ಕನ್ನಡಪ್ರಭ ವಾರ್ತೆ ಶಿರಾ
ಅವರು ಶಿರಾ ತಾಲೂಕಿನ ಅರೆಹಳ್ಳಿ ಗ್ರಾಮದಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ನೂತನ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ಮಾತನಾಡಿದರು. ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ. ಅವು ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಪೋಷಿಸುವ ಮಹತ್ವದ ಕೇಂದ್ರಗಳು. ಶತಮಾನಗಳಿಂದ ದೇವಸ್ಥಾನಗಳು ಸಮಾಜದಲ್ಲಿ ನೈತಿಕತೆ, ಆತ್ಮಶುದ್ಧಿ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿವೆ. ದೇವಸ್ಥಾನಗಳು ಸಮಾಜವನ್ನು ಒಂದಾಗಿ ಕಟ್ಟುವ ಶಕ್ತಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ದೇವಾಲಯಗಳ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಏಕತೆ ಸ್ಥಾಪನೆಯಾಗುತ್ತದೆ. ನಮ್ಮ ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಕರೆ ನೀಡಿ, ಶ್ರೀ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವು ಮುಂದಿನ ಪೀಳಿಗೆಗೆ ಮೌಲ್ಯಾಧಾರಿತ ಜೀವನಕ್ಕೆ ಪ್ರೇರಣೆಯಾಗಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ರತ್ನಸಂದ್ರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಾಮಾಕ್ಷಿ ಮಂಜುನಾಥ್, ರಂಗನಾಥ್, ರಮೇಶ್, ಶಿವಣ್ಣ, ಗಿರೀಶ್, ಬೊಮ್ಮಣ್ಣ, ಮಂಜುನಾಥ್, ಕಾಂತರಾಜ್ ಸೇರಿದಂತೆ ಹಲವರು ಹಾಜರಿದ್ದರು.