ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರ: ಡಾ.ಸುಜಾತ ಅಕ್ಕಿ

KannadaprabhaNewsNetwork |  
Published : May 11, 2026, 02:00 AM IST
6 | Kannada Prabha

ಸಾರಾಂಶ

2001ರಲ್ಲಿ ಈ ತರಬೇತಿ ಕೇಂದ್ರ ಆರಂಭವಾದ ದಿನಗಳು ಇನ್ನೂ ಮನಸಿನಲ್ಲಿ ಹಸಿರಾಗಿವೆ. ಅಂದಿನ ಶಿಕ್ಷಕರ ಸಮರ್ಪಣೆ, ಶಿಸ್ತು ಮತ್ತು ಪರಿಶ್ರಮ ಇಂದಿನ ತಲೆಮಾರಿನ ಶಿಕ್ಷಕರಿಗೆ ಮಾದರಿಯಾಗಬೇಕು. ಅಂದು ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿರಾವ್ ಫುಲೆ ಅವರ ಬೆಂಬಲದೊಂದಿಗೆ ಅನುಭವಿಸಿದ ಹೋರಾಟ ಮತ್ತು ತ್ಯಾಗವೇ ಇಂದು ಮಹಿಳಾ ಶಿಕ್ಷಣ ಕ್ರಾಂತಿಗೆ ಭದ್ರ ಅಡಿಗಲ್ಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರ ಎಂದು ಸಾಹಿತಿ ಡಾ. ಸುಜಾತ ಅಕ್ಕಿ ತಿಳಿಸಿದರು.

ತಿಲಕ್ ನಗರದಲ್ಲಿರುವ ಹೆಲೆನ್ ಕೆಲ್ಲರ್ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ ಆವರಣದಲ್ಲಿ 2001 ರಿಂದ 2026 ರವರೆಗಿನ ಹಳೆಯ ವಿದ್ಯಾರ್ಥಿಗಳ ಬಳಗವು ಶನಿವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಅಂದು ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿರಾವ್ ಫುಲೆ ಅವರ ಬೆಂಬಲದೊಂದಿಗೆ ಅನುಭವಿಸಿದ ಹೋರಾಟ ಮತ್ತು ತ್ಯಾಗವೇ ಇಂದು ಮಹಿಳಾ ಶಿಕ್ಷಣ ಕ್ರಾಂತಿಗೆ ಭದ್ರ ಅಡಿಗಲ್ಲಾಯಿತು ಎಂದರು.

ಹಿರಿಯ ರಂಗಭೂಮಿ ಕಲಾವಿದೆ ಇಂದಿರಾ ನಾಯರ್ ಮಾತನಾಡಿ, 2001ರಲ್ಲಿ ಈ ತರಬೇತಿ ಕೇಂದ್ರ ಆರಂಭವಾದ ದಿನಗಳು ಇನ್ನೂ ಮನಸಿನಲ್ಲಿ ಹಸಿರಾಗಿವೆ. ಅಂದಿನ ಶಿಕ್ಷಕರ ಸಮರ್ಪಣೆ, ಶಿಸ್ತು ಮತ್ತು ಪರಿಶ್ರಮ ಇಂದಿನ ತಲೆಮಾರಿನ ಶಿಕ್ಷಕರಿಗೆ ಮಾದರಿಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್. ರಾಘವೇಂದ್ರ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ತಯಾರಿಸುವುದು ನಿಜಕ್ಕೂ ಪವಿತ್ರ ಕಾರ್ಯ. ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸ್ಮರಿಸಿ ಗೌರವಿಸುತ್ತಿರುವುದು ಸಮಾಜಕ್ಕೆ ಉತ್ತಮ ಮಾದರಿ ಎಂದು ಶ್ಲಾಘಿಸಿದರು.

ಕಳೆದ ಎರಡೂವರೆ ದಶಕಗಳಿಂದ ಸಾವಿರಾರು ವಿಶೇಷ ಶಿಕ್ಷಕರನ್ನು ರೂಪಿಸಿದ 28 ಹೆಚ್ಚು ಹಿರಿಯ ಹಾಗೂ ಹಾಲಿ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. ಈ ವೇಳೆ ಆಶಾ ವಿ. ಹಿರೇಮಠ, ಎನ್.ಆರ್. ವಿಜಯ್, ಎಸ್. ಗಿರೀಶ್, ಅನ್ನಪೂರ್ಣ, ಡಾ. ಸಂಗೀತಾ, ಮಂಜುಳಾ ಪಾಟೀಲ್, ಸಿಸ್ಟರ್ ಲೀನಾ, ಎ. ಸುರೇಶ್ ಮೊದಲಾದವರನ್ನು ಸನ್ಮಾನಿಸಲಾಯಿತು.

ಅಂಧ ಮಕ್ಕಳ ಶಾಲೆಯ ಅಧೀಕ್ಷಕ ಕೆ.ಎಸ್. ಸತೀಶ್, ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಅಧೀಕ್ಷಕ ಮೀರಜ್, ಬಳಗದ ಮುರುಳಿ, ರಂಗನಾಥ್, ತಾರಾಮಣಿ, ಸುರೇಶ್, ಶಾಂಭವಿ ಸ್ವಾಮಿ, ಕನ್ಯಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ಇಂಜಿನಿಯರ್, ವಿಜ್ಞಾನಿಗಳ ಕೊಡುಗೆ ಅಪಾರ: ಡಾ.ನೀರಜ್ ಕುಮಾರ್
ಮದರಸಗಳ ಆಧುನೀಕರಣಕ್ಕೆ ಕ್ರಮ ವಹಿಸಿ: ಡಿಸಿ