ಹೊಸ ದೇಗುಲಕ್ಕಿಂತ ಈಗಿರುವ ಗುಡಿಗಳ ಪುನರುಜ್ಜೀವನ ಅಗತ್ಯ: ಕಿಮ್ನನೆ ರತ್ನಾಕರ್‌

KannadaprabhaNewsNetwork |  
Published : Jan 21, 2024, 01:38 AM IST
ಫೋಟೋ 20 ಟಿಟಿಎಚ್ 01: ಮಾಜಿ ಸಚಿವಕಿಮ್ಮನೆರತ್ನಾಕರ್‍ನೇತೃತ್ವದಲ್ಲಿ ಪಟ್ಟಣದತುಂಗಾನದಿ ತೀರದಲ್ಲಿರುವಕೋಂಡರಾಮದೇವಸ್ಥಾನದಆವರಣವನ್ನು ಶನಿವಾರ ಸ್ವಚ್ಚಗೊಳಿಸಲಾಯ್ತು. | Kannada Prabha

ಸಾರಾಂಶ

ಕೋದಂಡರಾಮ ದೇಗುಲ ಮೂರು ಶತಮಾನಗಳ ಹಿಂದಿನದಾಗಿದೆ. ನನ್ನ ಬಾಲ್ಯದಿಂದ ಈ ದೇಗುಲ ನೋಡುತ್ತಿದ್ದೇನೆ. ತುಂಗಾನದಿ ತೀರದ ಸುಂದರ ವಾತಾವರಣದ ನಡುವೆ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನ ಸಮೀಪದಲ್ಲಿರುವ ಈ ದೇವಸ್ಥಾನ ಶಿಲ್ಪಕಲೆಯಿಂದ ಸುಂದರವಾಗಿದೆ. ದೇಶದಲ್ಲಿ ಹೊಸ ದೇವಸ್ಥಾನಗಳನ್ನು ನಿರ್ಮಿಸಿ, ಸಮಸ್ಯೆಗಳನ್ನು ಸೃಷ್ಟಿ ಮಾಡುವುದಕ್ಕಿಂತ, ಇರುವ ದೇವಸ್ಥಾನಗಳನ್ನೇ ಪುನರುಜ್ಜೀವನಗೊಳಿಸಿ, ಅವುಗಳನ್ನು ಉತ್ತಮ ಸ್ಥಿತಿಯಲ್ಲಿಡುವುದು ಸೂಕ್ತ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಪಟ್ಟಣದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ದೇಶದಲ್ಲಿ ಹೊಸ ದೇವಸ್ಥಾನಗಳನ್ನು ನಿರ್ಮಿಸಿ, ಸಮಸ್ಯೆಗಳನ್ನು ಸೃಷ್ಟಿ ಮಾಡುವುದಕ್ಕಿಂತ, ಇರುವ ದೇವಸ್ಥಾನಗಳನ್ನೇ ಪುನರುಜ್ಜೀವನಗೊಳಿಸಿ ಅವುಗಳನ್ನು ಉತ್ತಮ ಸ್ಥಿತಿಯಲ್ಲಿಡುವುದು ಸೂಕ್ತ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಶನಿವಾರ ಪಟ್ಟಣದ ತುಂಗಾನದಿ ತೀರದ ಶ್ರೀ ಕೋದಂಡರಾಮ ದೇವಸ್ಥಾನ ಆವರಣವನ್ನು ಸ್ವಚ್ಚಗೊಳಿಸುವ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯುವ ಸಂದರ್ಭ ಈ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಆಯೋಜಿಸಿದ್ದೇವೆ ಎಂದರು.

ಕೋದಂಡರಾಮ ದೇಗುಲ ಮೂರು ಶತಮಾನಗಳ ಹಿಂದಿನದಾಗಿದ.ಎ ನನ್ನ ಬಾಲ್ಯದಿಂದ ಈ ದೇಗುಲ ನೋಡುತ್ತಿದ್ದೇನೆ. ತುಂಗಾನದಿ ತೀರದ ಸುಂದರ ವಾತಾವರಣದ ನಡುವೆ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನ ಸಮೀಪದಲ್ಲಿರುವ ಈ ದೇವಸ್ಥಾನ ಶಿಲ್ಪಕಲೆಯಿಂದ ಸುಂದರವಾಗಿದೆ. ಪಟ್ಟಣದ ಮಧ್ಯ ಭಾಗದಲ್ಲಿದ್ದರೂ ಕನಿಷ್ಠ ನಿರ್ವಹಣೆ ಇಲ್ಲದೇ, ದೇವಸ್ಥಾನದ ಸುತ್ತಲೂ ಗಿಡಗಳು ಬೆಳೆದಿವೆ. ಈ ದೇವಸ್ಥಾನ ಆವರಣವನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣಗಳಿಂದ ಅಲಂಕಾರಗೊಳಿಸಲು ತೀರ್ಮಾನಿಸಿದ್ದೇವೆ ಎಂದರು.

ರಾಜ್ಯ ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಈ ದೇವಸ್ಥಾನವನ್ನುಅಂದಾಜು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ದೇವಸ್ಥಾನವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈ ಜೋಡಿಸಿರುವ ಪ.ಪಂ. ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್‍ ಕಾರ್ಯಕರ್ತರು ಮತ್ತು ಅಭಮಾನಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿಯೂ ತಿಳಿಸಿದರು.

ಪಪಂ ಅಧ್ಯಕ್ಷೆ ಗೀತಾ ರಮೇಶ್, ಡಿ.ಎಸ್. ವಿಶ್ವನಾಥ ಶೆಟ್ಟಿ, ಬಂಡೆ ವೆಂಕಟೇಶ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಯುವ ಕಾಂಗ್ರೆಸ್‍ ಅಧ್ಯಕ್ಷ ಅಮರನಾಥ ಶೆಟ್ಟಿ, ಅಮ್ರಪಾಲಿ ಸುರೇಶ್ ಮುಂತಾದವರು ಇದ್ದರು.

- - - -20ಟಿಟಿಎಚ್01:

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ನೇತೃತ್ವದಲ್ಲಿ ತೀರ್ಥಹಳ್ಳಿ ಪಟ್ಟಣದ ತುಂಗಾನದಿ ತೀರದ ಕೋಂಡರಾಮ ದೇವಸ್ಥಾನ ಆವರಣವನ್ನು ಶನಿವಾರ ಸ್ವಚ್ಛಗೊಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ