ಶೃಂಗೇರಿಯಲ್ಲಿ ನಿಲ್ಲದ ಗಾಳಿಯ ಆರ್ಭಟ

KannadaprabhaNewsNetwork |  
Published : Jul 09, 2026, 02:15 AM IST
ುುಪಪ | Kannada Prabha

ಸಾರಾಂಶ

ಶೃಂಗೇರಿ ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಪ್ರಮಾಣ ಬುಧವಾರ ತಗ್ಗಿದ್ದರೂ ಗಾಳಿ ಆರ್ಭಟ ಮಾತ್ರ ಮುಂದುವರೆದಿದೆ. ಮಳೆ ಕೆಲವೊಮ್ಮೆ ಬಿಡುವು ನೀಡಿದರೂ ಗಾಳಿ ಜೋರಾಗಿ ಆರ್ಭಟಿಸುತ್ತಿದೆ.

ಗುಬ್ಬಗೋಡು ಸಮೀಪ ರಸ್ತೆಗೆ ಬಿದ್ದ ವಿದ್ಯುತ್ ಪರಿವರ್ತಕ ಕಂಬ । ಭೂಕುಸಿತ,ಮನೆ,ವಿದ್ಯುತ್ ಲೈನ್ ಹಾನಿ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಪ್ರಮಾಣ ಬುಧವಾರ ತಗ್ಗಿದ್ದರೂ ಗಾಳಿ ಆರ್ಭಟ ಮಾತ್ರ ಮುಂದುವರೆದಿದೆ. ಮಳೆ ಕೆಲವೊಮ್ಮೆ ಬಿಡುವು ನೀಡಿದರೂ ಗಾಳಿ ಜೋರಾಗಿ ಆರ್ಭಟಿಸುತ್ತಿದೆ.

ಶೃಂಗೇರಿ ಮರ್ಕಲ್ ಪಂಚಾಯಿತಿ ಕಿಗ್ಗಾ ಗುಬ್ಬಗೋಡು ಬಳಿ ಬುಧವಾರ ಬೆಳಗಿನ ಜಾವ ಭಾರೀ ಗಾಳಿ ಅಬ್ಬರಕ್ಕೆ ವಿದ್ಯುತ್ ಪರಿವರ್ತಕ ಕಂಬ ಲೈನ್ ಸಹಿತ ರಸ್ತೆಗುರುಳಿದೆ. ವಿದ್ಯುತ್ ಇಲ್ಲದ ಕಾರಣ ಹಾಗೂ ಯಾವುದೇ ವಾಹನಗಳು ಸಂಚರಿಸದೇ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ. ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಗಾಳಿ ಅಬ್ಬರಕ್ಕೆ ಅಂಬಲಮನೆ ಬುಡ್ಡಯ್ಯ ಅವರ ಮನೆ ಮೇಲೆ ಬೃಹತ್ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ನೀಲಂದೂರು ಮರಿಗೆಬೈಲು, ಹೊಸ್ಕೆರೆ ರಸ್ತೆ ಮೇಲೆ ಮರಬಿದ್ದು ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಸುಮಾರು 30 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿವೆ. ರಾಷ್ಟ್ರೀಯ ಹೆದ್ದಾರಿ 169 ರ ಆನೆಗುಂದದಿಂದ ತನಿಕೋಡುವರೆಗೂ ರಸ್ತೆಯಂಚಿನಲ್ಲಿ ಗುಡ್ಡ ಗಳು ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಆನೆಗುಂದ ಕಡೆಮನೆ,ನೆಮ್ಮಾರು ಬಳಿ ಗುಡ್ಡ ಕುಸಿದು ರಸ್ತೆ ಮೇಲೆ ಬೀಳುತ್ತಿ ರುವುದರಿಂದ ಆಗಾಗ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಕೆಲವೆಡೆ ಭೂಕುಸಿತ, ಅಡಕೆ ತೋಟಗಳ ಮರಗಳು ತುಂಡಾಗಿ ಬೀಳುತ್ತಿವೆ.

ತುಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶ ಇನ್ನೂ ಜಲಾವೃತಗೊಂಡಿವೆ. ಶ್ರೀ ಮಠದ ತುಂಗಾ ನದಿ ತೀರದ ಕಪ್ಪೆಶಂಕರ ದೇವಾಲಯ ಮುಳುಗಡೆಯಾಗಿ. ಶಾಲೆ, ಕಾಲೇಜುಗಳಿಗೆ ಭುಧವಾರ ರಜೆ ನೀಡಲಾಗಿತ್ತು.

8 ಶ್ರೀ ಚಿತ್ರ 1-

ಶೃಂಗೇರಿ ಸಮೀಪ ಕಿಗ್ಗಾ ಶೃಂಗೇರಿ ಸಂಪರ್ಕ ರಸ್ತೆ ಮೇಲೆ ಬುಧವಾರ ಬೆಳಗಿನ ಜಾವ ಗಾಳಿಗೆ ವಿದ್ಯುತ್ ಪರಿವರ್ತಕ ಕಂಬ ಉರುಳಿ ಬಿದ್ದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಬೆಳವಣಿಗೆಯತ್ತ ಪೋಷಕರು ಗಮನ ಹರಿಸಿ
ಶಾಸಕರ ನೇತೃತ್ವದಲ್ಲಿ ರಾಣೀಕೆರೆ ತೂಬು ತೆರವಿಗೆ ಕ್ಷಣಗಣನೆ