ಅದ್ಭುತ ಸಾಧನೆ ಮೆರೆದ ಕರಡ್ಯಾಳ ಗುರುಕುಲದ ಗ್ರಾಮೀಣ ಪ್ರತಿಭೆಗಳು

KannadaprabhaNewsNetwork |  
Published : Apr 26, 2024, 12:46 AM IST
ಚಿತ್ರ 25ಬಿಡಿಆರ್‌6ಭಾಲ್ಕಿ ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು. | Kannada Prabha

ಸಾರಾಂಶ

ವಿದ್ಯಾರ್ಥಿಗಳಾದ ಅಶ್ವಿನ್‌ ನಾಗೇಶ 99.71, ಅಖಿಲೇಶ ರಮೇಶ 99.63, ಆರ್ಯನ್‌ ರಾಮಕೃಷ್ಣ 99.06 ಪರ್ಸೆಂಟೈಲ್‌ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಭಾಲ್ಕಿ

ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್‌ ನಾರಾ ಜೆಇಇ ಪರೀಕ್ಷೆಯಲ್ಲಿ 99.78 ಪರ್ಸೆಂಟೈಲ್‌ ಪಡೆದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪ್ರತಿಮ ಸಾಧನೆ ಮೆರೆದಿದ್ದಾನೆ.

ವಿದ್ಯಾರ್ಥಿಗಳಾದ ಅಶ್ವಿನ್‌ ನಾಗೇಶ 99.71, ಅಖಿಲೇಶ ರಮೇಶ 99.63, ಆರ್ಯನ್‌ ರಾಮಕೃಷ್ಣ 99.06 ಪರ್ಸೆಂಟೈಲ್‌ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ಸಾಧಕರ ವಿವರ:

ಶರಣಬಸವ ಶೇಶಪ್ಪಾ 98.79, ಸಂತೋಷಿ ಮಲ್ಲಿಕಾರ್ಜುನ 98.71, ಆಕಾಶ ಸಿದ್ದಪ್ಪ 98.69, ಕಿರಣಕುಮಾರ 98.69, ರೋಹಿತ ದಿನೇಶ 98.48, ಮಹೇಂದ್ರ ನಾಗೇಂದ್ರ 98.43, ಸಾಯಿಕುಮಾರ ರಾಜಕುಮಾರ 98.40, ಸಂತೋಷಿ ಸಂಜೀವಕುಮಾರ 98.35, ಮಲ್ಲಿಕಾರ್ಜುನ ಬಸಪ್ಪ 98.34, ಆದಿತ್ಯ ಸುನೀಲಕುಮಾರ 97.92, ಸಂದೇಶ ನಾಗರೆಡ್ಡಿ 97.87, ಸನತ್‌ ಶರಣಪ್ಪ 97.87, ವಿವೇಕ ತ್ರಿಂಬಕ್‌ 97.69, ಸಾರ್ಥಕ ಅನೀಲಕುಮಾರ 97.51, ಮೋಹಿತ್‌ ಕಾಶಿ ಮನೋಹರ 97.39, ಸ್ವರಾಜ ರಾಜಶೇಖರ 97.34, ರವಿಚಂದ್ರ ಶ್ರೀನಿವಾಸ 97.22, ವರುಣ ವೈಜಿನಾಥ 97.20, ಪುಟ್ಪಕ್‌ ವೆಂಕಟ್‌ 97, ಗುರುಬಸವ ಬಸಪ್ಪ ಮಾಳಗೆ 97, ಸುಮಿತ್‌ ಗುಣವಂತ 97, ಅಭಿಷೇಕ ಬಸವರಾಜ 97, ಆದಿನಾಥ ಅಂಗದ್‌ 96.91, ವರ್ಧನ ವೆಂಕಟೇಶ 96.91, ಬಸವಪ್ರಸಾದ ಮೋಹನರೆಡ್ಡಿ 96.84, ಪ್ರಭುಗೌಡ ಶರಣಗೌಡ 96.78, ವಿರೇಶ ಚಂದ್ರಶೇಖರ 96.43, ವಿರೇಂದ್ರ ಬಸವರಾಜ 96.12, ಸುಮಿತ್‌ ರಾಜಕುಮಾರ 96.03, ಸಾಕ್ಷಿ ಜಾಧವ 96, ಅವಿನಾಶ ನಾಗಪ್ಪ 96, ಅಭಿನವ ಪ್ರವೀಣಕುಮಾರ 95.91, ಅಲ್ತಾಫ್‌ ಖಲೀಲ್‌ 95.85, ಪ್ರಕಾಶ ನಾಗನಗೌಡ 95.81, ಅವಿನಾಶ ವಿಶ್ವನಾಥ 95.78, ಅಮರನಾಥ ರಾಜಕುಮಾರ 95.72, ಭರತ ಮಾರುತಿ 95.64, ಪ್ರಾರ್ಥನಾ ವಿಶ್ವನಾಥ 95.61, ಆಲೋಕ ಕಿಶೋರ 95.60, ಗಣೇಶ ಮಧುಕರ್‌ 95.46, ಅಕ್ಷತಾ ಶ್ರೀಶೈಲ್‌ 95.32, ವಿಶಾಲ ವೇದಪ್ರಕಾಶ 95.16, ಆದರ್ಶಕುಮಾರ ಶಿವಕುಮಾರ 95.13, ಅಭಿಷೇಕ ರಮೇಶಕುಮಾರ 95.08, ಆಕಾಶ ಅನಂತ 95 ಪರ್ಸೆಂಟೈಲ್‌ ಸೇರಿದಂತೆ ಸುಮಾರು 200 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ ಪರೀ ಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಶೈಕ್ಷಣಿಕ ನಿರ್ದೇಶಕ ಶ್ರೀನಿವಾಸರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಸಂಪನ್ಮೂಲ ಪ್ರಾಧ್ಯಾಪಕರಿಂದ ಜೆಇಇ ತರಬೇತಿ ನೀಡಿ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಮಹೋನ್ನತ ಸಾಧನೆ ಮಾಡುವಂತೆ ಪ್ರೇರೇಪಿಸುತ್ತಿರುವ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಇದರ ಕೀರ್ತಿ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಗುರುಕುಲ ಕಾಲೇಜಿಗೆ ಸಲ್ಲುತ್ತದೆ.

ಡಾ. ಬಸವಲಿಂಗ ಪಟ್ಟದ್ದೇವರು, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ಫೋಸಿಸ್ ಮಾರಿದ್ದ ಜಮೀನು ನೋಂದಣಿ ಮಾಡಿಕೊಟ್ಟ ಸಬ್ ರಿಜಿಸ್ಟ್ರಾರ್ ಅಮಾನತು
ಬಳ್ಳಾರಿ ಗನ್‌ಮ್ಯಾನ್‌ ಸೇರಿ ಕೈ, ಬಿಜೆಪಿಯ 26 ಜನ ಸೆರೆ