ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದ ಸಮೀಪ ವೀರಭೂಮಿ ಪ್ರವಾಸಿ ಗ್ರಾಮದಲ್ಲಿ ಪರಿಷತ್ತಿನ ರಾಜ್ಯ ಮಟ್ಟದ ಪದಾಧಿಕಾರಿಗಳ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲೆಡೆ ವಿಕೃತ ಮನಸ್ಸು ಜಾಗೃತವಾಗುತ್ತಿದೆ. ಮೌಢ್ಯತೆ ಅಧಿಕವಾಗುತ್ತಿದೆ. ಬೇರು ಸಹಿತ ಕೀಳಲು ಪರಿಷತ್ತು ನಾಲ್ಕು ವರ್ಷಗಳಿಂದ ನಿರಂತರ ಹಲವು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದರು.ಮೌಢ್ಯದ ಕನಸು ಕಿತ್ತು ಹಾಕುವುದು ಧರ್ಮ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮನುಷ್ಯ ಸಂಬಂಧದ ನಡುವೆ ನೋವು ಉಂಟಾಗದಂತೆ ಮಾಡುವುದು ಧರ್ಮ ಎಂದರು.
ಸಂಸ್ಥೆಯ ಪ್ರಮುಖರಾದ, ವೈದ್ಯ ಡಾ. ಅಂಜನಪ್ಪ ಮಾತನಾಡಿ, ಜನರ ನಂಬಿಕೆ ಪರೀಕ್ಷೆ ಮಾಡುವುದು ಅವಮಾನ ಮಾಡಿದಂತೆ ಆಗುತ್ತದೆ. ಮನಸ್ಸಿನ ಮೈಲಿಗೆ ತೊಳೆಯಬೇಕಾಗಿದೆ. ಮನುಷ್ಯನಿಗೆ ಕೇಡು ಬಯಸುವ ದೇವರು ಎಲ್ಲಿಯೂ ಇರುವುದಿಲ್ಲ. ದೇವರನ್ನು ಮಾರುಕಟ್ಟೆ ಸರಕನ್ನಾಗಿ ಮಾಡುವುದು ಸಲ್ಲದು ಎಂದರು.