ಕನ್ನಡಪ್ರಭ ವಾರ್ತೆ ಶಿರಾ ಸಹಕಾರ ಎಂದರೆ ಬಡವರಿಗೆ ಸಾಲ ನೀಡಿ, ಉಳ್ಳವರಿಂದ ಲಾಭ ಪಡೆದು ಬಡವರ ಏಳಿಗೆಗೆ ಶ್ರಮಿಸುವುದೇ ಆಗಿದೆ ಎಂದು ಟೌನ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಆರಾಧ್ಯ ಮಾತನಾಡಿ ಹೇಳಿದರು.ಅವರು ನಗರದ ಟೌನ್ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಸಹಕಾರ ಕ್ಷೇತ್ರದಲ್ಲಿ ಹಲವು ಸೇವೆಗಳನ್ನು ಸಲ್ಲಿಸಿ ದೀನ ದಲಿತರ ಏಳಿಗೆಗಾಗಿ ಶ್ರಮಿಸಿದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸುವ ಮೂಲಕ ಅವರಿಗೆ ಸಹಕಾರ ಸಂಘದಿಂದ ಗೌರವ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್. ರವಿ ಮಾತನಾಡಿ ೧೦೦ ಕೋಟಿ ಕೃಷಿಕರಿಗೆ ಸಾಲ ಹಾಗೂ ನೂರು ಕೋಟಿ ಕೃಷಿಯೇತರ ಚಟುವಟಿಕೆಗಳಿಗೆ ಸಾಲ ನೀಡುವುದರಿಂದ ಕೃಷಿ ಚಟುವಟಿಕೆಗಳಿಂದ ಆದ ನಷ್ಟವನ್ನು ಸರಿದೂಗಿಸಬಹುದು ಎಂಬ ತತ್ವದಿಂದ ಇವತ್ತು ಡಿಸಿಸಿ ಬ್ಯಾಂಕ್ ಅನ್ನು ರಾಜ್ಯಕ್ಕೆ ಎರಡನೇ ಸ್ಥಾನಕ್ಕೆ ಕೊಂಡೊಯ್ದಿರುವ ಹೆಗ್ಗಳಿಕೆ ಕೆ. ಎನ್. ರಾಜಣ್ಣ ಅವರಿಗೆ ಸಲ್ಲುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಜಿಎಸ್ ರವಿ, ಎಸ್ ಎಲ್ ರಂಗನಾಥ್, ರಾಮಚಂದ್ರಪ್ಪ, ಹೆಬ್ಬಾಕ ಮಲ್ಲಿಕಾರ್ಜುನ್ ಹಾಗೂ ಚಂದ್ರಶೇಖರ್ ಆರಾಧ್ಯ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತುಮಕೂರು ವೀರಶೈವ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರುದ್ರೇಶ್, ನಿರ್ದೇಶಕ ಮಂಜುನಾಥ್, ತುಮಕೂರು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಗಿರೀಶ್ , ಶಿರಾ ಟೌನ್ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಶಾಂತರಾಜು, ನಿರ್ದೇಶಕರಾದ ಜಯಪಾಲ್, ಟೌನ್ ವಿವಿದ್ಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಥಾಮಸ್ ಕುಟ್ಟಿ, ನಿರ್ದೇಶಕರುಗಳಾದ ಅರೇಹಳ್ಳಿ ರಮೇಶ್, ಮೋಹನ್, ರಂಗರಾಜು, ಸಜ್ಜಾದ್ ಹುಸೇನ್, ಸುರೇಶ್, ರಾಜಾ ರವೀಂದ್ರ, ಸತ್ಯನಾರಾಯಣ ಗುಪ್ತ, ಲಕ್ಷ್ಮಿ, ಗಾಯತ್ರಿ ದೇವಿ, ಕಾರ್ಯದರ್ಶಿ ನಟರಾಜ್, ರೂಪೇಶ್ ಕೃಷ್ಣಯ್ಯ ,ಎಂ ಎನ್ ರಾಜು ಸೇರಿದಂತೆ ಹಲವರು ಹಾಜರಿದ್ದರು.