸಮುಚ್ಛಯದ ಸಬ್ ರಿಜಿಸ್ಟರ್ ಕಚೇರಿಗೂ ಭೇಟಿ ನೀಡಿದ್ದ ಜನಜಂಗುಳಿ ಕಂಡು ಉಪ ನೋಂದಣಿ ಅಧಿಕಾರಿ ಎಸ್.ದಿನೇಶ್ ಅವರನ್ನು ತೆಗೆದುಕೊಂಡರು.

ವಿವಾಹ ನೋಂದಣಿ, ಜಮೀನು ಮತ್ತು ನಿವೇಶನಗಳ ನೋಂದಣಿಗಾಗಿ ಬರುವ ಸಾರ್ವಜನಿಕರಿಗೆ ಸಮಯ ನಿಗದಿಗೊಳಿಸಿ ಪ್ರಾಧಿನಿತ್ಯದ ಆಧಾರದ ಮೇಲೆ ನೋಂದಣಿ ಪೂರ್ಣಗೊಳಿಸಿಕೊಡಿ ಎಂದು ಸಚಿವರು ಸೂಚನೆ ನೀಡಿದರು.

ನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ದಲ್ಲಾಳಿಗಳ ಮೂಲಕ ಹಣವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅಧಿಕಾರಿಗಳ ಎದುರೆ ಸಚಿವರಿಗೆ ದೂರು ನೀಡಿದರು.

ದಲ್ಲಾಳಿಗಳು ಮತ್ತು ಯಾವುದೇ ಕಚೇರಿಗಳಲ್ಲಿ ಕೆಲಸ ಮಾಡದ ವ್ಯಕ್ತಿಗಳು ಸಾರ್ವಜನಿಕರ ನೋಂದಣಿ ಕೆಲಸ ಕಾರ್ಯಗಳನ್ನು ನೋಂದಣಿಗೆ ತರುವ ಹಂತದಲ್ಲಿ ನಾಲ್ಕರಿಂದ ಐದು ಸಾವಿರ ಹಣ ವಸೂಲಿ ಮಾಡುತ್ತಿದ್ದಾರೆ. ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಇಂತಿಷ್ಟೇ ಲಂಚ ನೀಡಬೇಕು ಎಂದು ಮಾತುಕತೆ ನಡೆಸಿದ ನಂತರ ನೋಂದಣಿ ಕೆಲಸಕ್ಕೆ ಕೈ ಹಾಕುತ್ತಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದರು.

ನಂತರ ಸಾರ್ವಜನಿಕರ ದೂರಿನ ಬಗ್ಗೆ ಸಚಿವ ಕೃಷ್ಣ ಭೈರೇಗೌಡ ನೋಂದಣಿ ಅಧಿಕಾರಿ ಎಸ್.ದಿನೇಶ್ ಅವರನ್ನು ದೂರಿನ ಬಗ್ಗೆ ಪ್ರಶ್ನಿಸಿದರು. ಸಚಿವರ ಪ್ರಶ್ನೆಗೆ ಉತ್ತರ ನೀಡಲು ತಡ ಬಡಾಯಿಸಿದ ದಿನೇಶ್ ಧರ್ಮಸ್ಥಳದ ಮಂಜುನಾಥ ಸ್ವಾಮಿ ಆಣೆಗೂ ನಾನು ಕೆಲಸ ಕಾರ್ಯಗಳಿಗೆ ಲಂಚ ಸ್ವೀಕರಿಸುವುದಿಲ್ಲ ಎಂದು ಅಳಲು ತೋಡಿಕೊಂಡರು.

ಇದರಿಂದ ಸಿಟ್ಟಿಗೆದ್ದ ಸಚಿವರು ಲಂಚ ಕೊಡುವ ಸಾರ್ವಜನಿಕರು ಸುಳ್ಳುಗಾರರು ನೀನು ಮಾತ್ರ ಸತ್ಯವಂತನೇ. ಲಂಚ ವಸೂಲಿ ಮಾಡಲು ನಿಮ್ಮ ಪರವಾಗಿ ದಲ್ಲಾಳಿಗಳನ್ನು ನೇಮಿಸಿಕೊಂಡಿದ್ದೀರಿ. ಅವರು ಜನರಿಂದ ಹಣ ವಸೂಲಿ ಮಾಡಿ ನಿಮಗೆ ಕೊಡುತ್ತಾರೆ. ಹೀಗಾಗಿ ಜನರಿಂದ ನೇರವಾಗಿ ಹಣ ಸ್ವೀಕರಿಸದ ನೀವು ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡಲು ನಿಮಗೆ ನಾಚಿಕೆ ಇಲ್ಲವೇ ಎಂದು ಸಚಿವರು ಕಿಡಿಕಾರಿದರು.

ಅಧಿಕಾರಿಗಳು ಇಂತಹ ಕೆಟ್ಟ ಬುದ್ಧಿ ಬಿಟ್ಟು ಜನರಿಗೆ ಕೈಲಾದ ಸಹಾಯ ಮಾಡಿ ಇದರಿಂದ ಆ ದೇವರು ಮೆಚ್ಚುತ್ತಾನೆ ಎಂದು ಸಚಿವ ಕೃಷ್ಣ ಬೈರೇಗೌಡ ಬುದ್ಧಿಮಾತು ಹೇಳಿದರು.ಭ್ರಷ್ಟಾಚಾರ ಹೆಚ್ಚಳಕ್ಕೆ ಸಚಿವರ ಆಕ್ರೋಶಮದ್ದೂರು ತಾಲೂಕ ಕಚೇರಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಧನ ಪಿಚಾಚಿಗಳಾಗಿದ್ದಾರೆ ಎಂದು ಸಚಿವ ಕೃಷ್ಣ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕ ಕಚೇರಿಗೆ ಭೇಟಿ ನೀಡಿದ ವೇಳೆ ತಾಲೂಕು ಕಚೇರಿಯಲ್ಲಿ ಲಂಚ ನೀಡದೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ರೈತರು ಸಚಿವರಿಗೆ ದೂರು ನೀಡಿದರು.

ನಂತರ ಸಾರ್ವಜನಿಕರ ಸಮ್ಮುಖದಲ್ಲಿಯೇ ತಹಸೀಲ್ದಾರ್ ಸೋಮಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಭೈರೇಗೌಡ, ತಾಲೂಕು ಕಚೇರಿಯಲ್ಲಿ ಇರುವಂತಹ ಭ್ರಷ್ಟಾಚಾರ ರಾಜ್ಯದ ಯಾವುದೇ ಕಚೇರಿಯಲ್ಲಿ ಇಲ್ಲ. ನಿಮಗೆ ಮಾನ ಮರ್ಯಾದೆ ಇಲ್ಲವೇ ಎಂದು ಕಿಡಿಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ