ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ವಿವಿಧ ಅಂಗಡಿಗಳಲ್ಲಿ 20 ಸಾವಿರಕ್ಕೂ ಹೆಚ್ಚು ಶ್ರೀರಾಮ ಭಾವಚಿತ್ರವುಳ್ಳ ಕೆಸರಿ ಧ್ವಜಗಳು ಮಾರಾಟಕ್ಕೆ ಬಂದಿದ್ದು, ಮಂಗಳೇಶ್ವರಿ ಅಂಗಡಿಯಲ್ಲಿ ಒಂದು ಮೀಟರ್ ಅಳತೆಯ ಸಾವಿರ, 2 ಮೀಟರ್ ಅಳತೆಯ ಸಾವಿರ ಹಾಗೂ 5 ಮೀಟರ್ ಅಳತೆಯ 500 ಧ್ವಜಗಳು ಮಾರಾಟಕ್ಕೆ ಸಿದ್ಧಗೊಳಿಸಿದ್ದಾರೆ. ಈ ಕೇಸರಿ ಧ್ವಜಗಳನ್ನು ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆ ಬದಿಯಲ್ಲಿ,ವೃತ್ತಗಳಲ್ಲಿ ಅಳಡಿಸುವ ಮೂಲಕ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲು ಪಟ್ಟಣದ ಬಿಜೆಪಿ ಮುಖಂಡರು, ಅಭಿಮಾನಿಗಳು ತಯಾರಿ ನಡೆಸಿದ್ದಾರೆ.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶ್ರೀರಾಮ ಪೂಜೆಯೊಂದಿಗೆ ಅನ್ನಪ್ರಸಾದ ಸೇವೆಗೂ ಸಜ್ಜುಗೊಳಿಸಿದ್ದಾರೆ. ಪಟ್ಟಣದ ಬಸವೇಶ್ವರ ವೃತ್ತ, ಸಿಂದಗಿ ರಸ್ತೆಯ ಬಸವರಾಜೇಂದ್ರ ದೇವಾಲಯ, ಶಾಂತೇಶ್ವರ ದೇವಾಲಯ, ಹಿರೇಇಂಡಿ ಹನುಮಾನ ದೇವಸ್ಥಾನ, ಬೀರಪ್ಪ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಹಾಗೂ ಅನ್ನಪ್ರಸಾದದ ವ್ಯವಸ್ಥೆ ಸಂಘಟಿಕರು ಮಾಡಿದ್ದಾರೆ.ಜ.22 ರಂದು ನಡೆಯುವ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನದ ಪ್ರಯುಕ್ತ ಪಟ್ಟಣದ ಮಂಗಳೇಶ್ವರಿ ಜನರಲ್ ಸ್ಟೋರ್ ವತಿಯಿಂದ ಎಲ್ಲ ಬಗೆಯ ಪಟಾಕಿಗಳ ಮೇಲೆ ಶೇ.20 ರಷ್ಟು ರಿಯಾಯತಿ ನೀಡುವುದರ ಮೂಲಕ ಪಟಾಕಿ ಖರೀದಿಸುವವರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.