ಸಿದ್ದರ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಸಂಕಲ್ಪ

KannadaprabhaNewsNetwork |  
Published : Jun 16, 2026, 03:15 AM IST
ಪೊಟೋ 5 : ನಿಜಗಲ್ ಸಿದ್ದರ ಬೆಟ್ಟದಲ್ಲಿ  ನಡೆದ  ಸ್ವಚ್ಚತಾಕಾರ್ಯದಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ಚೀಲಗಳು.  | Kannada Prabha

ಸಾರಾಂಶ

ದಾಬಸ್‍ಪೇಟೆ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ನಿಜಗಲ್ ಸಿದ್ದರಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪ್ರವಾಸಿಗರು, ಭಕ್ತರು ಸಾರ್ವಜನಿಕರು ಸಹಕರಿಸಬೇಕು. ಸಿದ್ದರ ಬೆಟ್ಟಕ್ಕೆ ಪ್ಲಾಸ್ಟಿಕ್ ಬಾಟಲು, ಚೀಲಗಳನ್ನು ತೆಗೆದುಕೊಂಡು ಹೋಗುವುದನ್ನು ಹಂತ ಹಂತವಾಗಿ ನಿಷೇಧಿಸಲು ಸ್ಥಳೀಯ ಆಡಳಿತ ಮಂಡಳಿ ಕ್ರಮವಹಿಸಬೇಕು ಎಂದು ವೋಲ್ವೋ ಗ್ರೂಪಿನ ಬಿಸಿಐಸಿಯ ಸಿಎಸ್‌ಆರ್ ತಜ್ಞರ ಸಮಿತಿಯ ಅಧ್ಯಕ್ಷ ಮತ್ತು ಸಿಎಸ್‌ಆರ್ ಬಾಹ್ಯ ಕೈಗಾರಿಕಾ ವ್ಯವಹಾರಗಳ ನಿರ್ದೇಶಕ ಜಿ.ವಿ.ರಾವ್ ತಿಳಿಸಿದರು

ದಾಬಸ್‍ಪೇಟೆ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ನಿಜಗಲ್ ಸಿದ್ದರಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪ್ರವಾಸಿಗರು, ಭಕ್ತರು ಸಾರ್ವಜನಿಕರು ಸಹಕರಿಸಬೇಕು. ಸಿದ್ದರ ಬೆಟ್ಟಕ್ಕೆ ಪ್ಲಾಸ್ಟಿಕ್ ಬಾಟಲು, ಚೀಲಗಳನ್ನು ತೆಗೆದುಕೊಂಡು ಹೋಗುವುದನ್ನು ಹಂತ ಹಂತವಾಗಿ ನಿಷೇಧಿಸಲು ಸ್ಥಳೀಯ ಆಡಳಿತ ಮಂಡಳಿ ಕ್ರಮವಹಿಸಬೇಕು ಎಂದು ವೋಲ್ವೋ ಗ್ರೂಪಿನ ಬಿಸಿಐಸಿಯ ಸಿಎಸ್‌ಆರ್ ತಜ್ಞರ ಸಮಿತಿಯ ಅಧ್ಯಕ್ಷ ಮತ್ತು ಸಿಎಸ್‌ಆರ್ ಬಾಹ್ಯ ಕೈಗಾರಿಕಾ ವ್ಯವಹಾರಗಳ ನಿರ್ದೇಶಕ ಜಿ.ವಿ.ರಾವ್ ತಿಳಿಸಿದರು.

ಸೋಂಪುರ ಹೋಬಳಿಯ ನಿಜಗಲ್ ಸಿದ್ದರಬೆಟ್ಟದಲ್ಲಿ ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ವೋಲ್ವೋಗ್ರಾಫ್ ಇಂಡಿಯಾ ಇವರ ಸಹಯೋಗದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸರ ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ಬಳಸದಂತೆ ನಾವೆಲ್ಲರೂ ಸೇರಿ ಸ್ವಯಂ ಸಂಕಲ್ಪ ಮಾಡಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು. ಮಿತಿಮೀರಿದ ಪ್ಲಾಸ್ಟಿಕ್‍ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಸಿ ಬಿಸಾಕುತ್ತಿದ್ದು ಪರಿಸರ ಮಾಲಿನ್ಯವಾಗಿದೆ. ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು. ಪ್ಲಾಸ್ಟಿಕ್ ಬದಲು ಬಟ್ಟೆ ಚೀಲಗಳನ್ನು ಉಪಯೋಗಿಸುವಂತೆ ಸಲಹೆ ನೀಡಿದರು.

ಸ್ವಚ್ಛತಾ ಕಾರ್ಯ:

ನಿಜಗಲ್ ಸಿದ್ದರ ಬೆಟ್ಟವೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸಿ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಇತ್ತೀಚಿಗೆ ಪ್ರತಿನಿತ್ಯ ಪ್ರವಾಸಿಗರು, ಭಕ್ತರು ಆಗಮಿಸುತ್ತಿದ್ದು, ಬರುವವರು ಪ್ಲಾಸ್ಟಿಕ್ ಬಾಟಲ್, ಕವರ್‍ತ್ಯಾಜ್ಯಗಳನ್ನು ತಂದು ಬಳಸಿ ಬೆಟ್ಟದಲ್ಲೇ ಎಸೆದು ಹೋಗುತ್ತಿದ್ದು, ಶಿವಗಂಗೆ ಬೆಟ್ಟವೂ ಪ್ಲಾಸ್ಟಿಕ್ ಮಯವಾಗಿದೆ. ಆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ನಮ್ಮ ಸಂಸ್ಥೆಯ ಸಹಯೋಗದಲ್ಲಿ ಸಿದ್ದರ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.

ಸ್ವಯಂ ಸಂಘಗಳು ಸಹಕಾರ: ಮುಂದಿನ ದಿನಗಳಲ್ಲಿ ನಮ್ಮ ಕಂಪನಿ ಸೇರಿದಂತೆ ಇತರ ಸ್ವಯಂ ಸಂಘಗಳು, ಸ್ಥಳೀಯ ಆಡಳಿತದ ಸಹಕಾರದಿಂದ ಸಿದ್ದರ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗುತ್ತದೆ ಎಂದರು.

ಪರಿಸರ ಪ್ರೇಮಿ ಶಾಮ್ ಪ್ರಸಾದ್ ಮಾತನಾಡಿ, ವಾಯು ಮಾಲಿನ್ಯ, ಜಲಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ, ಅರಣ್ಯ ನಾಶವಾಗುತ್ತದೆ, ಜೀವ ವೈವಿಧ್ಯತೆ ಕಡಿಮೆಯಾಗುತ್ತದೆ. ಬರ ಮತ್ತು ಪ್ರವಾಹಗಳು ಹೆಚ್ಚಾಗುತ್ತವೆ, ಕೃಷಿಗೆ ಹಾನಿಯಾಗುತ್ತದೆ ಮುಖ್ಯವಾಗಿ ಮಾನವ ಜೀವನದ ಗುಣಮಟ್ಟ ಕುಸಿಯುತ್ತದೆ ಹಾಗಾಗಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.

ಸಿದ್ದರಬೆಟ್ಟದಲ್ಲಿ ನೂರಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರು ಮತ್ತು ಸ್ಥಳೀಯ ಕಾರ್ಯಕರ್ತರು ಬೆಟ್ಟದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲ್ ಮತ್ತು ಇತರರ ತ್ಯಾಜ್ಯಗಳನ್ನು ಶೇಖರಿಸಿ ಸುಮಾರು 50ಕ್ಕೂ ಹೆಚ್ಚು ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಲಾಯಿತು.

ಪೊಟೋ 5 :

ಸೋಂಪುರ ಹೋಬಳಿಯ ನಿಜಗಲ್ ಸಿದ್ದರ ಬೆಟ್ಟದಲ್ಲಿ ಸೋಂಪುರ ಹೋಬಳಿಯ ನಿಜಗಲ್ ಸಿದ್ದರಬೆಟ್ಟದಲ್ಲಿ ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ವೋಲ್ವೋಗ್ರಾಫ್ ಇಂಡಿಯಾ ಇವರ ಸಹಯೋಗದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಂಗ್ರಹಿಸಿರುವ ಪ್ಲಾಸ್ಟಿಕ್‌ ಚೀಲಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಬೃಹತ್ ಜಾಥಾ
ಮುದ್ದೇನಹಳ್ಳಿ ಬಸ್ ನಿಲ್ದಾಣ ಕಾಮಗಾರಿತಡೆ ಖಂಡಿಸಿ ಹೋರಾಟದ ಎಚ್ಚರಿಕೆ