ಸಶಕ್ತ ಭಾರತ ನಿರ್ಮಾಣಕ್ಕೆ ಎನ್ನೆಸ್ಸೆಸ್ ಪಾತ್ರ ಬಹುಮುಖ್ಯ: ರವೀಂದ್ರನಾಥ

KannadaprabhaNewsNetwork | Published : Jan 21, 2024 1:39 AM

ಸಾರಾಂಶ

ಸದೃಢ ಸಶಕ್ತ ಭಾರತ ನಿರ್ಮಾಣಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವೀಂದ್ರನಾಥ ದಂಡಿನ ಹೇಳಿದರು.

ಗದಗ: ಭಾರತೀಯ ಪರಂಪರೆ ಸಂಸ್ಕೃತಿ ಆಚಾರ ವಿಚಾರಗಳು ಪ್ರಪಂಚದಲ್ಲಿಯೇ ವಿಶಿಷ್ಟವಾಗಿದೆ. ದೇಶದಲ್ಲಿ ಅನೇಕ ಪುಣ್ಯಪುರುಷರು ಮಹಾತ್ಮರು ಜನ್ಮ ತಾಳಿದ್ದಾರೆ. ಯುವಕರು ಸಶಕ್ತರಾಗಬೇಕಾದರೆ ಜೀವನದಲ್ಲಿ ಆದರ್ಶ ಪುಣ್ಯ ಪುರುಷರ ಸನ್ಮಾರ್ಗದಲ್ಲಿ ನಡೆಯಬೇಕು. ಸದೃಢ ಸಶಕ್ತ ಭಾರತ ನಿರ್ಮಾಣಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವೀಂದ್ರನಾಥ ದಂಡಿನ ಹೇಳಿದರು.

ತಾಲೂಕಿನ ಕದಾಂಪುರ ಗ್ರಾಮದಲ್ಲಿ ಗದುಗಿನ ಕೆ.ಎಸ್.ಎಸ್.ಕಲಾ ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತ್ತಕೋತ್ತರ ಅದ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಮಾತನಾಡಿ, ರಾಷ್ಟ್ರಿಯ ಸೇವಾ ಯೋಜನೆ ಒಂದು ದೇಶ ಕಟ್ಟುವ ಯುವಕರಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸುವ ಯೋಜನೆಯಾಗಿದೆ. ಸ್ವಯಂ ಪ್ರೇರಣೆಯಿಂದ ಯುವಕರು ಸದೃಢವಾಗುವ ಒಂದು ವೇದಿಕೆಯಾಗಿದೆ. ಶ್ರಮದಾನಗಳ ಮೂಲಕ ಸಸಿ ನೆಡುವದರ ಮೂಲಕ ಪರಿಸರ ಸ್ವಚ್ಛ ಮಾಡುವುದರ ಮೂಲಕ ಸಮಾಜದಲ್ಲಿ ಸತ್ಕಾರ್ಯಗಳನ್ನು ಮಾಡುವುದು ಪುಣ್ಯದ ಕೆಲಸಗಳಾಗಿವೆ ಎಂದರು.

ಈ ವೇಳೆ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎ.ಕೆ. ಪೂಜಾರ ಜೀವನದಲ್ಲಿ ಹಾಸ್ಯ ಕುರಿತು ವಿಶೆಷ ಉಪನ್ಯಾಸ ನೀಡಿದರು. ಜಾನಪದ ಕಲಾವಿದ ಗವಿಸಿದ್ದಯ್ಯ ಹಿರೇಮಠ ಜಾನಪದ ಶೈಲಿಯಲ್ಲಿ ಸಭಿಕರನ್ನು ಮನರಂಜಿಸುವುದರ ಮೂಲಕ ರಾಷ್ಟ್ರೀಯ ಸೇವಾಯೋಜನೆಯ ಮಹತ್ವವನ್ನು ತಿಳಿಸಿಕೊಟ್ಟರು. ಗದಗ ಜಿಲ್ಲಾ ನೈರ್ಮಲ್ಯ ಮತ್ತು ಸುಚಿತ್ವ ಸಮಾಲೋಚಕ ಕೃಷ್ಣಾ ದೊಡ್ಡಮನಿ ನಮ್ಮ ಗ್ರಾಮ ಸ್ವಚ್ಛ ಗ್ರಾಮ, ಪ್ಲಾಸ್ಟಿಕ್ ನಿಷೇಧ ಕುರಿತು, ಶೌಚಾಲಯಗಳ ನಿರ್ಮಾಣ ಮತ್ತು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣ ಮಾಡುವುದರ ಕುರಿತು ಸರಕಾರದ ಸೌಲಭ್ಯಗಳನ್ನು ತಿಳಿಸಿಕೊಟ್ಟರು.

ಶಕುಂತಲಾ ಲಕ್ಷ್ಮಣ ಸಂಕಣ್ಣವರ, ನಿಂಗಪ್ಪ ತಿಪ್ಪಣ್ಣ ಶಿರೂರ, ಭರಮಪ್ಪ ಸಂಕಣ್ಣವರ, ಪ್ರೊ.ನಾಗರಾಜು ಕಡ್ಲಬಾಳು, ವೈ.ಬಿ. ರೆವಡಕುಂಡಿ, ಸತಿಶ ಅಳಗುಂಡಗಿ, ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮ ಅಧಿಕಾರಿ ಪೊ.ಎಸ್.ಬಿ. ಪಲ್ಲೇದ ಹಾಗೂ ಪ್ರೊ.ಶಿವಾನಂದ ಕೊರವರ ಇದ್ದರು. ಸ್ವಯಂ ಸೇವಕ ಕುಮಾರಸ್ವಾಮಿ ಮಠದ ಪ್ರಾರ್ಥನೆಗೈದರು. ಹನಮಂತ ಹಳ್ಳುರ ನಿರೂಪಿಸಿದರು. ಈರಯ್ಯ ಹಿರೇಮಠ ವಂದಿಸಿದರು.

Share this article