ದಾದಿಯರ ಸೇವೆ ಸ್ಮರಣೀಯ: ಜಗದೀಶ್‌

KannadaprabhaNewsNetwork |  
Published : May 17, 2024, 12:39 AM IST
ಪೊಟೋ೧೬ಸಿಪಿಟಿ೨: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಭಾಂಗಣದಲ್ಲಿ ಆಯೋಜಿಸಿದ್ದ  ವಿಶ್ವದಾದಿಯರ ದಿನಚರಣೆಯನ್ನು ಡಾ.ಜಗದೀಶ್, ಡಾ. ರಾಜ್‌ಕುಮಾರ್ ಹಾಗೂ ಇತರರು ಉದ್ಘಾಟಿಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಆಸ್ಪತ್ರೆಯಲ್ಲಿ ರೋಗಿಗಳ ಶುಶ್ರೂಷೆ ಮಾಡಿ ಅವರು ಸ್ವಸ್ಥರಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ದಾದಿಯರು ಕೂಡ ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು ಎಂದು ನಗರದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಜಗದೀಶ್ ತಿಳಿಸಿದರು.

ಚನ್ನಪಟ್ಟಣ: ಆಸ್ಪತ್ರೆಯಲ್ಲಿ ರೋಗಿಗಳ ಶುಶ್ರೂಷೆ ಮಾಡಿ ಅವರು ಸ್ವಸ್ಥರಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ದಾದಿಯರು ಕೂಡ ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು ಎಂದು ನಗರದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಜಗದೀಶ್ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಭಾಂಗಣದಲ್ಲಿ ಪ್ಲಾರೆನ್ಸ್ ನೈಂಟಿಗೇಲ್ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ವಿಶ್ವದಾದಿಯರ ದಿನಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯುದ್ಧದ ಸಂದರ್ಭದಲ್ಲಿ ಗಾಯಗೊಂಡಿದ್ದ ಜನರಿಗೆ ದೀಪ ಹಿಡಿದು ಆರೈಕೆ ಮಾಡಿದ ಫ್ಲಾರೆನ್ಸ್ ನೈಟಿಂಗೇಲ್ ಸೇವೆ ಸ್ಮರಣೀಯ. ದಾದಿಯರರಿಗೆ ಅವರ ಜೀವನ ಮಾದರಿಯಾಗಿದೆ ಎಂದು ತಿಳಿಸಿದರು.

ಯಾವುದೇ ಆಸ್ಪತ್ರೆ ಇರಲಿ ಅದರ ಯಶಸ್ಸು ಅಲಂಬಿಸಿರುವುದೇ ದಾದಿಯರ ಮೇಲೆ. ದಿನದ ೨೪ ಗಂಟೆಯೂ ರೋಗಿಗಳೊಡನೆ ಇದ್ದು, ಕಾಲ ಕಾಲಕ್ಕೆ ಅವರಿಗೆ ಔಷಧ ಕೊಟ್ಟು ಆರೈಕೆ ಮಾಡುವುದು ದಾದಿಯರು. ಅವರ ಪ್ರಾಮಾಣಿಕ ಸೇವೆಗೆ ಬೆಲೆ ಕಟ್ಟಲಾಗದು. ಕೊರೋನಾ ಸಂದರ್ಭದಲ್ಲಿ ರೋಗಿಯ ಕುಟುಂಬದವರೇ ರೋಗಿಯ ಬಳಿ ಹೋಗಲು ಹಿಂಜರಿಯುತ್ತಿದ್ದ ಕೊರೋನಾ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ರೋಗಿಗಳ ಸೇವೆ ಮಾಡಿದ ದಾದಿಯರನ್ನು ಯಾರು ಮರೆಯಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಮಂಜೇಶ್ ಕುಮಾರ್, ಡಾ. ರಾಜ್‌ಕುಮಾರ್, ಡಾ. ಅಮರೇಶ್, ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ವೇದಮೂರ್ತಿ, ಆಸ್ಪತ್ರೆಯ ಶುಶ್ರೂಷಕಿಯರ ಅಧೀಕ್ಷಕರಾದ ಸರಸ್ವತಿ, ಸ್ವಾಮಿ ಇತರರಿದ್ದರು.ಪೊಟೋ೧೬ಸಿಪಿಟಿ೨: ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ವಿಶ್ವದಾದಿಯರ ದಿನಾಚರಣೆಯನ್ನು ಡಾ.ಜಗದೀಶ್, ಡಾ. ರಾಜ್‌ಕುಮಾರ್‌ ಇತರರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ನೀರು ನೇರ ಬಳಕೆಗಲ್ಲ
ಲಾರಿಗೆ ಕಾರು ಡಿಕ್ಕಿ: ಮೂವರು ಆರ್‌ಎಸ್‌ಐಗಳ ಸಾವು