)
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರವೇ ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 2,850ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಎದುರಾಗಿರುವ ಭೀಕರ ಬರಗಾಲವು ರೈತರ ಆತ್ಮವಿಶ್ವಾಸವನ್ನು ಕುಗ್ಗಿಸಲು ಸರ್ಕಾರ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.
ಬರಗಾಲದಿಂದ ಕಂಗಾಲಾಗಿರುವ ರೈತರಲ್ಲಿ ಧೈರ್ಯ ತುಂಬುವ ಮತ್ತು ಅವರ ಆತ್ಮವಿಶ್ವಾಸ ಹೆಚ್ಚಿಸುವ ಜವಾಬ್ದಾರಿ ಸಂಪೂರ್ಣವಾಗಿ ಸರ್ಕಾರದ ಮೇಲಿದೆ. ಬರಗಾಲದ ತೀವ್ರತೆಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ತಕ್ಷಣವೇ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಲಭ್ಯವಿರುವ ಜಲಸಂಪನ್ಮೂಲವನ್ನು ಮೊದಲ ಆದ್ಯತೆಯಾಗಿ ಕುಡಿಯುವ ನೀರಿಗಾಗಿ ಹಾಗೂ ಉಳಿದಂತೆ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ನೀರು ಹಾಗೂ ಮೇವು ಒದಗಿಸಲು ಬಳಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಪ್ರಾಮಾಣಿತ ಕಾರ್ಯಾಚರಣೆ ವಿಧಾನ ರೂಪಿಸಬೇಕು. ಇರುವ ನೀರೆಲ್ಲಾ ಖಾಲಿಯಾದ ನಂತರ, ಕುಡಿಯುವ ನೀರಿಗಾಗಿ ಜನಸಾಮಾನ್ಯರು ಪರದಾಡುವಂತಹ ಮತ್ತು ಹಾಹಾಕಾರ ಸೃಷ್ಟಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಲು ಬಿಡಬಾರದು ಎಂದರು.ನಾವು ಕೇವಲ ವಿರೋಧ ಪಕ್ಷವಾಗಿ ಸರ್ಕಾರವನ್ನು ಟೀಕಿಸುವುದಕ್ಕಷ್ಟೇ ಸೀಮಿತವಾಗಲು ಬಯಸುವುದಿಲ್ಲ. ರೈತರ ಹಿತದೃಷ್ಟಿಯಿಂದ ಸರ್ಕಾರಕ್ಕೆ ಸಕಾರಾತ್ಮಕ ಮತ್ತು ಯೋಗ್ಯವಾದ ಸಲಹೆಗಳನ್ನು ನೀಡುವ ಉದ್ದೇಶದಿಂದಲೇ ಈ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದೇವೆ ಎಂದು ತಿಳಿಸಿದರು.
ಪಾಕಿಸ್ತಾನ ಕಾಂಗ್ರೆಸ್ನ ಪಾಪದ ಕೂಸು: ಸಿ.ಟಿ.ರವಿ
ಗೃಹ ಸಚಿವರು ಈ ಹಿಂದೆ ಹೇಳಿದ್ದ ''''ಪಾಪ ಪಾಕಿಸ್ತಾನ''''ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿ.ಟಿ.ರವಿ, "ಕಾಂಗ್ರೆಸ್ನವರ ಪಾಪದ ಕೂಸೇ ಪಾಕಿಸ್ತಾನ. ಭಾರತ ವಿಭಜನೆಯಾಗಿ ಪಾಕಿಸ್ತಾನ ರಚನೆಯಾಗುವ ಸಂದರ್ಭದಲ್ಲಿ ಅಂದು ಮೂರು ಪ್ರಮುಖ ಶಕ್ತಿಗಳ ನಡುವೆ ''''''''''''''''''''''''''''''''ತ್ರಿಪಕ್ಷೀಯ ಒಪ್ಪಂದ'''''''''''''''''''''''''''''''' ನಡೆದಿತ್ತು. ಬ್ರಿಟಿಷ್ ಸರ್ಕಾರ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಈ ಒಪ್ಪಂದದ ಭಾಗವಾಗಿದ್ದವು. ಹೀಗಾಗಿ ಪಾಕಿಸ್ತಾನ ನಿರ್ಮಾಣದಲ್ಲಿ ಕಾಂಗ್ರೆಸ್ನ ಪಾತ್ರವೂ ಇದೆ. ಅದಕ್ಕಾಗಿಯೇ ಅದನ್ನು ಪಾಪದ ಕೂಸು ಎಂದು ಕರೆಯಲಾಗಿದೆ " ಎಂದರು.
ಆರ್.ಎಸ್.ಎಸ್. ದೇಶಭಕ್ತ ಸಂಘಟನೆ :
"ದೊಡ್ಡವರ ಮಕ್ಕಳಿಗೆ ಎಲ್ಲವೂ ಬಹಳ ಸುಲಭವಾಗಿ ಸಿಕ್ಕಿಬಿಡುತ್ತದೆ. ಅದೇ ರೀತಿ ಕೆಲವರಿಗೆ ವಿವೇಚನೆ ಎನ್ನುವುದು ಇಲ್ಲದಂತಾಗಿದೆ. ದೇಶಕ್ಕೆ ಒಳ್ಳೆಯದು ಮಾಡುವ ಸಂಘಟನೆ ಯಾವುದು ಮತ್ತು ದೇಶಕ್ಕೆ ಹಾನಿ ಮಾಡುವ ಸಂಘಟನೆ ಯಾವುದು ಎಂಬ ಕನಿಷ್ಠ ಜ್ಞಾನ ಇರಬೇಕು. ದೇಶಕ್ಕೆ ಕಂಟಕಪ್ರಾಯವಾಗಿರುವ, ಹಾನಿ ಉಂಟುಮಾಡುವ ಸಂಘಟನೆಗಳ ವಿರುದ್ಧ ಕಾಂಗ್ರೆಸ್ನವರು ಇದುವರೆಗೆ ಒಂದು ಶಬ್ದವನ್ನೂ ಆಡಿಲ್ಲ. ಆದರೆ ದೇಶಭಕ್ತ ಸಂಘಟನೆಯನ್ನು ನಿರಂತರವಾಗಿ ದೂಷಿಸುತ್ತಿದ್ದಾರೆ ಎಂದು ಸಿ.ಟಿ. ರವಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.