ಗಾಂಧಿ ಚಿಂತನೆಗಳ ಅಳವಡಿಸಿಕೊಳ್ಳುವುದು ತುರ್ತು ಅಗತ್ಯ

KannadaprabhaNewsNetwork |  
Published : Sep 13, 2025, 02:04 AM IST
ಚಿತ್ರದುರ್ಗ ಎರಡನೇ  ಪುಟದ ಬಾಟಂ   | Kannada Prabha

ಸಾರಾಂಶ

ಚಿತ್ರದುರ್ಗದಸರ್ಕಾರಿ ವಿಜ್ಞಾನ ಕಾಲೇಜಿನ ಎನ್ ಎಸ್ ಎಸ್ ಘಟಗಳ ಉದ್ಘಾಟನೆಯನ್ನು ನಿವೃತ್ತ ಪ್ರಾಚಾರ್ಯಸಿದ್ರಾಮ ಚನಗೊಂಡ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಎನ್‌ಎಸ್‌ಎಸ್ ಶಿಬಿರ ಆಯೋಜನೆ ಮಹಾತ್ವ ಗಾಂಧೀಜಿಯವರ ಕನಸಿನ ಕೂಸು, ವಿದ್ಯಾರ್ಥಿಗಳು ಅವರ ಚಿಂತನೆಗಳ ಅಳವಡಿಸಿಕೊಳ್ಳುವುದು ತುರ್ತು ಅಗತ್ಯಗಳಲ್ಲಿ ಒಂದಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಸಿದ್ರಾಮ ಚನಗೊಂಡ ಹೇಳಿದರು.

ಚಿತ್ರದುರ್ಗ ನಗರದ ಕೇಂದ್ರ ಭಾಗದಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಎನ್ಎಸ್ಎಸ್ ನ ಮೂರು ಘಟಕಗಳ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಎನ್ಎಸ್ಎಸ್ ನಮಗೆ ಶಿಸ್ತು, ಸಂಯಮ, ಶಾಂತಿ ಮತ್ತು ಸ್ವಚ್ಛತೆಯನ್ನ ಕಲಿಸಿಕೊಡುತ್ತದೆ. ಶಿಸ್ತು ಪ್ರಗತಿಯ ಲಕ್ಷಣವಾಗಿದೆ, ಎನ್ಎಸ್ಎಸ್ ನ ಉದ್ದೇಶ ನನಗಲ್ಲ ನಿನಗೆ ಎಂಬುದಾಗಿದೆ. ಸೇವೆ ಮನೋಭಾವನೆ, ದೇಶಾಭಿಮಾನ, ನಾಯಕತ್ವ ಬೆಳೆಸುವುದು, ಸಮಾಜದಲ್ಲಿ ಸಮಾನತೆಯನ್ನು ತಂದು ಕೊಡುವುದು, ಗ್ರಾಮೀಣ ಜನರ ಸೇವೆ ಇವೆಲ್ಲವನ್ನೂ ಅರಿತುಕೊಂಡು ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಎನ್ಎಸ್ಎಸ್ ಘಟಕ ಕಾರ್ಯಕ್ರಮಾಧಿಕಾರಿ ಡಾ.ನಾಗರಾಜ್ ಮಾತನಾಡಿ ವಿದ್ಯಾರ್ಥಿಗಳು ಸೇವೆ ಮಾಡುವುದರ ಮುಖಾಂತರ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ಉನ್ನತ ಶಿಕ್ಷಣಕ್ಕೆ ಎನ್ ಎಸ್ ಎಸ್ ನಿಂದ ಹೆಚ್ಚಿನ ಅವಕಾಶಗಳುಂಟು. ಒಮ್ಮೆ ಸೇವೆ ಮಾಡಿದ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಗುರಿ ಮೆಟ್ಟಲು ಸಾಧ್ಯವಾಗುತ್ತದೆ ಎಂದರು.

ಐಕ್ಯೂಎಸಿ ಸಂಯೋಜಕ ಹಾಗೂ ಫಿಸಿಕಲ್ ಡೈರೆಕ್ಟರ್ ಡಾ.ಕೆ ರಾಘವೇಂದ್ರ ಮಾತನಾಡಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ, ಕಾಲೇಜಿನ ಕ್ರೀಡೆಗಳಲ್ಲಿ ಸಂಸ್ಕೃತಿ ಚಟುವಟಿಕೆಗಳಲ್ಲಿ, ಉತ್ತಮ ಪ್ರದರ್ಶನನ ನೀಡುತ್ತಿದ್ದಾರೆ. ಬಹುಮಾನಗಳಿಸಿಕೊಂಡು ಕಾಲೇಜಿಗೆ ಒಳ್ಳೆ ಹೆಸರು ತಂದು ಕೊಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಎಚ್ ಕೆ ಎಸ್ ಸ್ವಾಮಿ ಮಾತನಾಡಿ ಚರಕ ಗಾಂಧೀಜಿಯವರ ಕನಸಿನ ಕೂಸಾಗಿದೆ, ಚರಕದಿಂದ ನಾವು ಸ್ವತಂತ್ರಗೊಳಿಸಿಕೊಂಡೆವು, ಸ್ವತಂತ್ರ ಉಳಿಸಿಕೊಳ್ಳುವುದು ಸಹ ಅಷ್ಟೇ ಮುಖ್ಯವಾದ ವಿಚಾರವಾಗಿದೆ. ವಿದ್ಯಾರ್ಥಿಗಳು ಗ್ರಾಮೀಣ ವಸ್ತುಗಳನ್ನು ಹೆಚ್ಚು ಬಳಕೆ ಮಾಡಬೇಕು ಎಂದು ಚರಕ ಪ್ರದರ್ಶಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ರವಿಕಾಂತ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸೇವೆ ಮಾಡುವುದರ ಮುಖಾಂತರ ಕಾಲೇಜಿಗೆ ಉತ್ತಮ ಹೆಸರನ್ನು ತಂದು ಕೊಡಬಹುದು. ಕಾಲೇಜು ಶೈಕ್ಷಣಿಕ, ಪಠ್ಯೇತರ ಚಟುವಟಿಕೆಗಳಲ್ಲೂ ಸಹ ವಿದ್ಯಾರ್ಥಿಗಳನ್ನು ಮುನ್ನಡೆಸುತ್ತಿದೆ. ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಸುನಿಲ್, ಡಾ. ರಾಜೇಶ್ವರಿ,ಗಣಿತಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಲಾಲ್ ಸಿಂಗ್ ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ