- ರಂಗೇನಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಾರ್ಷಿಕೋತ್ಸವ । ಚಿಣ್ಣರ ರಂಗೋತ್ಸವ ಕಾರ್ಯಕ್ರಮ
ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾದುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ರಂಗೇನಹಳ್ಳಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಚಿಣ್ಣರ ರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಸರ್ಕಾರ ನೀಡುವ ಸೌಲಭ್ಯಗಳ ಸದುಪಯೋಗಿಸಿಕೊಂಡು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದ ಅವರು ಸರ್ಕಾರದಿಂದ ಶಾಲೆಗೆ ಮೂರು ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು. ಶಾಲೆಯ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್ ಮಾತ ನಾಡಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವ ಮೂಲಕ ಸರ್ಕಾರಿ ಶಾಲೆ ಉಳಿಸುವ ಕೆಲಸ ಪೋಷಕರಿಂದ ಆಗಬೇಕಿದೆ. ಶಾಲೆಯಲ್ಲಿ ಉತ್ತಮ ಸೌಲಭ್ಯ ಹಾಗೂ ನುರಿತ ಶಿಕ್ಷಕರಿಂದ ಅಭಿವೃದ್ಧಿ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ದತ್ತಿ ದಾನಿ ಗೊಲ್ಲರಹಳ್ಳಿ ರಂಗಪ್ಪ ಅವರು ಮಾತನಾಡಿ ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳು ಬಹುತೇಕ ಬಡ ಹಾಗೂ ಗ್ರಾಮೀಣ ಭಾಗದ ಕೂಲಿಕಾರ್ಮಿಕರ ಮಕ್ಕಳಾಗಿದ್ದು ಶಿಕ್ಷಕರು ಕಾಳಜಿಯಿಂದ ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಠ ಪ್ರವಚನಗಳಲ್ಲಿ ಭಾಗವಹಿಸಿ ಕುಟುಂಬ ಮತ್ತು ದೇಶಕ್ಕೆ ಹೆಸರು ತರುವ ಕಾರ್ಯ ಮಾಡಲು ಕರೆ ನೀಡಿದರು. ಕಾಡಾ ಅಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ ರಂಗೋತ್ಸವದ ಮೂಲಕ ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳಿಸುವಲ್ಲಿ ನಾಗರಿಕರು ಮತ್ತು ಪೋಷಕರು ಹೆಚ್ಚಿನ ಸಹಕಾರ ನೀಡುವ ಮೂಲಕ ಸರ್ಕಾರಿ ಶಾಲೆಯನ್ನು ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಮುಂದೆತರ ಬೇಕೆಂದು ತಿಳಿಸಿದರು ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಶಾಲೆ ಶೈಕ್ಷಣಿಕ ಉದ್ದೇಶಕ್ಕಾಗಿ ಶಾಲಾ ನೂತನ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ದಾನಿಗಳಾದ ಗೊಲ್ಲರಹಳ್ಳಿ ರಂಗಪ್ಪ ಶಾಲೆಗೆ 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡಲು ₹1 ಲಕ್ಷ
ದತ್ತಿ ನಿಧಿ, ಕಂಪ್ಯೂಟರ್ ಹಾಗೂ ಪ್ರಿಂಟರ್.ನ್ನು ಹಸ್ತಾಂತರಿಸಿದರು.ಶಾಲೆ ಕಾರ್ಯಾಧ್ಯಕ್ಷ ಎಚ್.ವಿಶ್ವನಾಥ್ ಶೈಕ್ಷಣಿಕ ಉದ್ದೇಶಕ್ಕೆ ಎಲ್.ಇ.ಡಿ.ಟೀವಿ ನೀಡಿದರು. ಅಗತ್ಯ ವಿರುವ ದ್ವಜಕಟ್ಟೆಯನ್ನು ನಿರ್ಮಿಸಿಕೊಟ್ಟಿದ್ದು ಉದ್ಘಾಟಯನ್ನು ಸದ್ಯದಲ್ಲೇ ನೆರವೇರಿಸಲಾಗುತ್ತದೆ.ಮುಖ್ಯೋಪಾಧ್ಯಾಯ ಶಿವಾನಂದ್ ಸಿ., ಕೆಡಿಪಿ ಸದಸ್ಯರಾದ ಎಚ್.ಎನ್.ಮಂಜುನಾಥ್ ಲಾಡ್, ಎಚ್.ಯು.ಫಾರೂಕ್, ಮುಡುಗೋಡು ಗ್ರಾಪಂ ಅಧ್ಯಕ್ಷೆ ರೂಪ ಬಿ.ವಿ. ಉಪಾದ್ಯಕ್ಷ ಗೋವಿಂದಸ್ವಾಮಿ, ಎಸ್.ಡಿ.ಎಂ.ಸಿ.ಸದಸ್ಯರು ಮತ್ತು ಶಿಕ್ಷಕ ವೃಂದ ಭಾಗವಹಿಸಿದ್ದರು.22ಕೆಟಿಆರ್.ಕೆ.12ಃತರೀಕೆರೆ ಸಮೀಪದ ರಂಗೇನಹಳ್ಳಿಯಲ್ಲಿ ನಡೆದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ವಾರ್ಷಿಕೋತ್ಸವ, ಚಿಣ್ಣರ ರಂಗೋತ್ಸವವನ್ನು ಶಾಸಕ ಜಿ.ಹೆಚ್.ಶ್ರೀನಿವಾಸ ಉದ್ಘಾಟಿಸಿದರು. ಮುಡುಗೋಡು ಗ್ರಾಪಂ ಅಧ್ಯಕ್ಷೆ ರೂಪ ಬಿ.ವಿ. ಶಾಲೆ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಎಚ್.ವಿಶ್ವನಾಥ್, ದಾನಿಗಳಾದ ಗೊಲ್ಲರಹಳ್ಳಿ ರಂಗಪ್ಪ ಮತ್ತಿತರರು ಇದ್ದರು.