ಕನ್ನಡಪ್ರಭ ವಾರ್ತೆ ಮೈಸೂರು
ಈ ಕಾರ್ಯಕ್ರಮವನ್ನು ಸಂಸ್ಕೃತ ವಿವಿ ಕುಲಪತಿ ಡಾ. ಅಹಲ್ಯಾ ಶರ್ಮ ಉದ್ಘಾಟಿಸಿದರು. ಖ್ಯಾತ ವೈಣಿಕರಾದ ವಿದ್ವಾನ್ ಡಾ.ರಾ. ವಿಶ್ವೇಶ್ವರನ್ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ವಿದ್ವಾನ್ ರಾಜೇಶ್ವರಶಾಸ್ತ್ರಿ ಜೋಶಿ ಅವರಿಗೆ ಶ್ರೀವಿದ್ಯಾಶಾಸ್ತ್ರ ಸೂರಿ ಪ್ರಶಸ್ತಿ, ಭರತನಾಟ್ಯ ಕಲಾವಿದೆ ಡಾ. ವಸುಂಧರ ದೊರೆಸ್ವಾಮಿ, ಕರ್ನಾಟಕ ಸಂಗೀತಗಾರ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮತ್ತು ಭಾರತೀಯ ಶಾಸ್ತ್ರಜ್ಞ ಡಾ. ಗ್ವೀಡೋ ಜಾಂಡರೀಗೋ (ವರ್ಚ್ಯುವಲ್ ಮೂಲಕ) ಅವರಿಗೆ ರಾಸ ಸಂಸ್ಮರಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬಳಿಕ ವಿದ್ವಾನ್ ಡಾ.ರಾ. ಸತ್ಯನಾರಾಯಣ ಅವರ ಶ್ರೀವಿದ್ಯಾಷೋಡಶಿಕಾ- ತ್ರಯೀ ಚಿತ್ಕಲಾ, ಪಿ.ವಿ. ಕಾಣೆಯವರ ಹಿಸ್ಟರಿ ಆಫ್ ಧರ್ಮಶಾಸ್ತ್ರ ಕೃತಿ ಅನುವಾದಗಳಾದ ಹಿಂದೂ ಧರ್ಮಶಾಸ್ತ್ರಗಳಲ್ಲಿ ವಿವಾಹ, ಹಿಂದೂ ಧರ್ಮಶಾಸ್ತ್ರಗಳಲ್ಲಿ ಶ್ರಾದ್ಧ, ಡಾ.ರಾ.ಸ. ನಂದಕುಮಾರ ಅವರ ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಶ್ರೀಪಾದರಾಜರು ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ವಿಧಾನಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಐಜಿಎನ್ ಸಿಎ ನಿವೃತ್ತ ನಿರ್ದೇಶಕ ಡಾ. ವಿಜಯ್ ಶಂಕರ್ ಶುಕ್ಲಾ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಿಇಒ ಸವಿತಾ ಸುಲುಗೋಡು, ಬ್ರಹ್ಮವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ.ರಾ.ಸ. ನಂದಕುಮಾರ ಮೊದಲಾದವರು ಇದ್ದರು.