ಅಪೌಷ್ಟಿಕತೆ ಹೋಗಲಾಡಿಸುವುದೇ ‘ಪೋಷಣ್‌’ ಉದ್ದೇಶ

KannadaprabhaNewsNetwork |  
Published : Sep 13, 2025, 02:04 AM IST
೧೨ಕೆಎಲ್‌ಆರ್-೧೫ಕೋಲಾರದ ಜಿಪಂ ಸಭಾಂಗಣದಲ್ಲಿ ೮ನೇ ವ?ದ ಪೋ?ಣ್ ಮಾಸಾಚರಣೆ ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪೋಷಣ್ ಮಾಸಾಚರಣೆಯ ಪ್ರಯುಕ್ತ ಮುಖ್ಯವಾಗಿ ಅತಿಯಾದ ತೂಕ ನಿಯಂತ್ರಣ, ಪೋಷಣ್ ಭಿ ಪಡಾಯ್ ಭಿ, ತಾಯಿಯ ಹೆಸರಲ್ಲಿ ಒಂದು ಗಿಡ ನೆಡೆಯುವುದು, ಶಿಶು ಮತ್ತು ಬಾಲ್ಯ ಪೋಷಣ ಮತ್ತು ಪುರುಷರ ಪಾಲ್ಗೋಳ್ಳುವಿಕೆ ೫ ಚಟುಚಟಿಕೆಗಳನ್ನು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಹೋಬಳಿ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರಪೋಷಣ್ ಅಭಿಯಾನದ ಮುಖ್ಯ ಗುರಿ ಅಪೌಷ್ಟಿಕತೆ ಹೋಗಲಾಡಿಸುವುದು ಹಾಗೂ ಪೌಷ್ಟಿಕತೆ ಹೆಚ್ಚಿಸುವುದು ಪ್ರಮುಖ ಅಂಶವಾಗಿದ್ದು, ಜೊತೆಗೆ ಸ್ಟಂಟಿಂಗ್ ಮತ್ತು ವೇಸ್ಟಿಂಗ್ ಅನ್ನು ಎನ್.ಎಫ್.ಎಚ್.ಎಸ್. ಸರ್ವೇ ಪ್ರಕಾರ ಕಡಿಮೆಗೊಳಿಸುವಂತೆ ಹಾಗೂ ಕೋಲಾರವನ್ನು ಅಪೌಷ್ಟಿಕ ಮುಕ್ತ ಕೋಲಾರವನ್ನಾಗಿ ಮಾಡಲು ಪಣತೊಡಗಬೇಕೆಂದು ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ೮ನೇ ವರ್ಷದ ಪೋಷಣ್ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಆರ್‌.ನಟೇಶ್ ಮಾತನಾಡಿ, ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ತಾಯಂದಿರೂ ಆಗಿರುವುದರಿಂದ ಮಕ್ಕಳ ಆರೈಕೆಯಲ್ಲಿ ಪೌಷ್ಟಿಕತೆ ಕಾಪಾಡಿಕೊಂಡಲ್ಲಿ ಪೌಷ್ಟಿಕ ರಾಜ್ಯವನ್ನಾಗಿ ಕಟ್ಟಬಹುದಾಗಿದೆ ಎಂದು ತಿಳಿಸಿದರು.

ಸರ್ವತೋಮುಖ ಅಭಿವೃದ್ಧಿ ಗುರಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, ಪೋಷಣ್ ಅಭಿಯಾನ ಯೋಜನೆಯು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಪೌಷ್ಟಿಕತೆ ಯೋಜನೆಗಳನ್ನು ಒಗ್ಗೂಡಿಸುವ ಮಹತ್ವಾಕಾಂಕ್ಷಿಯ ಕಾರ್ಯಕ್ರಮವಾಗಿದೆ. ಸರ್ವತೋಮುಖ ಅಭಿವೃದ್ಧಿ ಸಾಧಿಸುವ ಗುರಿ ಹೊಂದಿದೆ ಎಂದರು.

ಕೋಲಾರ ಜಿಲ್ಲೆಯಲ್ಲಿ ೨೦೧೭-೧೮ನೇ ಸಾಲಿನ ಮಾರ್ಚ್-೮ರಂದು ಯೋಜನೆ ಅನುಷ್ಠಾನಗೊಂಡಿದ್ದು, ಅಪೌಷ್ಟಿಕತೆಯ ಕುಂಠಿತ ಬೆಳವಣಿಗೆ, ರಕ್ತಹೀನತೆ ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಮತ್ತು ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ ಕಡಿಮೆಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಅ.11ರ ವರೆಗೆ ಕಾರ್ಯಕ್ರಮ

೨೦೨೫ ರ ಪೋಷಣ್ ಮಾಸಾಚರಣೆಯ ಪ್ರಯುಕ್ತ ಮುಖ್ಯವಾಗಿ ಅತಿಯಾದ ತೂಕ ನಿಯಂತ್ರಣ, ಪೋಷಣ್ ಭಿ ಪಡಾಯ್ ಭಿ, ತಾಯಿಯ ಹೆಸರಲ್ಲಿ ಒಂದು ಗಿಡ ನೆಡೆಯುವುದು, ಶಿಶು ಮತ್ತು ಬಾಲ್ಯ ಪೋಷಣ ಮತ್ತು ಪುರುಷರ ಪಾಲ್ಗೋಳ್ಳುವಿಕೆ ೫ ಚಟುಚಟಿಕೆಗಳನ್ನು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಹೋಬಳಿ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸೆಪ್ಟೆಂಬರ್ ೧೨ ರಿಂದ ಅಕ್ಟೋಬರ್ ೧೧, ೨೦೨೫ರ ವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಈಗಾಗಲೇ ಜಿಲ್ಲೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಮೊಬೈಲ್ ಪೋನ್ ವಿತರಿಸಲಾಗಿದ್ದು, ಮೊಬೈಲ್ ಮೂಲಕ ಫಲಾನುಭವಿಗಳ ಹಾಜರಾತಿ, ಬಿಸಿಯೂಟ, ನೋಂದಣಿ ಮತ್ತು ತೂಕ ಮತ್ತು ಎತ್ತರ ಟ್ರ್ಯಾಕಿಂಗ್ ಮಾಡಲಾಗುತ್ತಿದ್ದು ಪೋಷಣ್ ಟ್ರ್ಯಾಕರ್‌ನ ದಿನನಿತ್ಯದ ನಿರ್ವಹಣೆಯಲ್ಲಿ ಕೋಲಾರ ಜಿಲ್ಲೆಯು ೩ನೇ ಸ್ಥಾನದಲ್ಲಿದೆ.

ಆರೋಗ್ಯ ತಪಾಸಣಾ ಶಿಬಿರ

ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಪೌಷ್ಟಿಕ ಮಕ್ಕಳಿಗೆ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ಎನ್‌ಆರ್‌ಸಿ ಕೇಂದ್ರಗಳಿಗೆ ಸೇರ್ಪಡೆ ಮಾಡಿ ಚಿಕಿತ್ಸೆ ನೀಡಿದೆ, ೨೦೧೮-೧೯ ರಲ್ಲಿ ೧೦೬ ತೀವ್ರ ಅಪೌಷ್ಟಿಕ ಮಕ್ಕಳಿದ್ದು ಪ್ರಸ್ತುತ ಆಗಸ್ಟ್-೨೦೨೫ ರ ಮಾಹೆಯಲ್ಲಿ ೫೪ ಮಕ್ಕಳಿದ್ದು ೫೨ ತೀವ್ರ ಅಪೌಷ್ಟಿಕ ಮಕ್ಕಳು ಸಾಧಾರಣ ಅಪೌಷ್ಟಿಕತೆಗೆ ಬಂದು ಸುಧಾರಣೆಗೊಂಡಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘ ಅಧ್ಯಕ್ಷ ಎಲ್.ಶ್ರೀನಿವಾಸ್, ಡಿಹೆಚ್‌ಓ ಡಾ.ಶ್ರೀನಿವಾಸ್.ಜಿ, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ರಾಘವೇಂದ್ರ ಶೆಟ್ಟಿಗರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ನಾಗರತ್ನ ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ