ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟವುದೇ ದಲಿತ ದಿನದ ಉದ್ದೇಶ:ಎಸ್.ಎನ್.ಹಾಲಪ್ಪ

KannadaprabhaNewsNetwork |  
Published : Jun 15, 2026, 02:45 AM IST
14 ಬೀರೂರು 1ಬೀರೂರು ಪೊಲೀಸ್ ಠಾಣೆಯಲ್ಲಿ ಭಾನುವಾರ ಠಾಣಾ ವ್ಯಾಪ್ತಿಯ ದಲಿತ ಕಾಲೋನಿಗಳ ಮುಖಂಡರ ಸಮ್ಮುಖದಲ್ಲಿ  ದಲಿತ್ ಡೇ ಕಾರ್ಯಕ್ರಮ ನಡೆಯಿತು, ಸಿಪಿಐ ಹಾಲಪ್ಪ, ಪಿಎಸೈ ಧನಂಜಯ್, ದಲಿತ ಮುಖಂಡರುಗಳು ಇದ್ದರು. | Kannada Prabha

ಸಾರಾಂಶ

ಬೀರೂರುಪೊಲೀಸ್ ಇಲಾಖೆ ಸರ್ಕಾರದ ಆದೇಶದಂತೆ ದಲಿತರಿಗೆ ರಕ್ಷಣೆ ನೀಡುವುದು ಮತ್ತು ಅವರ ದೂರುಗಳಿಗೆ ತಕ್ಷಣ ಸ್ಪಂದಿಸಿ, ಇಲಾಖಾ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಯನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸುವುದು ದಲಿತ ದಿನ ಮುಖ್ಯ ಉದ್ದೇಶ ಎಂದು ವೃತ್ತನಿರೀಕ್ಷಕ ಹಾಲಪ್ಪ ಹೇಳಿದರು.

ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯ ದಲಿತ್ ಡೇ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಬೀರೂರು

ಪೊಲೀಸ್ ಇಲಾಖೆ ಸರ್ಕಾರದ ಆದೇಶದಂತೆ ದಲಿತರಿಗೆ ರಕ್ಷಣೆ ನೀಡುವುದು ಮತ್ತು ಅವರ ದೂರುಗಳಿಗೆ ತಕ್ಷಣ ಸ್ಪಂದಿಸಿ, ಇಲಾಖಾ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಯನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸುವುದು ದಲಿತ ದಿನ ಮುಖ್ಯ ಉದ್ದೇಶ ಎಂದು ವೃತ್ತನಿರೀಕ್ಷಕ ಹಾಲಪ್ಪ ಹೇಳಿದರು.ಬೀರೂರು ಪೊಲೀಸ್ ಠಾಣೆಯಲ್ಲಿ ಭಾನುವಾರ ಠಾಣಾ ವ್ಯಾಪ್ತಿಯ ದಲಿತ ಕಾಲೋನಿಗಳ ಮುಖಂಡರ ಸಮ್ಮುಖದಲ್ಲಿ ದಲಿತ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ,ಮಾತನಾಡಿದರು.ನಾನು ಈ ಠಾಣೆಗೆ ಹೊಸದಾಗಿ ವೃತ್ತನಿರೀಕ್ಷಕನಾಗಿ ಆಗಮಿಸಿದ್ದೇನೆ, ಬೀರೂರು ಠಾಣಾ ವ್ಯಾಪ್ತಿಯ ಹಳ್ಳಿ ಗಳ ಮುಖಂಡರನ್ನು ಭೇಟಿ ಮಾಡಿ ಅಲ್ಲಿನ ಸಮಸ್ಯೆ ಬಗೆಹರಿಸುವುದು ನನ್ನ ಮೊದಲ ಆದ್ಯತೆ. ನಿಮ್ಮೆಲ್ಲರ ಸಹಕಾರ ಮುಖ್ಯ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದುಕೊರತೆಆಲಿಸಲು ಮತ್ತು ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಕರ್ನಾಟಕ ಪೊಲೀಸ್ ಇಲಾಖೆ ಪ್ರತಿ ತಿಂಗಳ 2ನೇ ಭಾನುವಾರವನ್ನು ಕಡ್ಡಾಯವಾಗಿ ''''''''ದಲಿತರ ದಿನ'''''''' ಎಂದು ಆಚರಿಸಲು ಇಲಾಖೆ ನಿರ್ಧರಿಸಿದ್ದು ಅದರಂತೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ತಮ್ಮ ಸಮಸ್ಯೆ ತಿಳಿಸಿದರೆ ಅವುಗಳನ್ನು ಬಗೆಹರಿಸಲಾಗುವುದು ಎಂದರು.ಕಳೆದ ಸಭೆ ಅನುಪಾಲನ ವರದಿ ವಾಚಿಸಿದ ಪಿಎಸೈ ಧನಂಜಯ್, ನಿಮ್ಮ 12 ಸಮಸ್ಯೆಗಳ ಪೈಕಿ 11ನ್ನು ಬಗೆಹರಿಸಲಾಗಿದೆ. ಉಳಿದ ಸಮಸ್ಯೆ ಬಗೆಹರಿಸಲು ಸ್ವಲ್ವ ಕಾಲಾವಕಾಶ ನೀಡಿ ಎಂದರು.ಈ ಹಂತದಲ್ಲಿ ಮಾತನಾಡಿದ ಡಿಎಸ್‌ಎಸ್ ಮುಖಂಡ ಮಲ್ಲಿಕಾರ್ಜುನ್, ಕೆಲವು ಸರ್ಕಾರದವರು ಬಡವರಿಗೆ ಅಕ್ಕಿ ನೀಡುವ ಸೊಸೈಟಿಯವರು, ಪ್ರತಿ ತಿಂಗಳು ರೇಷನ್ ಪಡೆಯಲು ಹೋದಾಗ ಹೆಬ್ಬೆಟ್ ಕೊಟ್ಟ ನಂತರ 10ರೂ ಕೇಳುತ್ತಾರೆ. ಇದನ್ನು ಪಡೆಯಲು ಸರ್ಕಾರ ಅಥವಾ ಆಹಾರ ಇಲಾಖೆ ಆದೇ ಶವಿದೆಯೋ ಎಂದು ಪ್ರಶ್ನಿಸಿದ ಅವರು, ದಲಿತರ ಮೇಲೆ ದೌರ್ಜನ್ಯ ವೆಸಗಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ದೂರು ನೀಡಿದರೆ ಅಪರಾಧಿಗಳನ್ನು ತಕ್ಷಣ ಬಂದಿಸುವುದಿಲ್ಲ ಏಕೆ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರ ನೀಡಿದ ಪಿಎಸೈ ಧನಂಜಯ್, ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು, ಜೊತೆಗೆ ಅಟ್ರಾಸಿಟಿ ಪ್ರಕರಣ ಬಂದಾಗ ಅಪರಾಧಿಗಳನ್ನು ಬಂದಿಸಲು ಕೆಲವು ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.ದಲಿತ ಮುಖಂಡ ಬಿ,ಟಿ.ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದೆ. ಅಂತವರ ಮೇಲೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಬೇಕು. ಪಟ್ಟಣ ವ್ಯಾಪ್ತಿಯಲ್ಲಿ ಗಾಂಜ ಗಮಲು ಹೆಚ್ಚಾಗುತ್ತಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಆದಷ್ಟು ಬೇಗ ಇದಕ್ಕೆ ಕಡಿವಾಣ ಹಾಕಬೇಕೆಂದರು.ಇದಕ್ಕೆ ಉತ್ತರಿಸಿದ ಪಿಎಸೈ, ಇತ್ತೀಚಿಗಷ್ಟೆ ಗಾಂಜ ಸೇವನೆ ಮಾಡುತ್ತಿದ್ದ ಕೆಲವರನ್ನು ಗುರುತಿಸಿ ಕೇಸು ದಾಖಲಿಸಲಾಗಿದೆ. ಸಾರ್ವಜನಿಕರ ಗಮನಕ್ಕೇನಾದರು ಗಾಂಜ ಸೇವನೆ ಬಂದರೆ ತಕ್ಷಣ ಪೊಲೀಸ್ ಠಾಣೆಗೆ ತಿಳಿಸಿದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.ಮೈಲಾಲಿAಗೇಶ್ವರ ಸ್ವಾಮಿಯ ಗೌಡರಾದ ದಕ್ಷಿಣಮೂರ್ತಿ ಮಾತನಾಡಿ, ಸರಸ್ವತಿಪುರಂ ಬಡಾವಣೆಯಲ್ಲಿ ಪಟ್ಟಣದಲ್ಲಿನ ಹೆಚ್ಚು ದಲಿತರು ವಾಸಿಸುತ್ತಿದ್ದು, ಯುವಕರು ಪ್ಲಂಬಿಗ್, ಬಾರ ಬೆಂಡಿಗ್, ಗಾರೆ ಕೆಲಸ ಮತ್ತಿತರ ಕಾರ್ಯ ಮಾಡುತ್ತಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಯಿಂದ ನಮ್ಮ ಬಡಾವಣೆಯಲ್ಲಿಯೇ ಆರ.ಟಿ.ಒ ಅಧಿಕಾರಿಗಳನ್ನು ಕರೆಸಿ ಡಿಎಲ್ ಮಾಡಿಸುವ ವ್ಯವಸ್ಥೆ ಮಾಡಿ ಎಂದರು.ಸ್ಥಳೀಯ ಬಿ.ಎನ್, ಗಣೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಲ್ಯಾಣ ಮಂದಿರ ಗಳಲ್ಲಿ ಮಂಗಳ ಮುಖಿಯರ ಕಾಟ ಹೆಚ್ಚಾಗಿದೆ. ಹಣಕ್ಕೆ ಬೇಡಿಕೆ ಇಟ್ಟು ವಧು-ವರರ ತಂದೆತಾಯಿಗಳಿಗೆ ಕಿರುಕುಳ ನೀಡುತ್ತಾರೆ ಅದನ್ನು ತಪ್ಪಿಸಿ ಎಂದರು.ದೊಡ್ಡಗಟ್ಟದ ಗಂಗರಾಜು ಮಾತನಾಡಿ, ನಮ್ಮ ದೊಡ್ಡಘಟ್ಟ ಗ್ರಾಮಕ್ಕೆ ತೆರಳಲು ಹೈವೆಯವರು ಸರ್ವಿಸ್ ರಸ್ತೆಗೆ ಜಾಗ ಬಿಡದೆ ಅವೈಜ್ಞಾನಿಕ ಕಾಮಗಾರಿ ನಡೆಸಿ ಓಡಾಡಲು ರಸ್ತೆ ಇಲ್ಲದಂತಾಗಿದೆ. ಸಂಸದರ ಮಾತಿಗೂ ಅಧಿಕಾರಿಗಳು ತಾತ್ಸಾರ ಮಾಡುತ್ತಿದ್ದಾರೆ ಎಂದರು.ನಂತರ ಪೊಲೀಸ್ ಇಲಾಖೆ ನೂತನ ಕಾರ್ಯಕ್ರಮಗಳಾದ ಮನೆಮನೆಗೆ ಪೊಲೀಸ್, ಸನ್ಮಿತ್ರ ಹಾಗೂ ಆಶ್ರಯ ಯೋಜನೆಗಳ ಬಗ್ಗೆ ತಿಳಿಸಲಾಯಿತು.ಸಭೆಯಲ್ಲಿ ಎಸ್.ಬಿ. ಶಿವಾನಂದ ಸ್ವಾಮಿ, ದಲಿತ ಮುಖಂಡರಾದ, ಪುಟ್ಟಸ್ವಾಮಿ, ಜಯಣ್ಣ, ವಿನೋದ್, ಹಾಲಪ್ಪ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಶಂಕರ್, ಧನಂಜಯ, ಹುಲ್ಲೇಹಳ್ಳಿ ಲಕ್ಷö್ಮಣ್, ಸುನೀಲ್, ಸೇರಿದಂತೆ ಮತ್ತಿರರು ದಲಿತ ನಾಯಕರುಗಳು ಇದ್ದರು, 14 ಬೀರೂರು 1ಬೀರೂರು ಪೊಲೀಸ್ ಠಾಣೆಯಲ್ಲಿ ಭಾನುವಾರ ಠಾಣಾ ವ್ಯಾಪ್ತಿಯ ದಲಿತ ಕಾಲೋನಿಗಳ ಮುಖಂಡರ ಸಮ್ಮುಖದಲ್ಲಿ ದಲಿತ್ ಡೇ ಕಾರ್ಯಕ್ರಮ ನಡೆಯಿತು, ಸಿಪಿಐ ಹಾಲಪ್ಪ, ಪಿಎಸೈ ಧನಂಜಯ್, ದಲಿತ ಮುಖಂಡರುಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯ-ಸಿಬ್ಬಂದಿ ಕಾಳಜಿಯಿಂದ ರೋಗಿಗಳಿಗೆ ಉತ್ತಮ ಸೇವೆ: ವಿಶಾಲಾಕ್ಷಿ ಪದ್ಮನಾಬ್
ಪ್ರೊ.ಎ.ಎನ್.ಮೂರ್ತಿರಾವ್‌ ಮನುಷ್ಯನಲ್ಲಿರುವ ತಳಮಳ, ನಂಬಿಕೆ ತೆರೆದಿಟ್ಟಿದ್ದಾರೆ: ಎಂ.ಜಿ.ರೇವಣ್ಣ