ನರಗುಂದ: ಸಮಾಜದಲ್ಲಿ ಗುರು ಶಿಷ್ಯರಾದವರು ಅನ್ಯೋನ್ಯವಾಗಿದ್ದರೆ ಮಾತ್ರ ಸಮಾಜ, ಮಠ, ಭಕ್ತರು ಉದ್ದಾರವಾಗಲು ಸಾಧ್ಯವಾಗುತ್ತದೆ. ಆದ್ದರಿಂದ ನೂತನ ಸ್ವಾಮಿಗಳು ಭಕ್ತರ ಜೊತೆ ಅನ್ಯನವಾಗಿರಬೇಕೆಂದು ವಾರಣಾಸಿ-(ಕಾಶಿ) ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹೇಳಿದರು. ಅವರು ಶುಕ್ರವಾರ ತಾಲೂಕಿನ ಕೊಣ್ಣೂರ ಗ್ರಾಮದ ಸುಕ್ಷೇತ್ರ ವಿರಕ್ತಮಠದ ನೂತನವಾಗಿ ಡಾ. ಶಿವಾನಂದ ದೇವರ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನೂತನ ಶ್ರೀಗಳು ಕೂಡ ಹಿಂದಿನ ಮಠದ ಪರಂಪರೆಯನ್ನು ಮುಂದವರಿಸಿಕೊಂಡು ಈ ಮಠವನ್ನು ನಾಡಿನಲ್ಲಿ ಪ್ರಸಿದ್ಧವಾದ ಮಠವನ್ನಾಗಿ ಮಾಡಲು ಮುಂದಾಗಬೇಕು. ಮಲಪ್ರಭಾ ದಡಕ್ಕೆ ಹೊಂದಿಕೊಂಡಿರುವ ಈ ಗ್ರಾಮದ ಭಕ್ತರು ಬಹಳ ಶ್ರೀಮಂತ ಮನಸ್ಸಿನವರು. ಇಂದಿನ ಪಟ್ಟಾಧಿಕಾರ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಮಾಡಿದ್ದು ನನಗೆ ಬಹಳ ಸಂತೋಷ ತಂದಿದೆ. ನೂತನ ಶ್ರೀಗಳು ಶ್ರೀ ಮಠದ ಭಕ್ತರು ಜೊತೆ ಹೊಂದಾಣಿಕಯಿಂದ ಮಠವನ್ನು ನಡೆಸಿಕೊಂಡು ಹೋಗಲು ತಿಳಿಸಿದರು. ನಮ್ಮ ಭಾರತ ದೇಶ ಆಧ್ಯಾತ್ಮದಲ್ಲಿ ಬಹಳ ಶ್ರೀಮಂತಿಕೆಯನ್ನು ಹೊಂದಿದೆ. ಹಾಗಾಗಿ ನಾವು ಭಾರತೀಯರಾದವರು ಮೊದಲು ದೇಶ ಪ್ರೇಮವನ್ನು ಹೊಂದಿದರೆ ಮಾತ್ರ ನಮ್ಮ ಧರ್ಮ, ಸಮಾಜ ಉಳಿಯಲು ಸಾಧ್ಯವೆಂದು ತಿಳಿಸಿದರು.
ಸುಕ್ಷೇತ್ರ ವಿರಕ್ತಮಠಕ್ಕೆ ನೂತನವಾಗಿ ಆಯ್ಕೆಯಾದ ಡಾ. ಶಿವಾನಂದ ದೇವರಿಗೆ ಚನ್ನಗೀರಿಯ ಶ್ರೀ ಹಾಲಸ್ವಾಮಿ ವಿರಕ್ತಮಠದ ಡಾ. ಬಸವಜಯಚಂದ್ರ ಶ್ರೀಗಳು ಅನುಗ್ರಹ ಮತ್ತು ಸಮಾಜ ಸೇವಾ ದೀಕ್ಷೆ ನೀಡಿ ಆನಂತರ ಮಾತನಾಡಿ, ಸಮಾಜದಲ್ಲಿ ಸ್ವಾಮಿಗಳಾದವರು ಬಹಳ ಸೂಕ್ಷ್ಮ ವಾಗಿ ಇರಬೇಕು, ಸದ್ಯದ ಕಾಲ ಬಹಳ ಸೂಕ್ಷ್ಮ ವಾಗಿದೆ. ಆದ್ದರಿಂದ ನೂತನ ಶ್ರೀಗಳು ಹಿಂದಿನ ಪೀಠಾಧಿಪತಿಗಳ ಮಾಗ೯ದಶ೯ನ ಪಡೆದುಕೊಂಡು ಗ್ರಾಮದ ಭಕ್ತರು ಜೊತೆ ಸೇರಿಕೊಂಡು ಈ ಮಠವನ್ನು ಅಭಿವೃದ್ಧಿ ಮಾಡಬೇಕೆಂದು ಹೇಳಿದರು. ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ನಮ್ಮ ತಾಲೂಕಿನಲ್ಲಿ ನಾನು ಶಾಸಕನಾದ ನಂತರ ನಾಲ್ಕೈದು ಮಠಗಳಿಗೆ ಸ್ವಾಮಿಗಳು ಪಟ್ಟಾಧಿಕಾರ ನಡೆದಿದ್ದು ಖುಷಿ ಆಗಿದೆ. ನೂತನ ಶ್ರೀಗಳು ಮಠ, ಸಮಾಜ, ಭಕ್ತರು ಅಭಿವೃದ್ಧಿ ಶ್ರಮಿಸಬೇಕು. ಮಠದ ಅಭಿವೃದ್ಧಿಗೆ ನಾನು ಕೂಡ ಕೈ ಜೋಡಿಸುತ್ತೇನೆಂದು ಹೇಳಿದರು. ಪಟ್ಟಾಧಿಕಾರ ನಂತರ ಶ್ರೀ ಮಠದ ಭಕ್ತರು ಕುಂಭ ಮೇಳ, ಕರಡಿ, ಜಾಂಜ, ಡೊಳ್ಳಿನ ಮೇಳದೊಂದಿಗೆ ನೂತನ ಶ್ರೀ ಡಾ.ಶಿವಾನಂದ ದೇವರನ್ನು ಗ್ರಾಮದಲ್ಲಿ ಅಡ್ಡ ಪಲ್ಲಕ್ಕಿ ಮೆರವಣಿಗೆ ಮಾಡಿದರು. ಶ್ರೀಶೈಲ ಪೀಠದ ಶ್ರೀ 1008 ಜಗದ್ಗುರು ಶ್ರೀ ಶೈಲ ಸೂರ್ಯ ಸಿಂಹಾಸನಾಧೀಶ್ವರ ಡಾ. ಚೆನ್ನೈ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಶ್ರೀಗಳು, ಬೆಂಗಳೂರಿನ ಡಾ. ಮಹಾಂತಲಿಂಗ ಶಿವಾಚಾರ್ಯಶ್ರೀಗಳು, ಕೊಟ್ಟೂರ ಡಾ. ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ಶಿವಗಂಗೆಯ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಶ್ರೀಗಳು, ಕಲ್ಮಠದಸಿದ್ದಲಿಂಗ ಶಿವಾಚಾರ್ಯ ಶ್ರೀಗಳು, ಗುಳೇದಗುಡ್ಡದ ಡಾ. ನೀಲಕಂಠ ಶಿವಾಚಾರ್ಯ ಶ್ರೀಗಳು,
ಮಾಜಿ ಸಚಿವ ಬಿ.ಆರ್. ಯಾವಗಲ್, ಎಸ್.ಬಿ. ಯಲ್ಲಪ್ಪಗೌಡರ, ರಾಜುಗೌಡ ಕೆಂಚನಗೌಡರ, ಬಸನಗೌಡ ಯಲ್ಲಪ್ಪಗೌಡರ, ಉಮೇಶ ಮರ್ಚಪ್ಪನವರ, ನಾಗಪ್ಪ ಚೌಡರಡ್ಡಿ, ಅಶೋಕ ಶೇಬಣ್ಣನವರ, ಈಶ್ವರ ಶಿರಿಯಪ್ಪಗೌಡರ ಸೇರಿದಂತೆ ಮುಂತಾದವರು ಇದ್ದರು.