ಚಿಂಚೋಳಿ: ಪಟ್ಟಣದಲ್ಲಿ ಹಾರಕೂಡ ಚೆನ್ನಬಸವೇಶ್ವರ ತಾಲೂಕು ಹವ್ಯಾಸಿ ಕಲಾವಿದರ ನಾಟ್ಯ ಸಂಘವು ಕಳೆದ ೩೫ ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಎಲೆಮರೆಕಾಯಿಯಾಗಿದ್ದ ಕಲಾವಿದರನ್ನು ಗುರುತಿಸಿ ಅವಕಾಶ ನೀಡಿ ಅವರಲ್ಲಿದ್ದ ಕಲೆ ಪ್ರದರ್ಶಿಸಲು ಅವಕಾಶ ಕೊಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಉದ್ಯಮಿ ರಮೇಶ ತಿಪ್ಪನೋರ ಹೇಳಿದರು.
ಸಾಮಾಜಿಕ ನಾಟಕಗಳು ಹಳ್ಳಿಯ ಜನರ ಮನಸೂರೆಗೊಳಿಸುತ್ತಿವೆ. ಧಾರ್ಮಿಕ, ಶರಣರ ಜೀವನ ಚರಿತ್ರೆವುಳ್ಳ ನಾಟಕಗಳು ನಮಗೆ ದಾರಿದೀಪವಾಗಿವೆ. ನಾಟಕದಲ್ಲಿ ಪ್ರದರ್ಶನಗೊಳ್ಳುವ ಒಂದೊಂದು ದೃಶ್ಯವು ನಮ್ಮನ್ನು ಕಾತುರವಾಗಿ ಕಾಣುತ್ತವೆ ಕಲಾವಿದರನ್ನು ಪ್ರೋತ್ಸಾಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ೩೫ ವರ್ಷಗಳಿಂದ ವಿವಿಧ ನಾಟಕಗಳನ್ನು ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಅಳ್ಳೋಳ್ಳಿ ಗದ್ದುಗೆ ಮಠದ ಸಿರಸಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಚಂದ್ರಶೇಖರ ಕರಜಗಿ ವಹಿಸಿದ್ದರು. ಉಪಾಧ್ಯಕ್ಷ ಜಗನ್ನಾಥ ಕಟ್ಟಿ, ಮಲ್ಲಿಕಾರ್ಜುನ ಬೀರಾದಾರ,. ಗುರಪ್ಪಾ ಪಾಟೀಲ,ಬಸವರಾಜ ಪಾಟೀಲ,ರಮೇಶ ಕೊರಿಶೇಟ್ಟಿ, ವಿಶ್ವನಾಥ ಪಾಟೀಲ, ಶಾಂತಕುಮಾರ ಪಾಟೀಲ, ಚಲನಚಿತ್ರ ನಟ ನಿರ್ಮಾಪಕ ಸಿದ್ದುಪಾಟೀಲ, ಗೌತಮ ಪಾಟೀಲ ,ಶ್ರೀಮಂತರಾವ ಮೋತಕಪಳ್ಳಿ ಸೇರಿ ಹಲವರಿದ್ದರು.