ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಉತ್ತರ ಕರ್ನಾಟಕ ಶಾಮಿಯಾನ ಸಪ್ಲಾಯರ್ಸ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ ಜಿಲ್ಲಾ ಮಂಟಪ, ಲೈಟ್, ಮೈಕ್, ಫ್ಲವರ್ ಡೆಕೋರೇಶನ್, ಕೆಟರರ್ಸ್ ಮತ್ತು ಸಪ್ಲಾಯರ್ಸ್ ಮಾಲಿಕರ ಸಂಘ ಆಯೋಜಿಸಿದ್ದ ಮಹಾ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸಲಾಗುವುದು. ಜಿಲ್ಲೆಯಲ್ಲಿ ಪೆಂಡಾಲ್ ಮಾಲಿಕರು, ಕಾರ್ಮಿಕರ ಜೊತೆ ಆತ್ಮೀಯ ಸಂಬಂಧವಿದೆ. ಶಾಮಿಯಾನ ಮಾಲಿಕರು ಮತ್ತು ಕಾರ್ಮಿಕರು ಒತ್ತಡಗಳ ಮಧ್ಯೆ ಕೆಲಸ ಮಾಡುತ್ತಾರೆ. ಇಂದಿನ ಆಧುನಿಕತೆ ತಕ್ಕಂತೆ ಮಾಲಿಕರು ಮತ್ತು ಕಾರ್ಮಿಕರು ವೃತ್ತಿಕೌಶಲ್ಯವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ವೇಳೆ ಜಿಎಸ್‌ಟಿ ಸಮಸ್ಯೆ ಬಗೆಹರಿಸುವಂತೆ ಶಾಮಿಯಾನ ಸಂಘದವರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲರು, ಮನವಿ ಕೊಡಿ. ಸಿಎಂ ಗಮನಕ್ಕೆ ತಂದು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಗೊಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಶ್ರದ್ಧಾನಂದ ಸ್ವಾಮೀಜಿ, ಶಾಮಿಯಾನ ಮಾಲಿಕರ ಸಂಘದ ಅಮರೇಶ ಹಿರೇಮಠ, ಶಿವಾನಂದ ಮಾನಕರ, ಪೂರ್ಣಚಂದ್ರ ಬಾಬುರಾವ, ಟಿ.ನರಸಿಂಗಮೂರ್ತಿ, ಪರ್ತಾರಸಿಂಗ್ ಕೋಚರ, ಇಂದ್ರಚಂದ್ರ, ಮುಖಂಡರಾದ ಮಳುಗೌಡ ಪಾಟೀಲ, ಗೂಳಪ್ಪ ಶಟಗಾರ, ಮಹಾದೇವ ರಾಠೋಡ, ವಿ.ಸಿ.ನಾಗಠಾಣ, ಸಂಗು ಸಜ್ಜನ ಉಪಸ್ಥಿತರಿದ್ದರು.