ಕಾರಟಗಿ: ರಾಮಾಯಣದ ಭಾರತದ ಸಂಶೋಧನಾಲಯವು ಅಧ್ಯಯನ ಮಾಡಿ, ರಾಮಾಯಣವು ವಿವಿಧ ನೈಸರ್ಗಿಕ ಸಂಪನ್ಮೂಲಗಳ ಪರಿಕಲ್ಪನೆಯಲ್ಲಿ ಮೂಡಿದ ಅರಣ್ಯ ಕಾಂಡ ಭಾಗದಲ್ಲಿ ನಿರೂಪಿತಗೊಂಡಿದೆ ಎಂದು ಸಂಶೋಧಕ ಡಾ. ಶರಣ ಬಸಪ್ಪ ಕೋಲ್ಕಾರ್ ಹೇಳಿದರು.
ನಮ್ಮ ಕೊಪ್ಪಳ ಜಿಲ್ಲೆಯ ಭಾಗವು ರಾಮಾಯಣದ ಅವಿಭಾಜ್ಯ ಅಂಗವಾಗಿದೆ. ಇದರ ಬಗ್ಗೆ ಐತಿಹಾಸಿಕ ದಾಖಲೆಗಳು ಸಹ ನಮ್ಮಲ್ಲಿವೆ. ಹೀಗಾಗಿ ಇದು ಕಟ್ಟುಕಥೆಯಲ್ಲ, ನೈಜ ಘಟನೆಯಾಗಿದೆ ಎಂದರು.
ನಂತರ ಸಂವಾದಕರಾದ ವಿರೂಪಾಕ್ಷಸ್ವಾಮಿಯವರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ಸಂಶೋಧಕನಾದರೂ ಮೂಲತಃ ಕವಿ. ಕಾವ್ಯ ನನ್ನ ನೆಚ್ಚಿನ ಆಸಕ್ತಿ. ಕಾವ್ಯ ಪ್ರಕಟಿಸುವ ಕುರಿತು ತಮ್ಮ ಬದುಕನ್ನು ಮೆಲುಕು ಹಾಕಿದರು. ನಂತರ ಇತಿಹಾಸದ ಸಂಶೋಧನೆಗಳ ಬಗ್ಗೆ ತಿಳಿಸಿದರು.ಬಳಿಕ ಸರಸ್ವತಿ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಮ್ಮೇಳನ ಅಧ್ಯಕ್ಷರು, ಬಾಲ್ಯದ ಗ್ರಾಮದ ನೆನಪುಗಳನ್ನು ಮಾಡಿಕೊಂಡರು. ತಮ್ಮ ಮನೆಯ ಪರಿಸರದ ಪ್ರಭಾವ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಶ್ರೀನಿವಾಸ ಅಂಗಡಿ ಅವರ ಸಮ್ಮೇಳನಾಧ್ಯಕ್ಷರ ಇತಿಹಾಸದ ಆಸಕ್ತಿ ಬಗ್ಗೆ ಕೇಳಿದಾಗ, ಬಾಲ್ಯದಲ್ಲಿ ತಂದೆಯವರು ಬಾಚಿಯನ್ನು ಹುಡುಕಿಕೊಡುವ ಘಟನೆಯನ್ನು ಉಲ್ಲೇಖ ಮಾಡಿದರು. ನಂತರ ಗವಿಚಿತ್ರ ಸಂಶೋಧನೆಯ ಬಗ್ಗೆ ಮಾಹಿತಿ ಒದಗಿಸಿದರು.
ಡಾ. ಶರಣಬಸಪ್ಪ ಕೋಲ್ಕಾರ್ ಅವರ ಬದುಕಿನ ಪ್ರಮುಖ ಸಾಧನೆಗಳನ್ನು ಮೆಲುಕು ಹಾಕಿದ ಪವನಕುಮಾರ ಗೂಂಡುರವರು ಸಂವಾದವನ್ನು ನಿರ್ವಹಿಸಿದ್ದರು.