ಕನ್ನಡಪ್ರಭ ವಾರ್ತೆ ನಂಜನಗೂಡು
ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿ. ಹಿಂದೆ ಪ್ರತಿ ಸೋಮವಾರ ಜನಸಂಪರ್ಕ ಕಾರ್ಯಕ್ರಮ ನಡೆಯುತ್ತಿತ್ತು. ಇದೀಗ ಅದನ್ನು ಪ್ರಜಾಸೇವೆಯಾಗಿ ಪರಿವರ್ತಿಸಲಾಗಿದ್ದು, ಇದರಿಂದ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಪಡೆಯಲು ಅನುಕೂಲವಾಗಲಿದೆ ಎಂದರು.
ಜನರ ಸಮಸ್ಯೆ ಆಲಿಸುವ ಉದ್ದೇಶದಿಂದ ನಗರದ ಆಯಾ ವಾರ್ಡ್ ಗಳಲ್ಲಿ ಕ್ಯೂಆರ್ಕೋಡ್ ಫಲಕ ಅಳವಡಿಸಲಾಗಿದೆ. ಈ ಮೂಲಕ ಜನರು ತಮ್ಮ ದೂರುಗಳನ್ನು ದಾಖಲಿಸಲು ಹಾಗೂ ಯಾವ ರೀತಿಯ ಸಮಸ್ಯೆಗಳು ಹೆಚ್ಚಾಗಿ ಬರುತ್ತಿವೆ ಎಂಬುದನ್ನು ಪರಿಶೀಲಿಸಲು ಅನುಕೂಲವಾಗುತ್ತಿದೆ. ವಾರ್ಡ್ ಗಳಲ್ಲಿ ಕ್ಯೂಆರ್ಕೋಡ್ ಫಲಕ ಅಳವಡಿಸಿದ ಮೊದಲ ನಗರಸಭೆ ಎಂಬ ಹೆಗ್ಗಳಿಕೆ ನಂಜನಗೂಡು ನಗರಸಭೆಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.ಸಹಕಾರ ಮುಖ್ಯ: ಸ್ಮಿತಾ ರಾಮು
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೇಶವಮೂರ್ತಿ, ತಾಪಂ ಇಒ ಜೆರಾಲ್ಡ್ ರಾಜೇಶ್, ನಗರಸಭೆ ಪೌರಾಯುಕ್ತ ಬಸವರಾಜು, ಸಿ.ಎಂ. ಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ನಗರಸಭಾ ಮಾಜಿ ಸದಸ್ಯರಾದ ಗಾಯತ್ರಿ ಹಾಗೂ ಕಪಿಲೇಶ್ ವಿವಿಧ ಇಲಾಖೆ ಗಳ ಅದಿಕಾರಿಗಳು ಇದ್ದರು.
ಶನಿವಾರ ನಡೆದ ಪ್ರಜಾಸೇವಾ ಆಂದೋಲನದಲ್ಲಿ ನಗರ ಸಭಾ ಮಾಜಿ ಸದಸ್ಯ ಕಪಿಲೇಶ್ ಸ್ವತಃ ದೂರು ಸಲ್ಲಿಸುವ ಮೂಲಕ ಗಮನ ಸೆಳೆದರು.