ಪರಿಸರ ವ್ಯವಸ್ಥೆಯಲ್ಲಿ ಗುಬ್ಬಚ್ಚಿಗಳ ಪಾತ್ರ ಮಹತ್ವದ್ದು: ಸಂಗಮೇಶ ಪ್ರಭಾಕರ

KannadaprabhaNewsNetwork |  
Published : Mar 04, 2026, 02:30 AM IST
(3ಎನ್.ಆರ್.ಡಿ3 ಉಪನ್ಯಾಸ ಕಾಯ೯ಕ್ರಮದಲ್ಲಿ ಸಂಗಮೇಶ ಪ್ರಭಾಕರ ಮಾತನಾಡಿದರು.)  | Kannada Prabha

ಸಾರಾಂಶ

ಗುಬ್ಬಚ್ಚಿಗಳು ಕೀಟಗಳ ನಿಯಂತ್ರಣ ಮಾಡುತ್ತವೆ. ಗುಬ್ಬಚ್ಚಿಗಳು ಕೃಷಿ ಮತ್ತು ತೋಟಗಾರಿಕೆಗೆ ಹಾನಿ ಮಾಡುವ ಸಣ್ಣ ಕೀಟಗಳು, ಮರಿಹುಳುಗಳು ಮತ್ತು ವಿವಿಧ ಹುಳುಗಳನ್ನು ತಿನ್ನುತ್ತವೆ.

ನರಗುಂದ: ಮಾನವನ ಬದುಕಿನಲ್ಲಿ ಮತ್ತು ಪರಿಸರ ವ್ಯವಸ್ಥೆಯಲ್ಲಿ ಗುಬ್ಬಚ್ಚಿಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಆದ್ದರಿಂದ ಗುಬ್ಬಚ್ಚಿಗಳ ಸಂತಾನ ಬೆಳವಣಿಗೆ ಬಗ್ಗೆ ಗಂಭೀರ ಚಿಂತನೆ ಮಾಡಬೇಕೆಂದು ಯಲ್ಲಾಪುರದ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ ತಿಳಿಸಿದರು.

ತಾಲೂಕಿನ ಕಣಕಿಕೊಪ್ಪ ಸರ್ಕಾರಿ ಪ್ರೌಢಶಾಲೆ ಹಸಿರು ಇಕೋ ಕ್ಲಬ್‌ ವತಿಯಿಂದ ಸ್ಪ್ಯಾರೋ ಕಂಸರವೇಶನ್ ಫೌಂಡೇಶನ್ ಬೆಳಗಾವಿ, ಗದಗ, ದಾವಣಗೆರೆ ಇವರ ಸಹಯೊಗದಲ್ಲಿ ಪರಿಸರದಲ್ಲಿ ಗುಬ್ಬಚ್ಚಿಗಳ ಮಹತ್ವ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಗುಬ್ಬಚ್ಚಿಗಳು ಕೀಟಗಳ ನಿಯಂತ್ರಣ ಮಾಡುತ್ತವೆ. ಗುಬ್ಬಚ್ಚಿಗಳು ಕೃಷಿ ಮತ್ತು ತೋಟಗಾರಿಕೆಗೆ ಹಾನಿ ಮಾಡುವ ಸಣ್ಣ ಕೀಟಗಳು, ಮರಿಹುಳುಗಳು ಮತ್ತು ವಿವಿಧ ಹುಳುಗಳನ್ನು ತಿನ್ನುತ್ತವೆ ಎಂದರು.

ವಿಶೇಷವಾಗಿ ತಮ್ಮ ಮರಿಗಳಿಗೆ ಆಹಾರ ನೀಡುವಾಗ, ಇವು ಹಾನಿಕಾರಕ ಕೀಟಗಳನ್ನು ಹೆಚ್ಚಾಗಿ ಬೇಟೆಯಾಡುವುದರಿಂದ ರೈತರಿಗೆ ಸಹಕಾರಿಯಾಗಿವೆ. ಇವು ಕೇವಲ ಮುದ್ದಾದ ಪಕ್ಷಿಗಳಲ್ಲ. ಬದಲಾಗಿ ಪರಿಸರದ ಆರೋಗ್ಯದ ಸಂಕೇತಗಳಾಗಿವೆ. ಗುಬ್ಬಚ್ಚಿಗಳು ವಿವಿಧ ಸಸ್ಯಗಳ ಬೀಜಗಳನ್ನು ತಿಂದು ನಂತರ ಅವುಗಳನ್ನು ಬೇರೆಡೆಗೆ ಸಾಗಿಸುವ ಮೂಲಕ ಸಸ್ಯಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತವೆ. ಇದು ಪರಿಸರದಲ್ಲಿ ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಗುಬ್ಬಚ್ಚಿಗಳ ಸಂರಕ್ಷಣೆ ಅವಶ್ಯವೆಂದು ತಿಳಿಸಿದರು.

ಸಂಶೋಧಕ ಮಂಜುನಾಥ ನಾಯಕ ಮಾತನಾಡಿ, ಮಾ. 20 ವಿಶ್ವ ಗುಬ್ಬಚ್ಚಿ ದಿನ ಆಚರಿಸಲಾಗುತ್ತದೆ. ಬಿಸಿಲಿನ ಪ್ರಖರತೆಯಿಂದ ಪಕ್ಷಿ- ಪ್ರಾಣಿಗಳು ಸಾವಿಗೀಡಾಗುತ್ತವೆ. ಆದರಿಂದ ವಿದ್ಯಾರ್ಥಿಗಳು ತಮ್ಮ ಮನೆ ಅಂಗಳ, ತಾರಸಿ ಮೇಲೆ ನೀರು ತುಂಬಿದ ಮಡಕೆ, ಮಣ್ಣಿನ ಪಾತ್ರೆಗಳನಿಟ್ಟು ಪಕ್ಷಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಎಲ್ಲ ಸಿಬ್ಬಂದಿಗೆ ಪ್ರಶಾಂತ ಸಾಗರ ಅವರು ನಿರ್ದೇಶಿಸಿ ನಿರ್ಮಿಸಿದ ಕೌತುಕ ಮಂಗಟ್ಟೆ ಜೀವನಕ್ರಮದ ಕಿರುಚಿತ್ರ ಪ್ರದರ್ಶಿಸಲಾಯಿತು. ಶಿಕ್ಷಕಿ ಎಸ್.ಎಲ್. ಮರಿಗೌಡರ ಸ್ವಾಗತಿಸಿದರು. ಶಿಕ್ಷಕ ಎಸ್.ಜಿ. ಕಡಿವಾಲ ನಿರೂಪಿಸಿದರು. ಬಿ.ಆರ್. ಹಳೆಮನಿ ವಂದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಐ.ಎಂ. ಹುರಕಡ್ಲಿ, ಬಿ.ಎಚ್. ಲಕ್ಕಲಕಟ್ಟಿ, ಎಸ್.ಪಿ. ಹಿರೇಮನಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಣ ತಾಲೂಕಿನಲ್ಲಿ 36 ಶುದ್ಧ ನೀರಿನ ಘಟಕಗಳೇ ಬಂದ್!
ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬೆಳೆಸುವುದು ಅವಶ್ಯಕ