ಧಾರವಾಡ:
ಜಿಲ್ಲಾ ಪೊಲೀಸ್ ಡಿಎಆರ್ ಕೇಂದ್ರ ಸ್ಥಾನದ ಕವಾಯತ ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಸೋಮವಾರ ಉದ್ಘಾಟಿಸಿದ ಅವರು, ಕರ್ನಾಟಕ ಪೊಲೀಸ್ ಇಲಾಖೆ ಇಡೀ ದೇಶದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನ ಬಳಕೆ, ಸೈಬರ್ ಅಪರಾಧಗಳ ಪತ್ತೆ, ವಿಧಿವಿಜ್ಞಾನ ಹಾಗೂ ಇತ್ತೀಚಿನ ಆರ್ಥಿಕ ಅಪರಾಧಗಳ ತನಿಖೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಜತೆಗೆ ಅಪಾಯದಲ್ಲಿ ಇರುವವರಿಗೆ ಧೈರ್ಯ ತುಂಬುವುದು, ಸಮಾಜಘಾತುಕ ಶಕ್ತಿಗಳು ಪ್ರಚೋದನೆ ನೀಡಿದ ಸಂದರ್ಭದಲ್ಲಿಯೂ ಸಂಯಮದಿಂದ ವರ್ತಿಸುವುದು ಹಾಗೂ ಪ್ರತಿಯೊಬ್ಬರೊಂದಿಗೆ ಮಾನವೀಯತೆ ಮತ್ತು ಸೂಕ್ಷ್ಮತೆಯಿಂದ ನಡೆದುಕೊಳ್ಳುವುದು ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಣೆಯ ವಿಶೇಷತೆ ಎಂದರು.
ಇಲಾಖೆಯ ಕರ್ತವ್ಯ ಅತ್ಯಂತ ಜವಾಬ್ದಾರಿಯುತ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪೊಲೀಸ್ ಠಾಣೆಗೆ ಬಂದಾಗ ಅವರನ್ನು ಗೌರವದಿಂದ ಮಾತನಾಡಿಸಿ, ಅವರ ಕಷ್ಟಗಳನ್ನು ಆಲಿಸುವ ಕೆಲಸವನ್ನು ಪೊಲೀಸರು ಮಾಡಬೇಕು. ಮಧ್ಯರಾತ್ರಿ, ಹಬ್ಬದ ದಿನ ಅಥವಾ ಕುಟುಂಬದೊಂದಿಗೆ ಊಟ ಮಾಡುವ ಸಮಯದಲ್ಲಿಯೂ ತುರ್ತು ಕರೆ ಬಂದರೆ ತಕ್ಷಣ ಪೊಲೀಸರು ಸ್ಪಂದಿಸಬೇಕಾಗುತ್ತದೆ. ಇಂತಹ ಕರ್ತವ್ಯ ನಿಷ್ಠೆ ಮತ್ತು ತ್ಯಾಗದ ಮನೋಭಾವ ಪೊಲೀಸ್ ಇಲಾಖೆಯ ವಿಶೇಷತೆ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಪ್ರಾಸ್ತಾವಿಕ ಮಾತನಾಡಿದರು. ಕ್ರೀಡಾಕೂಟಕ್ಕೆ ರಂಜಿತಾ ಆಲಗುಂಡಿ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿದರು. ಭದ್ರಾ ತಂಡದ ನಾಯಕ ಆರ್‌ಎಸ್‌ಐ ಗಿರೀಶ ಜುಂಜೂರಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಸಹಕಾರ ಸ್ಮರಣೆ..
ವಸಂತ ರೆಡ್ಡಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ