ನಿವೃತ್ತ ಸೈನಿಕರ ಸೇವಾ ಕಾರ್ಯ ಪ್ರೇರಣಾದಾಯಕ: ಮಂಜುನಾಥ

KannadaprabhaNewsNetwork |  
Published : Nov 10, 2025, 01:45 AM IST
ಫೋಟೋ : ೯ಕೆಎಂಟಿ_ಎನ್‌ಒವಿ_ಕೆಪಿ೧ : ಪುರಭವನದಲ್ಲಿ ಮಾಜಿ ಸೈನಿಕರ ಸಂಘದ ವಾರ್ಷಿಕೋತ್ಸವವನ್ನು ಮಂಜುನಾಥ ಎಲ್. ನಾಯ್ಕ ಉದ್ಘಾಟಿಸಿದರು. ಡಾ. ರೂಪಾಲಿ, ಡಾ. ಮನೋಜ ನಾಯ್ಕ, ಎ.ಜಿ.ಮಾಸೂರಕ, ಪಿ.ಎಂ.ನಾಯ್ಕ, ಗಣೇಶ ಶಾಸ್ತ್ರಿ, ನಾರಾಯಣ ಗಾವಡಿ ಇತರರು ಇದ್ದರು.  | Kannada Prabha

ಸಾರಾಂಶ

ನಿವೃತ್ತ ಸೈನಿಕರು ಸಂಘಟಿತರಾಗಿ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಸಂಪೂರ್ಣ ಸಮಾಜಕ್ಕೆ ಪ್ರೇರಣಾದಾಯಕವಾಗಿದೆ.

ಕನ್ನಡಪ್ರಭ ವಾರ್ತೆ ಕುಮಟಾ

ನಿವೃತ್ತ ಸೈನಿಕರು ಸಂಘಟಿತರಾಗಿ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಸಂಪೂರ್ಣ ಸಮಾಜಕ್ಕೆ ಪ್ರೇರಣಾದಾಯಕವಾಗಿದೆ ಎಂದು ಉದ್ಯಮಿ ಮಂಜುನಾಥ ಎಲ್. ನಾಯ್ಕ ಹೇಳಿದರು.

ಪಟ್ಟಣದ ಪುರಭವನದಲ್ಲಿ ಭಾನುವಾರ ಮಾಜಿ ಸೈನಿಕರ ಸಂಘದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ಅಂಗಾಂಗ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅತಿಥಿ ವೈದ್ಯರ ಸಂಘದ ಅಧ್ಯಕ್ಷೆ ಡಾ. ರೂಪಾಲಿ ಮಾತನಾಡಿ, ನಿವೃತ್ತ ಸೈನಿಕರ ಶಿಸ್ತು, ಸಮಯಪ್ರಜ್ಞೆ ಮತ್ತು ತ್ಯಾಗಭಾವ ಸಮಾಜಕ್ಕೆ ಮಾದರಿ ಎಂದರು. ಅತಿಥಿ ನೇತ್ರ ತಜ್ಞ ಡಾ. ಮನೋಜ ಎಂ. ನಾಯ್ಕ ಮಾತನಾಡಿ, ಅಂಗಾಂಗ ದಾನದ ನಿರ್ಧಾರವು ಸೈನಿಕರ ಜೀವನದ ನಂತರವೂ ದೇಶ ಸೇವೆಯನ್ನು ಜೀವಂತವಾಗಿರಿಸಿದೆ ಎಂದರು.

ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎ.ಜಿ. ಮಾಸೂರಕರ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪಿ.ಎಂ. ನಾಯ್ಕ, ನಿವೃತ್ತ ವಿಂಗ್ ಕಮಾಂಡರ್ ಗಣೇಶ ಶಾಸ್ತ್ರಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ನಿವೃತ್ತ ಹವಾಲ್ದಾರ ನಾರಾಯಣ ವಿ. ಗಾವಡಿ, ಖಜಾಂಚಿ ನಿವೃತ್ತ ಹವಾಲ್ದಾರ ಗಿರಿಧರ ದೇವರಭಾವಿ, ಸಹ-ಕಾರ್ಯದರ್ಶಿ ನಿವೃತ್ತ ಹವಾಲ್ದಾರ ಸುಧಾಕರ ಟಿ. ನಾಯ್ಕ, ನಿರ್ದೇಶಕರು ನಿವೃತ್ತ ಹವಾಲ್ದಾರ ಮೋಹನ ಡಿ. ನಾಯ್ಕ, ನಿವೃತ್ತ ಮಾಸ್ಟರ್ ವಾರೆಂಟ್ ಆಫೀಸರ್ ಪ್ರೇಮಾನಂದ ಹಳಕಾರ ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಸೈನಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ರೀಡಾ ಸಾಧಕರಾದ ತಾನ್ವಿ ಹೆಗಡೆ, ಸಂದೀಪ ಎನ್. ಗಾವಡಿ, ಹಾಗೂ ಭರತ ವಿ. ಪಟಗಾರ ಇವರಿಗೆ ಗೌರವಿಸಲಾಯಿತು. ಅಂಗಾಂಗ ದಾನ ಘೋಷಿಸಿದ ರಮ್ಯಾ ವಿ. ನಾಯ್ಕ, ಬಾಲಕೃಷ್ಣ ನಾಯ್ಕ, ವೀಣಾ ನಾಯ್ಕ, ನಾಗರಾಜ ನಾಯ್ಕ, ವಿಜಯಾ ನಾಯ್ಕ, ನಾಗೇಶ ಪಟಗಾರ, ನಯನಾ ಪಟಗಾರ, ವಿನಾಯಕ ನಾಯ್ಕ, ರೇಷ್ಮಾ ನಾಯ್ಕ, ನಾರಾಯಣ ಗಾವಡಿ, ಚೇತನಾ ಗಾವಡಿ, ವಿನಾಯಕ ನಾಯ್ಕ, ಮಂಗಲಾ ನಾಯ್ಕ, ಪ್ರಕಾಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ತಾನ್ವಿ ಹೆಗಡೆ ಭರತನಾಟ್ಯದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಿವೃತ್ತ ಸುಬೇದಾರ್ ವಿನಾಯಕ ಡಿ. ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗಣೇಶ ನಾಯ್ಕ ವಂದಿಸಿದರು. ಮಂಜುನಾಥ ನಾಯ್ಕ ನಿರೂಪಿಸಿದರು.

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್