ತುಂಬಿ ಹರಿಯುತ್ತಿರುವ ನದಿ, ವಾಹನ ಸಂಚಾರಕ್ಕೆ ನಿರ್ಬಂಧ

KannadaprabhaNewsNetwork |  
Published : Jul 18, 2024, 01:37 AM IST
ಫೋಟೋ : ೧೭ಎಚ್‌ಎನ್‌ಎಲ್೪ | Kannada Prabha

ಸಾರಾಂಶ

ವರದಾ ನದಿ ತುಂಬಿ ಹರಿಯುತ್ತಿದ್ದರೂ ಬಾಳಂಬೀಡ ಲಕಮಾಪುರ ನಡುವೆ ಇರುವ ಧರ್ಮಾ ನದಿ ಬಾಂದಾರದ ಮೇಲೆ ವಾಹನ ಸಹಿತ ಸವಾರಿ ಮಾಡುವ ಮೂಲಕ ಅಪಾಯವನ್ನು ಆಹ್ವಾನ ಮಾಡಿಕೊಳ್ಳುತ್ತಿರುವ ದೃಶ್ಯಗಳು ಜಾಲ ತಾಣಗಳ ಮೂಲಕ ಹರಿದಾಡುತ್ತಿರುವುದುನ್ನು ಗಮನಿಸಿದ ತಾಲೂಕು ಆಡಳಿತ ಅಲ್ಲಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸುವ ಅನಿವಾರ್ಯತೆಗೆ ಒಳಗಾಗಿದೆ.

ಹಾನಗಲ್ಲ: ವರದಾ ನದಿ ತುಂಬಿ ಹರಿಯುತ್ತಿದ್ದರೂ ಬಾಳಂಬೀಡ ಲಕಮಾಪುರ ನಡುವೆ ಇರುವ ಧರ್ಮಾ ನದಿ ಬಾಂದಾರದ ಮೇಲೆ ವಾಹನ ಸಹಿತ ಸವಾರಿ ಮಾಡುವ ಮೂಲಕ ಅಪಾಯವನ್ನು ಆಹ್ವಾನ ಮಾಡಿಕೊಳ್ಳುತ್ತಿರುವ ದೃಶ್ಯಗಳು ಜಾಲ ತಾಣಗಳ ಮೂಲಕ ಹರಿದಾಡುತ್ತಿರುವುದುನ್ನು ಗಮನಿಸಿದ ತಾಲೂಕು ಆಡಳಿತ ಅಲ್ಲಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸುವ ಅನಿವಾರ್ಯತೆಗೆ ಒಳಗಾಗಿದೆ.ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ ಈಗಾಗಲೇ ಮುನ್ನೆಚ್ಚರಿಕೆ ನೀಡಿ ವರದಾ ನದಿ ತುಂಬಿ ಹರಿಯುತ್ತಿದೆ, ಇಡೀ ವಾರದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿದೆ. ಇನ್ನೂ ಮೂರು ನಾಲ್ಕು ದಿನ ಹೆಚ್ಚು ಮಳೆ ಬೀಳುವ ಮಾಹಿತಿ ಇದೆ. ವರದಾ ಧರ್ಮಾ ನದಿಗಳ ಬ್ಯಾರೇಜ್‌ ಹಾಗೂ ಸೇತುವೆಗಳ ಮೇಲೆ ನೀರು ಹರಿಯುವ ಮಟ್ಟದಲ್ಲಿದೆ. ಕೆಲವೆಡೆ ಬ್ಯಾರೇಜ್ ಮೇಲೆ ನೀರು ಹರಿಯಲು ಆರಂಭಿಸಿದೆ. ಸಾರ್ವಜನಿಕರು ಇಂತಹ ಬ್ಯಾರೇಜ್ ಸೇತುವೆಗಳನ್ನು ಬಳಸಿ ಓಡಾಡಬಾರದು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ವರದಾ ನದಿಗೆ ಕಟ್ಟಿರುವ ಕೂಡಲ ಸೇತುವೆ ಮೇಲೆ ಆಗಲೇ ನೀರು ಹರಿಯುತ್ತಿದೆ ಎಂದು ಎಚ್ಚರಿಸಿದ್ದಾರೆ. ವರದಾ ನದಿ ನೀರು ಜನವಸತಿಗೆ ನುಗ್ಗಿದರೆ ತಕ್ಷಣ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇಂತಹದರ ನಡುವೆ ಸಾರ್ವಜನಿಕರು ಸೇತುವೆ ಬ್ಯಾರೇಜಗಳ ಮೇಲೆ ನೀರು ಹರಿಯುತ್ತಿರುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸಂಚಾರದ ಸಾಹಸ ಮಾಡುತ್ತಿರುವ ಸುದ್ದಿ, ಫೋಟೋ, ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ. ಇದನ್ನು ಗಮನಿಸಿದ ತಾಲೂಕು ಆಡಳಿತ ಬಾಳಂಬೀಡ ಬಳಿ ಜನರು ಭಯವಿಲ್ಲದೆ ತುಂಬಿದ ನದಿ ಬ್ಯಾರೇಜ್ ಮೇಲೆ ಓಡಾಡುವುದನ್ನು ನಿಯಂತ್ರಿಸಲು ಬುಧವಾರ ಮಧ್ಯಾಹ್ನ ಬ್ಯಾರೇಜ್‌ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸ್‌ ರಕ್ಷಣೆ ಒದಗಿಸಲಾಗಿದೆ. ಸಾರ್ವಜನಿಕರು ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ತುಂಬಿದ ನದಿಯ ಜೊತೆ ಆಟ ಬೇಡ ಎಂದು ತಾಲೂಕು ಆಡಳಿತ ಎಚ್ಚರಿಸಿದೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ