ಹೊನ್ನಾವರ: ತಾಲೂಕಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಜಾನಪದ ಪ್ರತಿಷ್ಠಾನ ಹೊನ್ನಾವರ ಹಾಗೂ ಎಸ್ಡಿಎಂ ಪದವಿ ಕಾಲೇಜಿನ ಕನ್ನಡ ವಿಭಾಗ ಸಹಯೋಗದಲ್ಲಿ ಜಾನಪದ ದೀಪಾರಾಧನೆ ೪೪ ಹಾಗೂ ೪೫ ಕಾರ್ಯಕ್ರಮ ಜರುಗಿತು.
ಅಧ್ಯಕ್ಷೀಯ ನುಡಿಗಳನ್ನಾಡಿದ ಕೃಷ್ಣಮರ‍್ತಿ ಭಟ್,ಶಿವಾನಿ, ಡಾ.ಎನ್.ಆರ್.ನಾಯಕರದ್ದು ಅದ್ಭುತ ವ್ಯಕ್ತಿತ್ವ.ಹಾಗೂ ಎನ್.ಆರ್. ನಾಯಕ್ ಪ್ರಾಚಾರ್ಯರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸಂಸ್ಥೆ ನನಗೇನು ಕೊಟ್ಟಿದೆ ಎಂದು ಕೇಳುವವರೇ ಹೆಚ್ಚು. ಆದರೆ ಇದಕ್ಕೆ ಅಪವಾದ ಡಾ. ಎನ್.ಆರ್.ನಾಯಕ್. ಡಾ. ಎನ್.ಆರ್. ನಾಯಕರ ಮಾರ್ಗದರ್ಶನದಲ್ಲಿ ನಾವು ಮುಂದುವರಿಸುತ್ತಿದ್ದೇವೆ. ಹಿಂದಿನ ಮಹನೀಯರ ತ್ಯಾಗದಿಂದ ಸಂಸ್ಥೆ ಬೆಳೆದಿದೆ. ಜನಪದ ದೀಪಾರಾಧನೆ ಪ್ರತಿ ವರ್ಷ ಎಸ್.ಡಿ.ಎಂ. ಕಾಲೇಜು ಮಾಡುತ್ತದೆ ಎಂದು ಭರವಸೆ ನೀಡಿದರು.
ಡಾ. ಎನ್.ಆರ್. ನಾಯಕ ಶಿಸ್ತು, ನಡೆ, ನುಡಿ ಎಲ್ಲವೂ ಕಾಲೇಜಿನಲ್ಲಿ ಪ್ರಭಾವ ಬೀರಿದೆ ಎಂದರು.ಡಾ. ಶ್ರೀಪಾದ ಭಟ್, ಧಾರೇಶ್ವರ ಹಾಗೂ ಕೃಷ್ಣಮೂರ್ತಿ ಭಟ್, ಶಿವಾನಿಗೆ ಕುವೆಂಪು ದೀಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶಿವಾನಂದ ಕಳವೆ, ಶಿರಸಿ ಮತ್ತು ಶರಣ್ಯ ರಾಮಪ್ರಕಾಶ, ಬೆಂಗಳೂರು ಇವರಿಗೆ ಕಾರಂತ ದೀಪ ಪ್ರಶಸ್ತಿ ಹಾಗೂ ಯಶೋಧಾ ಮರಾಠಿ, ಅಂಕೋಲಾ, ಕಾರ್ತಿಕ ನಾಯಕ, ಅಂಕೋಲಾ ಇವರಿಗೆ ದೇವಮ್ಮ ನಾಯಕ ಪ್ರಶಸ್ತಿ, ಋತ್ವಿಕ್ ಮೇಸ್ತ, ಹೊನ್ನಾವರ ಇವರಿಗೆ ವಿದ್ಯಾರ್ಥಿ ದೀಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್ ಮಾತನಾಡಿ, ಜನಪದ ದೀಪಾರಾಧನೆಗೆ ಶುಭ ಹಾರೈಸಿದರು.
ಎಂಪಿಇ ಸೊಸೈಟಿ ನನಗೆ ಎಲ್ಲವನ್ನು ನೀಡಿದೆ. ಸಂಸ್ಥೆ ಎಂದರೆ ಹೇಗಿರಬೇಕು ಅನ್ನೋದನ್ನು ಎಸ್.ಡಿ.ಎಂ.ಕಾಲೇಜು ನೋಡಿ ಕಲಿಯಬೇಕು. ನಾನು ಈಗ ಜೀವನದ ಕೊನೆಗಾಲದಲ್ಲಿದ್ದೇನೆ. ಈ ವೇಳೆ ನಮ್ಮ ಸಂಸ್ಥೆ , ಕಾಲೇಜು ಬೆಳೆದು ನಿಂತಿರುವುದನ್ನ ನೋಡಿ ಸಂತಸಪಡುತ್ತೇನೆ ಎಂದರು.
ಡಾ. ಶಾಂತಿ ನಾಯಕ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸವಿತಾ ನಾಯ್ಕ ಸ್ವಾಗತಿಸಿದರು. ಸಂಗೀತಾ ನಾಯ್ಕ ಪ್ರಾರ್ಥಿಸಿದರು. ನಾಗರಾಜ್ ಹೆಗಡೆ,ಅಪಗಾಲ್ ವಂದಿಸಿದರು. ಪ್ರಶಾಂತ್ ಹೆಗಡೆ ನಿರೂಪಿಸಿದರು. ಬಳಿಕ ಡಾ. ಎನ್.ಆರ್. ನಾಯಕ್ ದಂಪತಿಗಳ ಕ್ಷೇತ್ರ ಕಾರ್ಯದ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ವೀಕ್ಷಿಸಲಾಯಿತು.