ರೋಟರಿ ಕ್ಲಬ್‌ ಸಮಾಜಮುಖಿ, ಜನಮುಖಿ ಕಾರ್ಯ ಶ್ಲಾಘನೀಯ

KannadaprabhaNewsNetwork |  
Published : Feb 25, 2025, 12:51 AM IST
ಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟಿಸಿದರು.  | Kannada Prabha

ಸಾರಾಂಶ

ಮನುಷ್ಯನ ಸರ್ವ ಇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಮಹತ್ವದ ಅಂಗವಾಗಿದ್ದು ಕಣ್ಣಿನ ಸಂರಕ್ಷಣೆ, ಕಾಳಜಿ ವಹಿಸಬೇಕು. ಈ ವಿಷಯದಲ್ಲಿ ರೋಟರಿ ಕ್ಲಬ್‌ನವರು ಮಾಡುತ್ತಿರುವ ಸಮಾಜಮುಖಿ ಕೆಲಸ ಕಾರ್ಯಗಳು ಶ್ಲಾಘನೀಯ ಎಂದು ಗದಗ ತೋಂಟದಾರ್ಯ ಮಠದ ಜ.ಡಾ. ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಗದಗ: ಮನುಷ್ಯನ ಸರ್ವ ಇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಮಹತ್ವದ ಅಂಗವಾಗಿದ್ದು ಕಣ್ಣಿನ ಸಂರಕ್ಷಣೆ, ಕಾಳಜಿ ವಹಿಸಬೇಕು. ಈ ವಿಷಯದಲ್ಲಿ ರೋಟರಿ ಕ್ಲಬ್‌ನವರು ಮಾಡುತ್ತಿರುವ ಸಮಾಜಮುಖಿ ಕೆಲಸ ಕಾರ್ಯಗಳು ಶ್ಲಾಘನೀಯ ಎಂದು ಗದಗ ತೋಂಟದಾರ್ಯ ಮಠದ ಜ.ಡಾ. ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಗದುಗಿನ ಉಷಾದೇವಿ ಜಿ. ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್‌ದಲ್ಲಿ ರೋಟರಿ ಕ್ಲಬ್ ಗದಗ ಬೆಟಗೇರಿ ವೇಲ್ಫೇರ್ ಸೊಸೈಟಿ ಹಾಗೂ ಗದಗ-ಬೆಟಗೇರಿ ರೋಟರಿ ಕ್ಲಬ್, ನೀಲಮ್ಮ ಪ್ರಭಣ್ಣ ಹುಣಶಿಕಟ್ಟಿ ಅವರ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ 200ನೇ ನಿರಂತರ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದರು. ರೋಟರಿ ಕ್ಲಬ್ ಸಮಾಜಮುಖಿಯಾಗಿ, ಜನಮುಖಿಯಾಗಿ ಸೇವೆ ಮಾಡುವುದರಲ್ಲಿ ತನ್ನ ಹಿರಿಮೆಯನ್ನು ಮೆರೆದಿದೆ. ಜನತೆಯ ಆರೋಗ್ಯ ಸುಧಾರಣೆ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ರೋಟರಿ ಪದಾಧಿಕಾರಿಗಳು ತಮ್ಮನ್ನು ಸೇವಾ ಕಾರ್ಯಕ್ಕೆ ಸಮರ್ಪಿಸಿಕೊಂಡಿರುವದು ಎಲ್ಲರಿಗೂ ಅನುಕರಣೀಯ

ಈ ಮೊದಲು ಗೋದಾನ, ಭೂದಾನ, ಅನ್ನದಾನ, ರಕ್ತದಾನ, ನೇತ್ರದಾನ ಇತ್ತೀಚೆಗೆ ದೇಹದಾನ ಹೀಗೆ ದಾನಗಳ ವಿಸ್ತಾರವು ಹೆಚ್ಚುತ್ತಿದ್ದು ದಾನಗುಣಕ್ಕೆ ಹೊಸ ಪರಿಕಲ್ಪನೆಯೂ ಬಂದಿದೆ. ಆ ಮೂಲಕ ಸಮಾಜಕ್ಕೆ ಒಳಿತಾಗುತ್ತ ಬಂದಿದೆ. ಆಧುನಿಕತೆಯ ಇಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ವೈದ್ಯಕೀಯ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳು, ಅತ್ಯಾಧುನಿಕ ಯಂತ್ರೋಪಕರಣಗಳು ಜನರ ಆರೋಗ್ಯವನ್ನು ಸುಧಾರಿಸುವಲ್ಲಿ ಗಣನೀಯ ಪಾತ್ರ ವಹಿಸಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ.ಶೇಖರ ಸಜ್ಜನರ ಮುಂತಾದವರು ಮಾತನಾಡಿದರು. ಉಚಿತ ನೇತ್ರ ಶಸ್ತ್ರಶಿಬಿರಗಳು ಯಶಸ್ವಿಯಾಗಿ ನಡೆದು ಬರಲು ಕಾರಣರಾದ ದಾನಿಗಳು, ವೈದ್ಯರು ಮತ್ತು ಸಿಬ್ಬಂದಿಯನ್ನು ಗೌರವಿಸಲಾಯಿತು. ವೇದಿಕೆಯ ಮೇಲೆ ಶಿಬಿರದ ಪ್ರಾಯೋಜಕರಾದ ನೀಲಮ್ಮ ಪ್ರಭಣ್ಣ ಹುಣಶಿಕಟ್ಟಿ ದಂಪತಿಗಳು ಉಪಸ್ಥಿತರಿದ್ದರು.

ಕುಂದ್ರಾಳಹಿರೇಮಠ ಪ್ರಾರ್ಥಿಸಿದರು, ರೋಟರಿ ಕ್ಲಬ್ ಅಧ್ಯಕ್ಷ ಡಾ.ಆರ್.ಬಿ.ಉಪ್ಪಿನ ಸ್ವಾಗತಿಸಿದರು. ಡಾ.ಉಮೇಶ ಪುರದ ಹಾಗೂ ವಿಶ್ವನಾಥ ಯಳಮಲಿ ಪರಿಚಯಿಸಿದರು. ಶ್ರೀಧರ ಸುಲ್ತಾನಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಕಾಮತ್ ನಿರೂಪಿಸಿದರು. ಶಿವಾಚಾರ್ಯ ಹೊಸಳ್ಳಿಮಠ ವಂದಿಸಿದರು.

ಡಾ.ವಿಜಯಕುಮಾರ ಸಜ್ಜನರ, ಡಾ. ಬಸರಿಗಿಡದ, ಡಾ.ವ್ಹಿ.ಬಿ. ಹಿರೇಮಠ, ಡಾ. ಮೇರವಾಡೆ, ಡಾ. ರಾಕೇಶ, ಡಾ.ಜಿ.ಬಿ. ಪಾಟೀಲ, ಡಾ. ಜ್ಯೋತಿ ಪಾಟೀಲ, ಕಾರ್ಯದರ್ಶಿ ಸಂತೋಷ ಅಕ್ಕಿ, ಡಾ. ಪ್ರದೀಪ ಉಗಲಾಟದ, ಶ್ರೀಧರ ಧರ್ಮಾಯತ, ಸಂಜಯ ಬಾಗಮಾರ, ಅರವಿಂದಸಿಂಗ್ ಬ್ಯಾಳಿ, ಚನ್ನವೀರಪ್ಪ ಹುಣಶಿಕಟ್ಟಿ, ನರೇಶ್ ಜೈನ್, ಎಚ್.ಎಸ್. ಪಾಟೀಲ, ಚೇಂಬರ್ ಅಧ್ಯಕ್ಷ ತಾತನಗೌಡ ಪಾಟೀಲ, ನಾಗರತ್ನಾ ಮಾರನಬಸರಿ, ಪ್ರೀತಿ ಶಿವಪ್ಪಯ್ಯನಮಠ, ರಾಣಿ ಚಂದಾವರಿ ಸೇರಿದಂತೆ ರೋಟರಿ, ಇನ್ನರ್‌ವ್ಹೀಲ್ ಕ್ಲಬ್‌ನ ಸದಸ್ಯರು ಸೇರಿದಂತೆ ನೇತ್ರಚಿಕಿತ್ಸಾ ಫಲಾನುಭವಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!
ಬಂಗಾಳಕ್ಕೆ ದೀದಿ, ತಮಿಳ್ನಾಡಿಗೆ ಅಣ್ಣಾ, ಅಸ್ಸಾಂಗೆ ಮಾಮಾ, ಕೇರಳಕ್ಕೆ ದಾದಾ!