ಕಾನೂನಿನ ಅರಿವು ಮೂಡಿಸುವಲ್ಲಿ ವಕೀಲರ ಪಾತ್ರ ಬಹಳ ಮುಖ್ಯ

KannadaprabhaNewsNetwork |  
Published : Nov 01, 2026, 03:15 AM IST
ಶಿಗ್ಗಾಂವಿ ನ್ಯಾಯಾಲಯದ ಆವರಣದಲ್ಲಿ ನಡೆದ ನ್ಯಾಯವಾದಿಗಳ ಸಂಘದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಹಾವೇರಿ ಜಿಲ್ಲಾ ಪ್ರಧಾನ ಜಿಲ್ಲಾ ವ ಸತ್ರ ನ್ಯಾಯಾಧೀಶರ ದೇವೇಂದ್ರಪ್ಪ ಬಿರಾದಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾನೂನಿನ ಅರಿವು ಮೂಡಿಸುವಲ್ಲಿ ವಕೀಲರ ಪಾತ್ರ ಬಹಳ ಮುಖ್ಯ, ಎಪ್ಪತ್ತೈದು ವರ್ಷ ಕಳೆದರೂ ಸಾಮಾನ್ಯ ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸ ಆಗಿಲ್ಲ, ವಕೀಲರು ಇಂತಹ ಮಹತ್ವದ ವೃತ್ತಿಯಲ್ಲಿ ಇದ್ದೀರಿ ಕಾನೂನಿನ ಅರಿವು ಮೂಡಿಸುವಲ್ಲಿ ತಮ್ಮ ಪಾತ್ರವೂ ಬಹಳ ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ: ಕಾನೂನಿನ ಅರಿವು ಮೂಡಿಸುವಲ್ಲಿ ವಕೀಲರ ಪಾತ್ರ ಬಹಳ ಮುಖ್ಯ, ಎಪ್ಪತ್ತೈದು ವರ್ಷ ಕಳೆದರೂ ಸಾಮಾನ್ಯ ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸ ಆಗಿಲ್ಲ, ವಕೀಲರು ಇಂತಹ ಮಹತ್ವದ ವೃತ್ತಿಯಲ್ಲಿ ಇದ್ದೀರಿ ಕಾನೂನಿನ ಅರಿವು ಮೂಡಿಸುವಲ್ಲಿ ತಮ್ಮ ಪಾತ್ರವೂ ಬಹಳ ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ, ನ್ಯಾಯವಾದಿಗಳ ಸಂಘ, ಶಿಗ್ಗಾಂವಿ ಇವರ ಸಹಯೋಗದಲ್ಲಿ ನ್ಯಾಯವಾದಿಗಳ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ದಿ.ಶಂಕರಗೌಡ್ರ ಪಾಟೀಲ ಅವರ ಪುಣ್ಯದಿಂದ ಇಲ್ಲಿ ಜಾಗ ಸಿಕ್ಕಿದೆ. ಒಳ್ಳೆಯ ಕಟ್ಟಡ ಆಗಿದೆ. ದಿ.ಶಂಕರಗೌಡ್ರಗೆ ವಕೀಲರ ಬಗ್ಗೆ ಅಪಾರ ಅಭಿಮಾನ ಗೌರವ ಇತ್ತು. ನಿಮಗೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಇನ್ನೊಂದು ಜೂನಿಯರ್ ಜೆಎಂಎಫ್‌ಸಿ ಆಗುತ್ತದೆ. ಆದು ಆದ ತಕ್ಷಣ ಕೇಸ್‌ಗಳ ವಿಲೇವಾರಿ ಬೇಗ ಆಗುತ್ತದೆ. ನಾಲ್ಕು ಸಾವಿರ ಪ್ರಕರಣಗಳಿವೆ. ವಕೀಲರು ಹೆಚ್ಚಾಗಿದ್ದಾರೆ. ಆ ಸಂಖ್ಯೆಗೆ ಅನುಗುಣವಾಗಿ ವಕೀಲರು ಹಾಗೂ ಜಡ್ಜಗಳ ಸಂಖ್ಯೆ ಬಹಳ ಕಡಿಮೆ ಇದೆ ಎಂದರು.

ಹಾವೇರಿ ಜಿಲ್ಲಾ ಪ್ರಧಾನ ಜಿಲ್ಲಾ ವ ಸತ್ರ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ಕಟ್ಟಡ ಉದ್ಘಾಟಿಸಿ ಮಾತನಾಡಿ, ನೂತನ ಕಟ್ಟಡ ಸದುಪಯೋಗವಾಗಬೇಕು, ನಿಮ್ಮ ಕಕ್ಷಿದಾರರಿಗೆ ಸಕಾಲ ವೇಳೆಯಲ್ಲಿ ನ್ಯಾಯ ಸಿಗುವಂತಾಗಬೇಕು, ಸೌಜನ್ಯದಿಂದ ವಕೀಲರು ಮಾತನಾಡಬೇಕು, ಕಕ್ಷಿದಾರರ ಮನಸ್ಸು ನೋಯಿಸಬೇಡಿ, ಅಂದಾಗ ಕಟ್ಟಡಕ್ಕೆ ನೀಡಿದ ಸರಕಾರದ ಹಣ, ಅನುದಾನದ ಕೊಡುಗೆ ಸದುಪಯೋಗವಾಗುತ್ತದೆ, ಶಿಗ್ಗಾಂವಿಯಲ್ಲಿ ಸಿವಿಲ್ ಜಡ್ಜ್ ಕೋರ್ಟ್ ಆಗುವ ನಿರೀಕ್ಷೆಯು ಇದೆ ಎಂದು ಭರವಸೆ ನೀಡಬಹುದು ಎಂದರು.

ಶಾಸಕ ಯಾಸೀರ್ ಖಾನ್ ಪಠಾಣ್ ಮಾತನಾಡಿ, ಶಿಗ್ಗಾಂವಿ ದಾರ್ಶನಿಕರ ತಾಲೂಕಾಗಿದೆ, ಇಲ್ಲಿ ವ್ಯಾಜ್ಯಗಳು ಇರಬಾರದು, ರಾಜಕಾರಣದಲ್ಲಿ ವಕೀಲರು ತೊಡಗಿಕೊಳ್ಳಬೇಕು, ಇ-ಲ್ಯಾಬ್ರರಿ, ನ್ಯಾಯಾಧೀಶರಿಗೆ ವಸತಿ ಗೃಹದ ವ್ಯವಸ್ಥೆ ಸೇರಿದಂತೆ ವಕೀಲರ ಸಂಘದ ಕೆಲಸಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಎಫ್‌ಡಿ ವಿಚಾರವನ್ನ ಸಿಎಂ ಬಳಿ ಕರೆದುಕೊಂಡು ಹೋಗಿ ಮಾಡಿ ಕೊಡಲಾಗುವುದು, ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಬೇಡಿಕೆಯನ್ನು ನಾನೂ ಸಹಿತ ಸಂಬಂಧಿಸಿದವರಿಗೆ ತಿಳಿಸಿ ಮಾಡಿಕೊಡಲಾಗುವುದು, ಶಿಷ್ಠಾಚಾರದಲ್ಲಿ ಕೆಲ ಲೋಪವಾಗಿದೆ ಎಂದು ತಿಳಿದು ಬಂದಿದೆ, ಅದನ್ನು ಜಿಲ್ಲಾ ನ್ಯಾಯಾಧೀಶರು ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹಾಗೂ ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯ ಬಿ.ವಿ. ಕೋರಿಮಠ ಮಾತನಾಡಿದರು. ಹಿರಿಯ ನ್ಯಾಯವಾದಿ ಜಿ.ಐ. ಸಜ್ಜನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ. ಲಕ್ಕಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಶಿಗ್ಗಾಂವಿಯ ಹಿರಿಯ ದಿವಾಣಿ ಜೆಎಮ್‌ಎಫ್‌ಸಿ ನ್ಯಾಯಾಧೀಶರಾದ ಸುನೀಲ ತಳವಾರ, ಸಂಘದ ಕಾರ್ಯದರ್ಶಿ ವಿವೇಕ ರಾಮಗೇರಿ, ಉಪಾಧ್ಯಕ್ಷ ಎಸ್.ಜಿ. ಟೋಪಣ್ಣನವರ, ಭೂದಾನಿಗಳಾದ ಸುಶೀಲಾಬಾಯಿ ಶಂಕರಗೌಡ ಪಾಟೀಲ್ ಹಾಗೂ ಸಿದ್ದಾರ್ಥಗೌಡ ಪಾಟೀಲ್ ಸೇರಿದಂತೆ ವಕೀಲರ ಸಂಘದ ಸರ್ವ ಸದಸ್ಯರು ಹಾಗೂ ಪ್ರಮುಖರು ಇದ್ದರು.

ವಕೀಲರ ಸಂಘದವರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಬಹಳಷ್ಟು ಒತ್ತಡ ಮಾಡಿದ್ದರು, ನಿಮ್ಮ ಪ್ರೀತಿ ವಿಶ್ವಾಸ ನನ್ನನ್ನು ಇಲ್ಲಿಗೆ ಕರೆ ತಂದಿದೆ. ನಾನು ಶಿಷ್ಟಾಚಾರ ಉಲ್ಲಂಘನೆ ಮಾಡಿ ಎಲ್ಲಿಯೂ ಹೋಗುವುದಿಲ್ಲ. ಯಾರೂ ಶಾಶ್ವತ ಅಲ್ಲ. ಈ ದೇಶ, ನಾಡು, ಸಮಾಜ ಶಾಶ್ವತ. ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬುವ ಕೆಲಸ ಮಾಡಿ, ಸಂವಿಧಾನ ಎತ್ತಿ ಹಿಡಿಯುವ ಕೆಲಸ ಮಾಡಿ, ಶಿಗ್ಗಾಂವಿ ಸವಣೂರು ಬಾರ್ ಇಡೀ ದೇಶದಲ್ಲಿಯೇ ಪ್ರಖ್ಯಾತಿಯಾಗುವ ಕೆಲಸ ಮಾಡುವ ವಿಶ್ವಾಸ ಇದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ